More

    ಹೊಸ 500 ರೂ. ನೋಟು..! ರಾಮಮಂದಿರ ಉದ್ಘಾಟನೆಗೂ ಮುನ್ನ ಮಾರುಕಟ್ಟೆಗೆ ಲಗ್ಗೆ ಇಡ್ತಾ ರಾಮನ ನೋಟು?…

    ನವದೆಹಲಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಅದ್ಧೂರಿಯಿಂದ ವ್ಯವಸ್ಥೆ ಮಾಡಲಾಗುತ್ತಿದ್ದು, ರೂ. 500ಕ್ಕೆ ಸಂಬಂಧಿಸಿದ ವಿಷಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

    ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ರೂ. 500 ನೋಟುಗಳಲ್ಲಿ ಗಾಂಧಿ ಆಕೃತಿಯ ಬದಲು ಶ್ರೀರಾಮನ ಚಿತ್ರ ಮುದ್ರಿಸಲಾಗುವುದು ಎಂಬ ಪ್ರಚಾರ ಜೋರಾಗಿದೆ. ಒಂದು ಬದಿಯಲ್ಲಿ ಶ್ರೀರಾಮನ ಭಾವಚಿತ್ರವನ್ನು ಅಚ್ಚು ಹಾಕಿದರೆ, ನೋಟಿನ ಇನ್ನೊಂದು ಬದಿಯಲ್ಲಿ ಕೆಂಪು ಕೋಟೆಯ ಬದಲಿಗೆ ಅಯೋಧ್ಯೆ ದೇವಾಲಯದ ಮಾದರಿಯನ್ನು ಮುದ್ರಿಸಲಾಗಿದೆ. ಗಾಂಧೀಜಿ ಅವರ ಕನ್ನಡಕ ಬದಲು ಶ್ರೀರಾಮನ ಬಾಣ ಮತ್ತು ಬಿಲ್ಲು ಇರುವಂತೆ ವಿನ್ಯಾಸಗೊಳಿಸಲಾಗಿದೆ. ಹೀಗೆ ಮುದ್ರಿಸಿರುವ ನಫೋಟುಗಳ ಚಿತ್ರ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿತ್ತು. 

    ರಾಮಮಂದಿರ ಉದ್ಘಾಟನೆ ದಿನವಾದ ಜನವರಿ 22ರಂದು ಈ ನೋಟು ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ಆದರೆ ಈ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಪರ ಹಾಗೂ ವಿರೋಧ ಚರ್ಚೆ ಶುರುವಾಗಿತ್ತು.

    ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ನೋಟುಗಳ ಸಕಲಿ ಕಥೆ ಏನು ಎಂದು ಖಾಸಗಿ ಸಂರ್ಸತೆ ಹಾಗೂ ವಾಹಿನಿಗಳು ಚೆಕ್​ ಮಾಡಿದಾಗ ನಿಜವಾದ ಸಂಗತಿ ತಿಳಿದು ಬಂದಿದೆ. ನೋಟುಗಳ ಬದಲಾವಣೆಗೆ ಸಂಬಂಧಿಸಿದಂತೆ ಆರ್‌ಬಿಐ ಏನನ್ನೂ ಪ್ರಕಟಿಸಿಲ್ಲ. 1996ರಲ್ಲಿ RBI ಕರೆನ್ಸಿ ನೋಟುಗಳ ಮೇಲೆ ಅಶೋಕ ಸ್ತೂಪದ ಬದಲಿಗೆ ಮಹಾತ್ಮ ಗಾಂಧಿ ಸರಣಿಯನ್ನು ಮುದ್ರಿಸಲು ಪ್ರಾರಂಭಿಸಿತು. ಅಂದಿನಿಂದ ಕರೆನ್ಸಿ ನೋಟುಗಳಲ್ಲಿ ಗಾಂಧೀಜಿಯವರ ಚಿತ್ರವಿತ್ತು. 

    ಒಂದೂವರೆ ವರ್ಷದ ಹಿಂದೆ ಕರೆನ್ಸಿ ನೋಟುಗಳ ಮೇಲೆ ಗಾಂಧೀಜಿ ಚಿತ್ರದ ಬದಲಾಗಿ ರವೀಂದ್ರನಾಥ ಟ್ಯಾಗೋರ್, ಅಬ್ದುಲ್ ಕಲಾಂ ಅವರಂತಹ ಗಣ್ಯರ ಫೋಟೋಗಳನ್ನು ಮುದ್ರಿಸಲಾಗುತ್ತದೆ ಎಂಬ ಪ್ರಚಾರ ನಡೆದಿತ್ತು. ಆದರೆ ಅಂತಹದ್ದೇನೂ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಈ ಕ್ರಮದಲ್ಲಿ ಶ್ರೀರಾಮನ ಚಿತ್ರವನ್ನು ಮುದ್ರಿಸಲಾಗುತ್ತದೆಯಂತೆ. ಇದುವರೆಗೆ ಈ ನೋಟಿನ ಬಗ್ಗೆ ಆರ್‌ಬಿಐ ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ಕೇವಲ ಎಡಿಟ್ ಮಾಡಲಾಗಿದೆ ಎಂದು ತೋರುತ್ತದೆ.ಫ್ಯಾಕ್ಟ್ ಲೀ ನಡೆಸಿದ ಸತ್ಯಾಸತ್ಯತೆ ಪರಿಶೀಲನೆಯು ಇದು ಡಿಜಿಟಲ್ ಎಡಿಟ್ ಮಾಡಿದ ಟಿಪ್ಪಣಿ ಎಂದು ತೀರ್ಮಾನಿಸಿದೆ. 

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts