| ರಮೇಶ ದೊಡ್ಡಪುರ ಬೆಂಗಳೂರು
ಇತರ ಸಮುದಾಯದವರ ಪ್ರಾರ್ಥನಾ ಮಂದಿರಗಳು ಕಾನೂನಿನಲ್ಲಿ ಸುರಕ್ಷಿತವಾಗಿವೆ ಹಾಗೂ ಸ್ವತಂತ್ರವಾಗಿವೆ. ಆದರೆ ಹಿಂದು ದೇವಾಲಯಗಳು ಸರ್ಕಾರದ ನಿಯಂತ್ರಣದಲ್ಲಿದ್ದು, ಆದಾಯದ ಹಣವನ್ನು ಅಭಿವೃದ್ಧಿಗೆ ಪಡೆಯ ಬೇಕೆಂದರೂ ಅಧಿಕಾರಿಗಳ ಅನುಮತಿ ಪಡೆಯಬೇಕಿದೆ. ಮುಂದಿನ ಬಜೆಟ್ ಅಧಿವೇಶನದೊಳಗೆ ಕಾನೂನು ಕಟ್ಟುಪಾಡುಗಳಿಂದ ಮುಕ್ತಗೊಳಿಸಲಾಗುತ್ತದೆ. ನಿಯಮಾವಳಿ ರೂಪಿಸುವುದನ್ನು ಬಿಟ್ಟರೆ ಆಡಳಿತ ಸ್ವತಂತ್ರವಾಗಿರುತ್ತದೆ ಎಂದು ಹುಬ್ಬಳ್ಳಿ ಕಾರ್ಯಕಾರಿಣಿಯ;ಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಹಿಂದು ದೇವಸ್ಥಾನಗಳನ್ನು ಸರ್ಕಾರದ ಕಪಿಮುಷ್ಠಿಯಿಂದ ಮುಕ್ತಗೊಳಿಸಬೇಕೆಂಬ ಅನೇಕ ವರ್ಷಗಳ ಬೇಡಿಕೆಗೆ ಇದೀಗ ಬೊಮ್ಮಾಯಿ ಅವರ ಮಾತು ಆಶಾದಾಯಕವಾಗಿ ಗೋಚರಿಸಿದೆ.
ಎರಡು ಬಾರಿ ತಿರಸ್ಕೃತ ಕಾಯ್ದೆ: ಧಾರ್ವಿುಕ ಸಂಸ್ಥೆ ನಿಯಂತ್ರಣಕ್ಕೆ ಮೊದಲು ರೂಪಿಸಿದ್ದ ಕರ್ನಾಟಕ ಧಾರ್ವಿುಕ ಸಂಸ್ಥೆಗಳು ಮತ್ತು ಧರ್ವದಾಯ ದತ್ತಿ ಕಾಯ್ದೆ 1997 ಹಾಗೂ ಆನಂತರ 2011, 2012ರಲ್ಲಿ ತಿದ್ದುಪಡಿ ಕಾಯ್ದೆ ರೂಪಿಸಲಾಗಿತ್ತು. ಮೂಲ ಕಾಯ್ದೆಗೆ ಈ ಹಿಂದೆಯೇ ನ್ಯಾಯಾಲಯಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ತಿದ್ದುಪಡಿ ಕಾಯ್ದೆಯೂ ಸಂವಿಧಾನಕ್ಕೆ ಅನುಗುಣವಾಗಿಲ್ಲ ಎಂದ ಹೈಕೋರ್ಟ್ ಧಾರವಾಡ ಪೀಠ, 2015ರಲ್ಲಿ ರದ್ದುಪಡಿಸಿತ್ತು. ಆನಂತರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕರ್ನಾಟಕ ಸರ್ಕಾರ, ಸದ್ಯ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಪಡೆದುಕೊಳ್ಳಲ್ಲಷ್ಟೇ ಶಕ್ತವಾಗಿತ್ತು. ಸಂವಿಧಾನಕ್ಕೆ ಧಕ್ಕೆಯಾಗದಂತೆ ಕಾಯ್ದೆ ರಚನೆ ಮಾಡುವುದಾಗಿ ರಾಜ್ಯ ಸರ್ಕಾರ ಸುಪ್ರೀಂಕೊರ್ಟ್ಗೆ ಭರವಸೆಯನ್ನೂ ನೀಡಿತ್ತು. ಅದರಂತೆಯೇ 2017ರಲ್ಲಿ 6 ಜನರ ಸಮಿತಿ ರಚಿಸಿತ್ತು.
ಅದೇಕೊ ಕೈಚೆಲ್ಲಿದ ಸಮಿತಿ: ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಹಿಂದು ದೇವಸ್ಥಾನಗಳು, ಧಾರ್ವಿುಕ ಸಂಸ್ಥೆಗಳಿವೆ. ಮುಜರಾಯಿ ಇಲಾಖೆ 34 ಸಾವಿರಕ್ಕೂ ಹೆಚ್ಚು ದೇವಸ್ಥಾನ ಗಳನ್ನು ನಿರ್ವಹಿಸುತ್ತಿದೆ. ಹೊಸ ಕಾಯ್ದೆ ರಚನೆಗೆ 2017ರಲ್ಲಿ ರಚಿಸಿದ್ದ ಸಮಿತಿಯು ಧಾರ್ವಿುಕ ಪರಿಷತ್ ಸಭೆಯಲ್ಲಿ ಸ್ಥೂಲವಾಗಿ ಚರ್ಚೆ ನಡೆಸಿತ್ತು. ಕಾನೂನು ವ್ಯಾಜ್ಯದಲ್ಲೇ ಮುಳುಗಿರುವ ಕಾಯ್ದೆ ರದ್ದುಪಡಿಸಿ ಸಮಗ್ರ ಹೊಸ ಕಾಯ್ದೆ ರೂಪಿಸಲು ಅಂದಿನ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಆಗಿನ ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದು ಕೋರಿದ್ದರು. ವಿರೋಧಕ್ಕೆ ಅವಕಾಶವಿರದಂತೆ ಕಾಯ್ದೆ ರೂಪಿಸಲು ನಿರ್ಧರಿಸಲಾಗಿತ್ತು. ಉತ್ತರ ಕನ್ನಡ, ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಮೈಸೂರು ಕರ್ನಾಟಕದ ಪದ್ಧತಿಗಳು ವಿಭಿನ್ನವಾಗಿವೆ. ಧಾರ್ವಿುಕ ವಿಚಾರಗಳು ಸೂಕ್ಷ್ಮ. ಸ್ಥಳೀಯ ನಂಬಿಕೆ, ಸಂಪ್ರದಾಯ, ಶಾಸ್ತ್ರ, ಆಗಮ, ವಾಸ್ತು ಶಿಲ್ಪ ಸೇರಿ ಅನೇಕ ವೈಶಿಷ್ಟ್ಯತೆಗಳಿರುತ್ತವೆ. ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳುವ ರೀತಿಯಲ್ಲಿ ಕಾಯ್ದೆ ರಚನೆಯಾಗಬೇಕು. ಸ್ಥಳೀಯರು, ಕಾನೂನು ತಜ್ಞರು, ಆಗಮಿಕರು, ಅರ್ಚಕರು, ಉಪಾಧಿವಂತರು, ಧಾರ್ವಿುಕ ಮುಖಂಡರು ಸೇರಿ ಎಲ್ಲರ ಜತೆ ವಿಸõತ ಸಮಾಲೋಚನೆ ನಡೆಸಬೇಕು ಎಂದು ತೀರ್ವನಿಸಲಾಗಿತ್ತು. 5-6 ಸಭೆಗಳನ್ನೂ ನಡೆಸಿದ್ದ ಸಮಿತಿ ಆನಂತರದಲ್ಲಿ ಅದೇಕೊ ನಿಷ್ಕ್ರಿಯವಾಗಿದೆ. ಯಾವ ಕಾರಣಕ್ಕೆ ಎನ್ನುವುದು ಇಲಾಖೆ ಅಧಿಕಾರಿಗಳಿಗೂ ತಿಳಿದಿಲ್ಲ.
ಯಾವುದೇ ಕಂಪನಿಯಲ್ಲಿ, ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದರೆ ಸರ್ಕಾರ ಅದನ್ನು ವಶಕ್ಕೆ ಪಡೆದು, ಸರಿಪಡಿಸಿ ಮತ್ತೆ ಪದಾಧಿಕಾರಿಗಳಿಗೆ ಹಸ್ತಾಂತರಿಸುತ್ತದೆ. ಆದರೆ ದೇವಸ್ಥಾನ ವನ್ನು ಒಮ್ಮೆ ವಶಕ್ಕೆ ಪಡೆದರೆ ಅದು ಶಾಶ್ವತವಾಗಿರುತ್ತದೆ. ಸಮಸ್ಯೆ ಸರಿಪಡಿಸಿ ಮತ್ತೆ ಸ್ವತಂತ್ರಗೊಳಿಸಬೇಕು.
| ಕಿರಣ್ ಬೆಟ್ಟದಪುರ ನಮ್ಮ ದೇವಸ್ಥಾನ ಪ್ರತಿಷ್ಠಾನದ ಟ್ರಸ್ಟಿ