ನ್ಯೂಸ್

ಪ್ರಪಂಚದ ಈ 7 ಸ್ಥಳಗಳಲ್ಲಿ ಮನುಷ್ಯನಿಗೆ ಪ್ರವೇಶವಿಲ್ಲ!; ಎಲ್ಲಿ? ಏಕೆ ಗೊತ್ತೆ? ಇಲ್ಲಿದೆ ಮಾಹಿತಿ.. | Places

Places : ಪೃಥ್ವಿ ಬಹಳ ತುಂಬಾ ಸುದಂರವಾಗಿದೆ. ಭೂಮಿಯ ಮೇಲೆ ವಿಭಿನ್ನ, ವಿಚಿತ್ರ ಮತ್ತು ನಂಬಲಾರ್ಹವಾದ ಬಹತೇಕ ಸ್ಥಳಗಳಿವೆ. ಅಲ್ಲದೆ, ಇದನ್ನು ಕೆಲವರು ನೋಡಿರಬಹುದು ಅಥವಾ ಕೇಳಿರಬಹುದು. ಆದರೆ, ಮನುಷ್ಯರು ಹೋಗುವುದನ್ನು ನಿಷೇಧಿಸಲಾಗಿರುವ ಕೆಲವು ಸ್ಥಳಗಳಿವೆ. ಇವುಗಳಲ್ಲಿ ಕೆಲವು ಸ್ಥಳಗಳು ಅಪಾಯಕಾರಿಯಾಗಿದ್ದು, ಕೆಲವು ಸ್ಥಳಗಳಿಗೆ ನಿಯಮಗಳಿವೆ. ಹೀಗಾಗಿ, ನೀವು ಅಲ್ಲಿಗೆ ಹೋಗಲು ಸಾಧ್ಯವಿಲ್ಲವಂತೆ! ಏಕೆ, ಏನು? ಎಂಬುದು ತಿಳಿಯೋಣ.

1.ಸೀಡ್ ವಾಲ್ಟ್

ಈ ಪಟ್ಟಿಯಲ್ಲಿ ಮೊದಲ ಹೆಸರು ಸೀಡ್ ವಾಲ್ಟ್. ಇದು ಸ್ವಾಲ್ಬಾರ್ಡ್ ಜಾಗತಿಕ ಬೀಜ ಸಂಗ್ರಹಾಲಯಕ್ಕೆ ಮಾತ್ರ ಸೀಮಿತವಾಗಿದ್ದು, ಸಾರ್ವಜನಿಕರಿಗೆ ಪ್ರವೇಶವಿಲ್ಲ. ಇದು ಪ್ರಪಂಚದಾದ್ಯಂತದ ಆಹಾರ ಬೆಳೆಗಳ ಬೀಜಗಳನ್ನು ಭವಿಷ್ಯಕ್ಕಾಗಿ ಸುರಕ್ಷಿತವಾಗಿಡುವ ಸುರಕ್ಷಿತ ಸ್ಥಳವಾಗಿದೆ.

2.ಲಾಸ್ಕಾಕ್ಸ್ ಗುಹೆ

ಲಾಸ್ಕಾಕ್ಸ್ ಗುಹೆ ಫ್ರಾನ್ಸ್‌ನ ನೈಋತ್ಯ ಪ್ರದೇಶದಲ್ಲಿ ನೆಲೆಗೊಂಡಿರುವ ಪ್ಯಾಲಿಯೊಲಿಥಿಕ್ ಗುಹೆಯಾಗಿದೆ. ಇದು ಮ್ಯಾಗ್ಡಲೀನಿಯನ್ ಕಾಲದ ಅಸಾಧಾರಣ ಗುಹಾ ವರ್ಣಚಿತ್ರಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಮನುಷ್ಯರು ಹೋಗುವುದನ್ನು ಸಹ ನಿಷೇಧಿಸಲಾಗಿದೆ.

3.ವ್ಯಾಟಿಕನ್ ಸೀಕ್ರೆಟ್ ಆರ್ಕೈವ್

ವ್ಯಾಟಿಕನ್ ಸೀಕ್ರೆಟ್ ಆರ್ಕೈವ್, ಈಗ ವ್ಯಾಟಿಕನ್ ಅಪೋಸ್ಟೋಲಿಕ್ ಆರ್ಕೈವ್ ಎಂದು ಕರೆಯಲ್ಪಡುತ್ತದೆ. ಅದರೊಳಗೆ ಕ್ಯಾಥೋಲಿಕ್ ಚರ್ಚಿನ ಇತಿಹಾಸ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದ ದಾಖಲೆಗಳ ಒಂದು ದೊಡ್ಡ ಸಂಗ್ರಹವಿದೆ. ಇದು ವ್ಯಾಟಿಕನ್ ನಗರದಲ್ಲಿದೆ. ಜನರು ಇಲ್ಲಿಗೂ ಹೋಗಲು ಸಾಧ್ಯವಿಲ್ಲ.

4.ಸೆಂಟಿನೆಲ್ ದ್ವೀಪ

ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿರುವ ಉತ್ತರ ಸೆಂಟಿನೆಲ್ ದ್ವೀಪಕ್ಕೆ ಹೊರಗಿನವರು ಭೇಟಿ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಲ್ಲಿ ವಾಸಿಸುವ ಸೆಂಟಿನೆಲೀಸ್ ಬುಡಕಟ್ಟು ಜನಾಂಗದವರು ಹೊರಗಿನ ಪ್ರಪಂಚದ ಸಂಪರ್ಕಕ್ಕೆ ಹೆದರುತ್ತಾರೆ ಮತ್ತು ಅವರನ್ನು ಅಪಾಯಕಾರಿ ಎಂದು ಪರಿಗಣಿಸುತ್ತಾರೆ.

5.ಕೋಕಾ-ಕೋಲಾದ ರಹಸ್ಯ

ಕೋಕಾ-ಕೋಲಾದ ರಹಸ್ಯ ಸೂತ್ರವನ್ನು ಅತ್ಯಾಧುನಿಕ ತಂತ್ರಜ್ಞಾನದ ಉಗ್ರಾಣದಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಇದು ಅಟ್ಲಾಂಟಾದಲ್ಲಿರುವ ವರ್ಲ್ಡ್ ಆಫ್ ಕೋಕಾ-ಕೋಲಾ ಮ್ಯೂಸಿಯಂನಲ್ಲಿದೆ. ಜನರು ಇದರಲ್ಲಿಯೂ ಹೋಗಲು ಸಾಧ್ಯವಿಲ್ಲ.

6.ರಹಸ್ಯ ಮಿಲಿಟರಿ ನೆಲೆ

ಅಮೆರಿಕದ ನೆವಾಡಾದಲ್ಲಿರುವ ಏರಿಯಾ 51 ಒಂದು ರಹಸ್ಯ ಮಿಲಿಟರಿ ನೆಲೆಯಾಗಿದೆ. ಇದು ಹೆಚ್ಚಿನ ಭದ್ರತೆಯಿಂದ ಸುತ್ತುವರೆದಿದೆ. ಈ ಸ್ಥಳದ ಬಗ್ಗೆ ಹಲವು ನಿಗೂಢತೆಗಳು ಮತ್ತು ಊಹಾಪೋಹಗಳಿವೆ.

7.ಸ್ನೇಕ್ ಐಲ್ಯಾಂಡ್

ಬ್ರೆಜಿಲ್‌ನಲ್ಲಿರುವ ಸ್ನೇಕ್ ಐಲ್ಯಾಂಡ್, ವಿಶ್ವದ ಅತ್ಯಂತ ಅಪಾಯಕಾರಿ ದ್ವೀಪಗಳಲ್ಲಿ ಒಂದಾಗಿದೆ. ಇಲ್ಲಿ ಸಾವಿರಾರು ವಿಷಪೂರಿತ ಹಾವುಗಳು ವಾಸಿಸುತ್ತವೆ, ವಿಶೇಷವಾಗಿ ಗೋಲ್ಡನ್ ಲ್ಯಾನ್ಸ್‌ಹೆಡ್ ವೈಪರ್. ಭದ್ರತಾ ಕಾರಣಗಳಿಗಾಗಿ ಮತ್ತು ಈ ಹಾವುಗಳನ್ನು ರಕ್ಷಿಸಲು, ಬ್ರೆಜಿಲ್ ಸರ್ಕಾರವು ಈ ದ್ವೀಪಕ್ಕೆ ಸಾಮಾನ್ಯ ಜನರು ಭೇಟಿ ನೀಡುವುದನ್ನು ನಿಷೇಧಿಸಿದೆ.(ಏಜೆನ್ಸೀಸ್​)