ಅಮೆರಿಕಾ: ಆ.10ರಂದು ಪೂರ್ವ ಗಾಜಾದ ವಸತಿ ಶಾಲೆಯ ಮೇಲೆ ಏಕಾಏಕಿ ದಾಳಿ ನಡೆಸಿದ ಇಸ್ರೇಲ್, ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿಯ ಜೀವವನ್ನು ಬಲಿಪಡೆಯಿತು. ಈ ಘಟನೆಗೂ ಒಂದು ವಾರ ಹಿಂದೆಯೂ ಇದೇ ರೀತಿ ಗಾಜಾದ ಮೂರು ಶಾಲೆಗಳ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್ ನಡೆಸಿ, 300ಕ್ಕೂ ಅಧಿಕ ಜನರ ಪ್ರಾಣವನ್ನು ಕಸಿದುಕೊಂಡಿತು. ಆದ್ರೆ, ಇದೀಗ ಇಸ್ರೇಲ್ ವಿರುದ್ಧ ಇರಾನ್ ಭಯಂಕರ ದಾಳಿ ನಡೆಸಲು ಸಜ್ಜಾಗಿದೆ ಎಂದು ಅಮೆರಿಕಾದ ಶ್ವೇತಭವನ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ: ರಾಜ್ ತರುಣ್-ಲಾವಣ್ಯ ಪ್ರಕರಣಕ್ಕೆ ಮತ್ತೊಂದು ಶಾಕಿಂಗ್ ಟ್ವಿಸ್ಟ್! ದೂರು ಕೊಟ್ಟವಳ ಮಾಜಿ ಪ್ರೇಮಿ ಅರೆಸ್ಟ್
ಈ ವಿಷಯ ಹೊರಬೀಳುತ್ತಿದ್ದಂತೆ ಎಚ್ಚೆತ್ತುಕೊಂಡ ಯುಎಸ್ ಅಧ್ಯಕ್ಷ ಜೋ ಬೈಡನ್, ನಿನ್ನೆ (ಆ.13) ತಮ್ಮ ಪಶ್ಚಿಮ ರಾಜಧಾನಿಗಳ ನಾಯಕರನ್ನು ಕರೆದು ಇಸ್ರೇಲ್ ಮೇಲೆ ದಾಳಿ ಮಾಡುವ ಇರಾನ್ ಬೆದರಿಕೆ ಸೇರಿದಂತೆ ಪ್ರದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಇಟಲಿ ನಾಯಕರೊಂದಿಗೆ ಅಧ್ಯಕ್ಷರು ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.
"ಪಶ್ಚಿಮ ರಾಜಧಾನಿಗಳು ಇರಾನ್ನ ದೊಡ್ಡ ದಾಳಿಗಳಿನ್ನು ಎದುರಿಸಲು ಸಿದ್ಧರಾಗಿರಬೇಕು" ಎಂದು ಎಚ್ಚರಿಸಿದ್ದಾರೆ. ಪ್ರತ್ಯೇಕವಾಗಿ ಈ ವಾರವೇ ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಲು ಮುಂದಾಗಿದೆ ಎಂದು ಹೇಳಲಾಗಿದ್ದು, ಇರಾನ್-ಇಸ್ರೇಲ್ ಉದ್ವಿಗ್ನತೆ ಮತ್ತಷ್ಟು ಹೆಚ್ಚಬಹುದು. ಇದು ಗಾಜಾ ಒಪ್ಪಂದದ ಮಾತುಕತೆಗಳ ಮೇಲೂ ಭಾರೀ ಪರಿಣಾಮ ಬೀರಬಹುದು ಎಂಬ ಮಾತುಗಳು ಕೂಡ ಕೇಳಿಬಂದಿವೆ,(ಏಜೆನ್ಸೀಸ್).