ನ್ಯೂಸ್

'ಕಾಂತಾರ ಚಾಪ್ಟರ್‌ 1' ಚಿತ್ರಕ್ಕೆ 'ರಿಷಬ್‌ ಶೆಟ್ಟಿ' ಪಟ್ಟ ಕಷ್ಟವನ್ನ ಈ 'ಕಾಲು'ಗಳೇ ಹೇಳುತ್ತಿವೆ| Kantara Chapter-1

Kantara Chapter 1: ಅ.02ರಂದು ರಿಲೀಸ್​ ಆದ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ‘ಕಾಂತಾರ ಚಾಪ್ಟರ್ 1’ ಚಿತ್ರತಂಡಕ್ಕೆ ಹೊಸ ಮೈಲಿಗಲ್ಲು ನೀಡಿದ್ದು, ವ್ಯಾಪಕ ಮನ್ನಣೆಯನ್ನು ತಂದುಕೊಟ್ಟಿದೆ. ಇದು ದಿನ ಕಳೆದಂತೆ ಚಿತ್ರವು ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವಲ್ಲಿಯೂ ಯಶಸ್ವಿಯಾಗಿದೆ.

ಇದೀಗ ನಟ ರಿಷಬ್ ಶೆಟ್ಟಿ ಅವರು ಶೂಟಿಂಗ್​ ಸಮಯದಲ್ಲಿ ಊದಿಕೊಂಡಿದ್ದ ಕಾಲುಗಳ ಫೋಟೋವನ್ನು ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಮೂಲಕ ತಮ್ಮ ಸಿನಿಮಾಗಾಗಿ ಅವರು ಎಷ್ಟೊಂದು ಕಷ್ಟಪಟ್ಟಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ.

ರಿಷಬ್​ ಶೆಟ್ಟಿ ಹೇಳಿದ್ದೇನು.?

ಕ್ಲೈಮ್ಯಾಕ್ಸ್ ಶೂಟಿಂಗ್​ನ ಸಮಯದಲ್ಲಿ ಊದಿಸಿಕೊಂಡ ಕಾಲು, ನಿತ್ರಾಣವಾಗಿದ್ದ ದೇಹ ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವಹಾಗೆ ಆಗಿದೆ. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು. ಇದು ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಮಯದಲ್ಲಿ ಊದಿಕೊಂಡ ಕಾಲು, ದಣಿದ ದೇಹ. ಆದರೆ ಇಂದು ಕ್ಲೈಮ್ಯಾಕ್ಸ್ ಲಕ್ಷಾಂತರ ಜನರು ನೋಡುವ ಮತ್ತು ಮೆಚ್ಚುವ ಸಂಗತಿಯಾಗಿದೆ. ನಾವು ನಂಬುವ ದೈವಿಕ ಶಕ್ತಿಯ ಆಶೀರ್ವಾದದಿಂದ ಮಾತ್ರ ಇದು ಸಾಧ್ಯವಾಯಿತು. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ರಿಷಬ್​ ಎಕ್ಸ್​ ಕಾತೆಯಲ್ಲಿ ಬರೆದುಕೊಂಡಿದ್ದಾರೆ.

2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000ಕ್ಕೂ ಹೆಚ್ಚು housefull ಶೋಗಳ ಈ ಅದ್ಭುತ ಪಯಣ. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ನಿಮಗೆ ಸದಾ ಋಣಿ ಎಂದು ರಿಷಬ್​ ಶೆಟ್ಟಿ ಕೃತಜ್ಞತೆಯನ್ನು ತಿಳಿಸಿದ್ದಾರೆ.

ಕಾಂತಾರ ಚಾಪ್ಟರ್​ 1’ ಚಿತ್ರದಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್, ಕಿಶೋರ್​, ರಾಕೇಶ್ ಪೂಜಾರಿ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್​​ ಸಂಗೀತ ನೀಡಿದ್ದು, ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​ನಡಿ ವಿಜಯ್ ಕಿರಂಗದೂರು ನಿರ್ಮಾಣ ಮಾಡಿದ್ದಾರೆ,(ಏಜೆನ್ಸೀಸ್)