More

    ಶ್ರೀರಾಮ ಮಾಂಸಾಹಾರಿ ಎಂದ ಮಾಜಿ ಸಚಿವನಿಂದ ಕೊನೆಗೂ ಕ್ಷಮೆಯಾಚನೆ!

    ನವದೆಹಲಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದೇಶದೆಲ್ಲಡೆ ರಾಮನ ಜಪ ಮಾಡಲಾಗುತ್ತಿದೆ. ಇದರ ನಡುವೆ ಶ್ರೀರಾಮ ಮಾಂಸಹಾರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿ, ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ನ್ಯಾಷನಲ್​ ಕಾಂಗ್ರೆಸ್​ ಪಕ್ಷದ (ಎನ್​ಸಿಪಿ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಜೀತೇಂದ್ರ ಆವ್ಹಾದ್​ ಕೊನೆಗೂ ಕ್ಷಮೆಯಾಚಿಸಿದ್ದಾರೆ.

    ಜೀತೇಂದ್ರ ಅವರು ಕ್ಷಮೆ ಕೇಳಿದರೂ ಸಹ ತಾವು ಸಂಶೋಧನೆ ಮಾಡದೆ ಏನನ್ನೂ ಮಾತನಾಡಿಲ್ಲ ಎಂದಿದ್ದಾರೆ. ನನ್ನ ಹೇಳಿಕೆಯು ಹಿಂದು ಮಹಾಕಾವ್ಯ ರಾಮಾಯಣದಲ್ಲಿ ಉಲ್ಲೇಖವಾಗಿದೆ ಎನ್ನುವ ಮೂಲಕ ತನ್ನ ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

    ಬುಧವಾರ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎನ್​ಸಿಪಿ ಶರಾದ್​ ಪವರ್​ ಬಣದ ನಾಯಕ ಜೀತೇಂದ್ರ ಅವರು ಮಾತನಾಡಿ, ರಾಮ ನಮ್ಮವನು. ಆತ ಬಹುಜನ. ಆಹಾರಕ್ಕಾಗಿ ರಾಮ ಬೇಟೆಯಾಡುತ್ತಿದ್ದ. ನಾವು ಸಸ್ಯಾಹಾರಿಗಳಾಗಬೇಕೆಂದು ನೀವು ಬಯಸುತ್ತೀರಿ, ಆದರೆ ನಾವು ಅವನನ್ನು ನಮ್ಮ ಆದರ್ಶವೆಂದು ಪರಿಗಣಿಸುತ್ತೇವೆ ಮತ್ತು ಮಟನ್ ತಿನ್ನುತ್ತೇವೆ. ರಾಮ ಸಸ್ಯಹಾರಿಯಲ್ಲ ಆದರೆ, ಆತ ಮಾಂಸಹಾರಿ ಎಂದು ಹೇಳಿದ್ದರು.

    ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಜೀತೇಂದ್ರ ಅವರು ಈ ಹೇಳಿಕೆಗಳನ್ನು ನೀಡಿದ್ದು, ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ, ತೀವ್ರ ಟೀಕೆಗಳು ಸಹ ವ್ಯಕ್ತವಾಗಿದ್ದು, ರಾಮನ ವಿರುದ್ಧ ಮಾತನಾಡಿದ್ದಕ್ಕೆ ದೂರು ಕೂಡ ದಾಖಲಿಸಲಾಗಿದೆ.

    ನಾನು ಭಾಷಣ ಮಾಡಿದ ಹಲವಾರು ನಿದರ್ಶನಗಳಿವೆ. ಆದರೆ, ನನ್ನ ಭಾಷಣದಲ್ಲಿ ಇದುವರೆಗೂ ಏನನ್ನೂ ತಿರುಚಿಲ್ಲ. ಈ ವಿಷಯವನ್ನು ನಾನು ಉಲ್ಬಣಗೊಳಿಸಲು ಬಯಸುವುದಿಲ್ಲ ಎನ್ನುವ ಮೂಲಕ ಕ್ಷಮೆಯಾಚಿಸಿದ ಜೇತೇಂದ್ರ, ವಾಲ್ಮೀಕಿ ರಾಮಾಯಣದಲ್ಲಿ, ಅನೇಕ ಭಾಗಗಳು ಇವೆ. ಅದರಲ್ಲಿ ಅಯೋಧ್ಯಾ ಭಾಗವಿದ್ದು, ಅದರಲ್ಲಿ ಶ್ಲೋಕ 102ರಲ್ಲಿ ಉಲ್ಲೇಖಿಸುವುದನ್ನೇ ನಾನು ಹೇಳಿದ್ದೇನೆ. ತಾರ್ಕಿಕವಾಗಿ ಮಾತನಾಡಲು ಸಾಧ್ಯವಾಗದವರು ನನ್ನ ವಿರುದ್ಧ ದೂರು ದಾಖಲಿಸುತ್ತಿದ್ದಾರೆ. ‘ರಾಮ್ ರಾಮ್’ ಎಂದು ಮಾತನಾಡುವವರಿಗೆ, ರಾಮ ನಮ್ಮ ಹೃದಯದಲ್ಲಿ ಉಳಿಯುತ್ತಾನೆ ಎಂದು ನಾನು ಹೇಳಲು ಬಯಸುತ್ತೇನೆ ಎಂದರು.

    ಭಾರತವನ್ನು ಸಸ್ಯಾಹಾರಿ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನವೂ ಸಹ ನಡೆಯುತ್ತಿದೆ ಎಂದು ತಮ್ಮ ಭಾಷಣದಲ್ಲಿ ಜೀತೇಂದ್ರ ಅವರು ಹೇಳಿದ್ದರು. ದೇಶದ ಜನಸಂಖ್ಯೆಯ ಶೇ. 80 ರಷ್ಟು ಜನರು ಇನ್ನೂ ಮಾಂಸಾಹಾರಿಗಳಾಗಿದ್ದು, ಅವರು ಶ್ರೀರಾಮನ ಭಕ್ತರು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಶ್ರೀರಾಮ ಮಾಂಸಹಾರಿ.. ವಿವಾದಾತ್ಮಕ ಹೇಳಿಕೆ ನೀಡಿದ ಎನ್​ಸಿಪಿ ಶಾಸಕ ಜಿತೇಂದ್ರ ಆವ್ಹಾದ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts