ನ್ಯೂಸ್

ಬೆಂಗಳೂರಿನಲ್ಲಿದ್ದಾರೆ ಶೂ ಕಳ್ಳರು; ಮಧ್ಯರಾತ್ರಿ ಅಪಾರ್ಟ್​ಮೆಂಟ್​ಗೆ ನುಗ್ಗುತ್ತಾರೆ ಈ ಖದೀಮರು!

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಶೂ, ಕಳ್ಳರ ಹಾವಳಿ ಹೆಚ್ಚಾಗಿದೆ. ಕಳ್ಳನೊಬ್ಬ ಮಧ್ಯರಾತ್ರಿ ಅಪಾರ್ಟ್​ಮೆಂಟ್​ಗಳಿಗೆ ನುಗ್ಗಿ ಕೃತ್ಯ ಎಸಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೆಚ್​ಎಸ್​​ಆರ್​ ಲೇಔಟ್​​ನ ಅಪಾರ್ಟ್​ಮೆಂಟ್​ನಲ್ಲಿ ಶೂ ಕದ್ದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಮನೆ ಬಾಗಿಲವರೆಗೂ ಬಂದು ಕಳ್ಳತನ ನಡೆಸಿದ್ದು, ಯಾವಾಗ ಮನೆಗೆ ನುಗ್ಗಿ ಕನ್ನ ಹಾಕ್ತಾರೋ ಅಂತ ಜನರು ಭಯಭೀತರಾಗಿದ್ದಾರೆ.

ದುಬಾರಿ ಬೆಲೆ ಹಾಗೂ ಬಗೆಬಗೆಯ ಶೂಗಳು ಒಂದೇ ಕಡೆ ಸಿಗುತ್ತವೆ ಎಂದು ಕಳ್ಳರು ಅಪಾರ್ಟ್​ಮೆಂಟ್​​ಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ದುಬಾರಿ ಶೂಗಳನ್ನೇ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.