ನ್ಯೂಸ್

ತಂದೆಯ ಜತೆಗಿನ ಭಾವನಾತ್ಮಕ ಸಂಬಂಧದ ವಿಡಿಯೋ ಹಂಚಿಕೊಂಡ ದುಬೈ ರಾಜಕುಮಾರಿ; ನೆಟ್ಟಿಗರು ಹೇಳಿದ್ದೇನು ಗೊತ್ತಾ?

ದುಬೈ: ರಾಜಕುಮಾರಿ ಶೇಖ್ ಲತೀಫಾ ಎಂಆರ್ ಅಲ್ ಮಕ್ತೌಮ್ ಅವರು ತಮ್ಮ ತಂದೆ ಯುಎಇಯ ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರೊಂಗಿನ ಬಾಂಧವ್ಯ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವ ವಿಡಿಯೋವೊಂದನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹಂಚಿಕೊಂಡಿರು ವಿಡಿಯೋ ತಂದೆ ಮತ್ತು ಮಕ್ಕಳ ನಡುವಿನ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಶೇಖ್ ಮೊಹಮ್ಮದ್ ಮತ್ತು ಅವರ ಮಗಳ ನಡುವಿನ ಸಂತೋಷದ ಕ್ಷಣಗಳನ್ನು ಒಳಗೊಂಡಿದೆ. ನಿಮ್ಮಂತೆ ಯಾರು ಇಲ್ಲ ಎಂಬ ಶೀರ್ಷಿಕೆ ನೀಡಿ ತಂದೆಯೊಂದಿಗಿನ ವಿಡಿಯೋವನ್ನು ದುಬೈ ರಾಜಕುಮಾರಿ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಅರೇಬಿಕ್​ ಭಾಷೆಯಲ್ಲಿ ಬರೆದಿದ್ದು ಪೋಸ್ಟ್​​ ಮಾಡಿದ್ದಾರೆ. ಶೇಖ್ ಮೊಹಮ್ಮದ್ ಅವರ 26 ಮಕ್ಕಳಲ್ಲಿ ಶೇಖಾ ಲತೀಫಾ ಒಬ್ಬರು.

ವಿಡಿಯೋವನ್ನು 57 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಭಾವನಾತ್ಮಕ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಲೆಜೆಂಡ್ರಿ ಲೀಡರ್​​​ ಅವರ ಹೆಮ್ಮೆಯ ಮಗಳು, ನಿಮ್ಮ ತಂದೆ ಮತ್ತು ಫಜ್ಝಾ ಇಬ್ಬರು ಅಸಾಧಾರಣ ಪುರುಷರು ಲತೀಫಾ, ನೀವು ಕೂಡ ಸ್ಫೂರ್ತಿಯಾಗುವ ಗುಡ್​​ ಸೋಲ್​​​, ಪ್ರತಿ ಮಗಳಿಗೆ ಅವರ ತಂದೆ ಯಾವಾಗಲೂ ಅವಳ ಹೃದಯದಲ್ಲಿ ನಂಬರ್ ಒನ್ ರಾಜನಾಗಿರುತ್ತಾನೆ ಹೀಗೆ ಹಲವು  ಕಾಮೆಂಟ್​​ಗಳನ್ನು ಮಾಡಲಾಗಿದೆ.​

ಶೇಖ್ ಮೊಹಮ್ಮದ್ ಅವರು ತಮ್ಮ ನಾಯಕತ್ವದ ಹೊರತಾಗಿಯೂ ಕುಟುಂಬದೊಂದಿಗಿನ ಸಂಬಂಧಗನ್ನು ಕಾಪಾಡಿಕೊಳ್ಳುವುದಕ್ಕೂ ಹೆಸರುವಾಸಿಯಾಗಿದ್ದಾರೆ. ಅವರ ಮಕ್ಕಳು ಹಂಚಿಕೊಂಡಿರುವ ವಿಡಿಯೋದಲ್ಲಿ ಅದನ್ನು ನೋಡಬಹುದಾಗಿದೆ. ಸಾರ್ವಜನಿಕ ಕೆಲಸದ ಜತಗೆ ತಂದೆಯ ಜವಾಬ್ದಾರಿ ನಿಭಾಯಿಸುತ್ತಿರುವುದನ್ನು ನೋಡಬಹುದಾಗಿದೆ.(ಏಜೆನ್ಸೀಸ್​​​)