ನ್ಯೂಸ್

ಅವಿನಾಶ್​ ಹಾಗೂ ಮಾಳವಿಕಾ ಮಧ್ಯೆ ಇದೆ ಅಧಿಕೃತವಾದ ಒಂದು ಒಪ್ಪಂದ..

ಬೆಂಗಳೂರು: ರಾಜಕೀಯ ಹಾಗೂ ಸಿನಿಮಾಗಳಲ್ಲಿ ತಮ್ಮದೇ ಆಗಿರುವ ಚಾಪು ಮೂಡಿಸಿರುವ ಮಾಳವಿಕಾ ಅವಿನಾಶ್​ ಅವರು ವಿಜಯವಾಣಿ ಡಿಜಿಟಲ್​ನ Face 2 Face ಕಾರ್ಯಕ್ರಮದಲ್ಲಿ ದೇವರು ಕೊಟ್ಟಿರುವ ಪುತ್ರನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.

ಅವಿನಾಶ್ ಹಾಗೂ ಮಾಳವಿಕಾ ದಂಪತಿಗೆ ಗಾಲವ್ ಎಂಬ ಪುತ್ರನಿದ್ದಾನೆ. Wolf hirschhorn Syndrome ನಿಂದಾಗಿ ಗಾಲವ್ ಬಳಲುತ್ತಿದ್ದಾನೆ. ಈ ಸಿಂಡ್ರೋಮ್‌ನಿಂದಾಗಿ ಗಾಲವ್‌ಗೆ ಮಾತು ಬರುವುದಿಲ್ಲ. ತಮ್ಮ ಪುತ್ರನ ಬಗ್ಗೆ ಮಾಳವಿಕಾ ಮಾತನಾಡಿ, ನಾನು ಅವಿನಾಶ್​​ ಅವರನ್ನು 2001 ಫೆಬ್ರುವರಿ 26 ರಂದು ಮದವೆ ಆದೆ. ನಂತರ ಫೆ.27 ರಂದು ನಾನು ಶೂಟಿಂಗ್ ತೆರೆಳಿದೆ. ಅವಿನಾಶ್​ ಕೂಡಾ ಸಿನಿಮಾ ಚಿತ್ರೀಕರಣಕ್ಕೆ ಹೋದರು. ಮದುವೆ ಆದ ದಿನದಿಂದಲೂ ಅವರು ಯಾವತ್ತು ಸಿನಿಮಾ ನಿಲ್ಲಸಿ ಬಿಡು ಅಂತಾ ಯಾವತ್ತು ಹೇಳಿಲ್ಲ. ಯಾವತ್ತು ಯಾವ ವಿಚಾರಕ್ಕೂ ನಿಬಂಧನೆಯನ್ನೇ ಹಾಕಿಲ್ಲ. ಈ ಕುರಿತಾಗಿ ನಾವು ಯಾವತ್ತು ಚರ್ಚೆಯನ್ನೇ ಮಾಡಿಲ್ಲ. ನಾನು ಮಾಡುವುದನ್ನು ನಾನು ಮಾಡುತ್ತೇನೆ ಅವರ ಕೆಲಸ ಅವರು ಮಾಡುತ್ತಾರೆ. ಅವಿನಾಶ್​​ ಅವರ ಜನರೇಷನ್​ನ ಅನೇಕ ಹೆಣ್ಣುಮಕ್ಕಳು ಮದುವೆಯಾಗಿ ಮನೆಯಲ್ಲೇ ಇದ್ದಾರೆ. ಆದರೆ ಅವಿನಾಶ್​ ಯಾವತ್ತು ನನಗೆ ನೀನು ಏನು ಮಾಡಬೇಡಾ ಎಂದಿಲ್ಲ ಎಂದು ಹೇಳಿದ್ದಾರೆ.

ನಮ್ಮ 15 ವರ್ಷದಲ್ಲಿ ನಮ್ಮ ಮನೆಯಲ್ಲಿ ನಮ್ಮಿಬ್ಬರ ಮಧ್ಯೆ ಒಂದು ಅಧಿಕೃತವಾದ ಒಂದು ಒಪ್ಪಂದ ಇದೆ. ರಾಜಕೀಯ ಕಾರ್ಯಕ್ರಮ, ಸಿನಿಮಾ ಶೂಟಿಂಗಾಗಿ ಬೆಂಗಳೂರಿಂದ ಆಚೆ ಹೋಗುವ ಕುರಿತಾಗಿ ಒಂದು ಒಪ್ಪಂದ ಇದೆ. ನಮ್ಮಲ್ಲಿ ಯಾರಾದ್ರು ಒಬ್ಬರು ಮನೆಯಲ್ಲಿ ಇರಬೇಕು. ಹಗಲಿನಲ್ಲಿ ಆಟವಾಡಿಕೊಂಡು ಇರುತ್ತಾರೆ. ಆದರೆ ಮಕ್ಕಳಿಗೆ ಭಯ ಆಗುತ್ತದೆ. ಅಪ್ಪ- ಅಮ್ಮ ಇಬ್ಬರಲ್ಲಿ ಒಬ್ಬರು ಜತೆ ಇರಬೇಕು ಅಂತಾ ಇಷ್ಟ ಪಡುತ್ತಾರೆ. ಹೀಗಾಗಿ ನಾವಿಬ್ಬರು ಒಟ್ಟಿಗೆ ಎಲ್ಲೂ ಹೋಗಲ್ಲ. ಒಂದೇ ಸಿನಿಮಾದಲ್ಲಿ ನಾವಿಬ್ಬರು ಕಾಣಿಸಿಕೊಳ್ಳುವುದು ಕಡಿಮೆ. ಈ ಒಪ್ಪಂದಕ್ಕಾಗಿ ಮಗನಿಗಾಗಿ ಸಿನಿಮಾ, ಕಾರ್ಯಕ್ರಮ ಯಾವುದನ್ನಾದರು ಬಿಡಲು ನಾವು ಸಿದ್ಧವಾಗಿರುತ್ತೇವೆ ಎಂದು ತಿಳಿಸಿದ್ದಾರೆ.

ಅವಿನಾಶ್​​ ತುಂಬಾ ಕೂಲ್​​ ಮನುಷ್ಯ. ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ರಾಜಕೀಯ ಇಷ್ಟವಾಗಲ್ಲ. ರಾಷ್ಟ್ರೀಯ ಸ್ವಯಂ ಸೇವಕರು ಆಗಿರುವುದರಿಂದ ಅವರಿಗೆ ಈ ಕುರಿತಾಗಿ ಅಭಿಮಾನ ಇದೆ. ದೇಶದ ಕುರಿತಾಗಿ ಅವರಿಗೆ ತುಂಬಾ ಅಭಿಮಾನ ಇದೆ ಎಂದು ಹೇಳಿದ್ದಾರೆ.