ನ್ಯೂಸ್

ಈ 3 ರಾಶಿಯವರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ! ನಿಮ್ಮದೂ ಇದೇ ರಾಶಿನಾ? Zodiac Signs

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಏಕೆಂದರೆ, ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ದಿನಾಂಕ, ರಾಶಿ, ನಕ್ಷತ್ರ ಹಾಗೂ ಗ್ರಹಗಳ ಸ್ಥಾನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ. ಅಲ್ಲದೆ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.

ಅದೇ ರೀತಿ ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ಹಣದ ಮೌಲ್ಯವನ್ನು ಅರಿತುಕೊಳ್ಳುವುದಿಲ್ಲ ಮತ್ತು ಅದನ್ನು ಅಜಾಗರೂಕತೆಯಿಂದ ಖರ್ಚು ಮಾಡುತ್ತಾರೆ. ಹಾಗಾದರೆ, ಯಾವ ರಾಶಿಯವರು ಹಣವನ್ನು ಅಜಾಗರೂಕತೆಯಿಂದ ನೀರಿನಂತೆ ಖರ್ಚು ಮಾಡುವ ಪ್ರವೃತ್ತಿಯನ್ನು ಹೊಂದಿದ್ದಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿಯವರು ಯಾವಾಗಲೂ ತಮ್ಮ ಹಣಕಾಸಿನ ಬಗ್ಗೆ ಅಸಡ್ಡೆ ಭಾವನೆ ಹೊಂದಿರುತ್ತಾರೆ. ಅವರ ಬಳಿ ಒಂದು ನಿರ್ದಿಷ್ಟ ಪ್ರಮಾಣದ ಹಣವಿದ್ದಾಗ, ಅವರು ಅದನ್ನು ಅಲ್ಪಾವಧಿಯ ಸಂತೋಷವನ್ನು ತರುವ ವಿಚಾರಗಳಿಗೆ ಖರ್ಚು ಮಾಡಲು ಆಸಕ್ತಿ ಹೊಂದಿರುತ್ತಾರೆ. ತಮಗೆ ಅಗತ್ಯವಿಲ್ಲದಿದ್ದರೂ ಐಷಾರಾಮಿ ವಸ್ತುಗಳನ್ನು ಖರೀದಿಸಲು ಹಣವನ್ನು ವ್ಯರ್ಥ ಮಾಡುವ ಅಭ್ಯಾಸ ಖಂಡಿತವಾಗಿಯೂ ಇರುತ್ತದೆ. ಭವಿಷ್ಯದ ಬಗ್ಗೆ ಯೋಚಿಸುವುದಕ್ಕಿಂತ ಆ ಕ್ಷಣದಲ್ಲಿ ಸಂತೋಷದಿಂದ ಬದುಕುವುದು ಮುಖ್ಯ ಎಂದು ಈ ರಾಶಿಯವರು ಭಾವಿಸುತ್ತಾರೆ. ಹೀಗಾಗಿ ಹಣವನ್ನು ಎಗ್ಗಿಲ್ಲದೆ ಖರ್ಚು ಮಾಡುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಜನಿಸಿದ ಜನರು ತಮ್ಮ ಯಶಸ್ಸು ಮತ್ತು ಸಂತೋಷವನ್ನು ಜಗತ್ತಿಗೆ ಪ್ರದರ್ಶಿಸುವಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ತಮ್ಮ ಕೈಯಲ್ಲಿ ಎಷ್ಟೇ ಹಣವಿದ್ದರೂ, ತಮ್ಮ ಸ್ಥಾನಮಾನವನ್ನು ಪ್ರದರ್ಶಿಸುವ ಐಷಾರಾಮಿ ವಸ್ತುಗಳನ್ನು ಖರೀದಿಸುವುದನ್ನು ಅವರು ನಿಲ್ಲಿಸಲು ಸಾಧ್ಯವಿಲ್ಲ. ಈ ರಾಶಿಯವರು ತಮ್ಮ ಇಂದ್ರಿಯ ಸುಖಗಳಿಗೆ ನೀಡುವ ಪ್ರಾಮುಖ್ಯತೆಯನ್ನು ತಮ್ಮ ಭವಿಷ್ಯದ ಉಳಿತಾಯಕ್ಕೆ ಎಂದಿಗೂ ನೀಡುವುದಿಲ್ಲ. ಇವರು ಖಂಡಿತವಾಗಿಯೂ ನೀರಿನಂತೆ ಹಣವನ್ನು ವ್ಯರ್ಥ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ.

ತುಲಾ ರಾಶಿ

ತುಲಾ ರಾಶಿಯಲ್ಲಿ ಜನಿಸಿದ ಜನರು ಸಣ್ಣಪುಟ್ಟ ಸಂತೋಷಗಳಿಗಾಗಿ ಬಹಳಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಅವರು ತಮ್ಮ ಆರ್ಥಿಕ ಭವಿಷ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ತಮ್ಮನ್ನು ತಾವು ಸಂತೋಷವಾಗಿಟ್ಟುಕೊಳ್ಳುವುದರ ಮೇಲೆ ಗಮನಹರಿಸದೇ ಇತರರಿಗೆ ಪ್ರದರ್ಶಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅವರ ಪ್ರದರ್ಶನ ಸ್ವಭಾವದಿಂದಾಗಿ, ಅವರು ಖಂಡಿತವಾಗಿಯೂ ಬಹಳಷ್ಟು ಹಣವನ್ನು ಅಜಾಗರೂಕತೆಯಿಂದ ಖರ್ಚು ಮಾಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.