Zodiac Signs : ಸಾಮಾನ್ಯವಾಗಿ ನಾವು ಒಂದೇ ತಾಯಿಯ ಗರ್ಭದಿಂದ ಹುಟ್ಟಿದ್ದರೂ, ನಮ್ಮಲ್ಲಿ ಪ್ರತಿಯೊಬ್ಬರೂ ನೋಟ, ಬಣ್ಣ, ವಿಶೇಷ ವ್ಯಕ್ತಿತ್ವ ಮತ್ತು ಗುಣಗಳಲ್ಲಿ ವಿಶಿಷ್ಟರು.
ನಮ್ಮ ಗ್ರಹಗತಿ ಆಧಾರದ ಮೇಲೆ ನಮ್ಮ ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯವಾಗಿದೆ. ಒಬ್ಬ ವ್ಯಕ್ತಿಯ ರಾಶಿಚಕ್ರ ಮತ್ತು ನಕ್ಷತ್ರ ಚಿಹ್ನೆಯು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವ್ಯಕ್ತಿತ್ವ, ಪ್ರೇಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆಯೂ ಪ್ರಭಾವ ಬೀರುತ್ತದೆ. ಹೀಗಾಗಿ, ಜ್ಯೋತಿಷ್ಯ ಶಾಸ್ತ್ರ ಪ್ರಮುಖವಾಗಿದೆ.
ಅದೇ ರೀತಿ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ಬಹಳ ಸೂಕ್ಷ್ಮವಾಗಿರುತ್ತಾರೆ. ಈ ರಾಶಿಯವರು ಯಾರಿಗೂ ದ್ರೋಹ ಬಗೆಯುವುದಿಲ್ಲ ಮತ್ತು ಯಾರಿಗೂ ನೋವುಂಟು ಮಾಡುವುದಿಲ್ಲ. ಹಾಗಾದರೆ, ಯಾವ ರಾಶಿಯವರು ಮೃದು ಹೃದಯಿಗಳು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಪ್ರೀತಿ ಮತ್ತು ಪ್ರಣಯದ ಗ್ರಹವಾದ ಶುಕ್ರನ ಆಳ್ವಿಕೆಯ ವೃಷಭ ರಾಶಿಯವರು ಸ್ವಾಭಾವಿಕವಾಗಿಯೇ ತುಂಬಾ ಕರುಣಾಮಯಿಗಳಾಗಿರುತ್ತಾರೆ. ಬೆನ್ನಿಗೆ ಚೂರಿಯಿಂದ ಇರಿದು ಬಳಿಕ ಕ್ಷಮೆ ಕೇಳಿದರೂ ಖಂಡಿತವಾಗಿಯೂ ಕ್ಷಮಿಸುವ ಗುಣವನ್ನು ಹೊಂದಿರುತ್ತಾರೆ. ಅಗತ್ಯವಿದ್ದಾಗ ಅವರು ಹಠಮಾರಿಗಳಾಗಿರಲು ಸಹ ಸಮರ್ಥರಿರುತ್ತಾರೆ. ಅದೇ ರೀತಿ, ಈ ರಾಶಿಚಕ್ರ ಚಿಹ್ನೆಗಳು ಖಂಡಿತವಾಗಿಯೂ ತಮಗೆ ಹಾನಿ ಮಾಡಿದವರಿಗೂ ಸಹಾಯ ಮಾಡುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅವರು ಇತರರನ್ನು ಬೆರಗುಗೊಳಿಸುವ ಜವಾಬ್ದಾರಿ ಮತ್ತು ಕರುಣೆಯನ್ನು ಹೊಂದಿರುತ್ತಾರೆ.
ಪ್ರತಿಯೊಂದು ರಾಶಿಚಕ್ರವು ದೇಹದಲ್ಲಿರುವ ಒಂದು ಶಕ್ತಿ ಕೇಂದ್ರದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದು, ಸಿಂಹವು ಹೃದಯ ಚಕ್ರದೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ, ಈ ರಾಶಿಚಕ್ರ ಚಿಹ್ನೆಯಡಿಯಲ್ಲಿ ಜನಿಸಿದ ಜನರು ಸುಲಭವಾಗಿ ಜೀವನದಲ್ಲಿ ಮುಂದೆ ಸಾಗುತ್ತಾರೆ. ಈ ರಾಶಿಯವರು ಭವ್ಯವಾಗಿ ಕಾಣಿಸಿಕೊಂಡರೂ, ಅವರು ಹೃದಯದಲ್ಲಿ ಮಕ್ಕಳ ಗುಣವನ್ನು ಹೊಂದಿರುತ್ತಾರೆ. ಆಕ್ರಮಣಕಾರಿ ಹುಲಿಯನ್ನು ನೋಡಿ ನಗುವ ಮಗುವಿನಂತೆ ಈ ರಾಶಿಯವರು ದೇಶದ್ರೋಹಿಗಳನ್ನು ಮತ್ತು ಶತ್ರುಗಳನ್ನು ಸಹ ಸುಲಭವಾಗಿ ಕ್ಷಮಿಸುತ್ತಾರೆ.
ತುಲಾ ರಾಶಿಯವರು ಶುಕ್ರ ಗ್ರಹದ ಆಳ್ವಿಕೆಗೆ ಒಳಪಡುವುದರಿಂದ, ಅವರು ಸ್ವಾಭಾವಿಕವಾಗಿ ಮೃದು ಹೃದಯಿಗಳು ಕೂಡ ಆಗಿರುತ್ತಾರೆ. ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದವರಿಗೆ ಸಹಾಯ ಮಾಡುವುದು ಅಗತ್ಯವಾಗಿದ್ದರೆ ಯಾವುದೇ ಹಿಂಜರಿಕೆಯಿಲ್ಲದೆ ಸಹಾಯ ಮಾಡುವ ಗುಣವನ್ನು ಅವರು ಹೊಂದಿರುತ್ತಾರೆ. ಅವರು ತಮ್ಮ ಗುರಿಗಳ ಮೇಲೆ ಹೆಚ್ಚು ಗಮನಹರಿಸಿದ್ದರೂ, ಅವರು ವಾತ್ಸಲ್ಯಕ್ಕೆ ಮಾತ್ರ ಅಧೀನರಾಗಿರುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.