ವಾಷಿಂಗ್ಟನ್: ಅಮೆರಿಕದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶುಕ್ರವಾರ ಯುಎಸ್ ಕಾಂಗ್ರೆಸ್ನಲ್ಲಿ ಐತಿಹಾಸಿಕ ಭಾಷಣ ಮಾಡಿದರು. ಮೂಲಭೂತವಾದ ಮತ್ತು ಭಯೋತ್ಪಾದನೆ ಅಪಾಯವನ್ನು ಒತ್ತಿ ಹೇಳಿರು. ಉಗ್ರ ಚಟುವಟಿಕೆಗಳ ವಿರುದ್ಧ ವ್ಯವಹರಿಸುವಾಗ ಆದರೆ, ಒಂದು ವೇಳೆ ಎಂಬ ಯಾವುದಕ್ಕೂ ಆಸ್ಪದ ಇರಬಾರದು ಎಂಬ ದಿಟ್ಟ ಸಂದೇಶವನ್ನು ನೀಡಿದರು.
9/11 ದಾಳಿಯಾಗಿ ಎರಡು ದಶಕ ಹಾಗೂ 26/11 ಮುಂಬೈ ದಾಳಿ ನಡೆದ 1 ದಶಕಕ್ಕೂ ಹೆಚ್ಚು ಕಾಲ ಕಳೆದಿದೆ. ಇಂದಿಗೂ ಮೂಲಭೂತವಾದ ಮತ್ತು ಭಯೋತ್ಪಾದನೆ ಹಾಗೇ ಉಳಿದುಕೊಂಡಿದ್ದು, ಇಡೀ ವಿಶ್ವಕ್ಕೆ ಇದು ಅಪಾಯವನ್ನು ಒತ್ತುತ್ತಿದೆ. ಉಗ್ರವಾದದ ಸಿದ್ಧಾಂತಗಳು ಹೊಸ ಗುರುತು ಮತ್ತು ರಚನೆಯನ್ನು ಪಡೆದುಕೊಂಡರೂ ಅದರ ಹಿಂದಿರುವ ಉದ್ದೇಶ ಮಾತ್ರ ಒಂದೇ ಎಂದು ಯುಎಸ್ ಕಾಂಗ್ರೆಸ್ನಲ್ಲಿ ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿ ಗುಡುಗಿದರು.
ಭಯೋತ್ಪಾದನೆ ಎಂಬುದು ಮಾನವೀಯತೆಯ ಶತ್ರುವಾಗಿದೆ. ಹೀಗಾಗಿ ಭಯೋತ್ಪಾದನೆ ವಿರುದ್ಧ ವ್ಯವಹರಿಸುವಾಗ ಆದರೆ ಅಥವಾ ಒಂದು ವೇಳೆ ಎಂಬುದಕ್ಕೆ ಅವಕಾಶವನ್ನೇ ಕೊಡಬಾರದರು. ಭಯೋತ್ಪಾದನೆಯನ್ನು ಪ್ರಾಯೋಜಿಸುವ ಮತ್ತು ಅದನ್ನು ರಫ್ತು ಮಾಡುವ ಎಲ್ಲ ಶಕ್ತಿಗಳ ವಿರುದ್ಧ ಹೋರಾಡಿ ನಾವು ಜಯಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು. ಈ ಮೂಲಕ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ತಿರುಗೇಟು ನೀಡಿದರು.
ಪ್ರಧಾನಿ ಮೋದಿ ಅವರು ಎರಡನೇ ಬಾರಿಗೆ ಯುಎಸ್ ಕಾಂಗ್ರೆಸ್ನಲ್ಲಿ ಭಾಷಣ ಮಾಡಿದ್ದಾರೆ. ಯಾವುದೇ ಭಾರತೀಯ ಪ್ರಧಾನಿಯು ಯುಎಸ್ ಕಾಂಗ್ರೆಸ್ನಲ್ಲಿ ಎರಡು ಬಾರಿ ಭಾಷಣ ಮಾಡಿಲ್ಲ. ವಿನ್ಸ್ಟನ್ ಚರ್ಚಿಲ್, ನೆಲ್ಸನ್ ಮಂಡೇಲಾ ಬಿಟ್ಟರೆ ವಿಶ್ವ ನಾಯಕರು ಕೂಡ ಎರಡು ಬಾರಿ ಯುಎಸ್ ಕಾಂಗ್ರೆಸ್ನಲ್ಲಿ ಮಾತನಾಡಿಲ್ಲ.
ಪ್ರಧಾನಿ ಮೋದಿ ಅವರು ಅಮೆರಿಕದೊಂದಿಗೆ ಹಲವು ದ್ವಿಪಕ್ಷೀಯ ಸಂಬಂಧಗಳಿಗೆ ಸಹಿ ಹಾಕಿದ್ದಾರೆ. ಬೆಂಗಳೂರಲ್ಲೂ ಅಮೆರಿಕದ ರಾಯಭಾರ ಕಚೇರಿ ಸ್ಥಾಪನೆಯಾಗಲಿದೆ. (ಏಜೆನ್ಸೀಸ್)