ನ್ಯೂಸ್

ಇಲ್ಲಿ ಮನುಷ್ಯರಿಗಿಂತ ಕುದುರೆಗಳೇ ಅಧಿಕ; ಎಷ್ಟಿವೆ..? ಕಾರಣವೇನು ತಿಳಿಯಿರಿ.. | Horses

horses: ಭೂಮಿ ಮೇಲೆ ಲೆಕ್ಕವಿಲ್ಲದಷ್ಟು ವಿವಿಧ ಜಾತಿಯ ಪ್ರಾಣಿಗಳಿವೆ. ಈ ಪ್ರಾಣಿಗಳಲ್ಲಿ ಕೆಲ ವಿಶಿಷ್ಟತೆಯನ್ನು ಹೊಂದಿವೆ. ಇಲ್ಲಿ ಮನುಷ್ಯರಿಗಿಂತ ಅಧಿಕ ಕುದುರಗಳೇ ಇವೆ ಎಂದರೆ ನೀವು ಆಶ್ಚರ್ಯಪಡಬಹುದು. ಆ ದೇಶ ಯಾವುದು? ಅಲ್ಲಿ ಕುದುರೆಗಳೇ ಅಧಿಕ ಏಕೆ ಎಂದು ತಿಳಿಯೋಣ..

ಮಂಗೋಲಿಯ ದೇಶ ಮನುಷ್ಯರಿಗಿಂತ ಅಧಿಕ ಕುದುರೆಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಏಕೆಂದರೆ ಕುದುರೆಗಳು ಮಂಗೋಲಿಯಾದ ಸಂಸ್ಕೃತಿ ಮತ್ತು ಇತಿಹಾಸದ ಒಂದು ಭಾಗವಾಗಿದೆ. ಮಂಗೋಲಿಯಾದ ಜನಸಂಖ್ಯೆ ಸುಮಾರು 34 ಲಕ್ಷ ಸಂಖ್ಯೆ ಹೊಂದಿದೆ. ಆದರೆ, ಇಲ್ಲಿ 40 ಲಕ್ಷಕ್ಕೂ ಅಧಿಕ ಕುದುರೆಗಳನ್ನು ಹೊಂದಿದೆ ಎಂದರೆ ಇದು ನಿಮಗೆ ಆಶ್ಚರ್ಯವಾಗಬಹುದು. ಈ ದೇಶದ ಪ್ರತಿ ವ್ಯಕ್ತಿಯ ಬಳಿ ಒಂದು ಅಥವಾ ಎರಡು ಕುದುರೆಗಳು ಇದ್ದೇ ಇರುತ್ತದೆ.

ಇಲ್ಲಿ ಕುದುರೆ ಏಕೆ ಅಧಿಕ?

ಪ್ರಾಚೀನ ಕಾಲದಲ್ಲಿ ಮಂಗೋಲಿಯಾದಲ್ಲಿ ಅಲೆಮಾರಿ ಜನರು ತಮ್ಮ ಇಡೀ ಜೀವನಕ್ಕಾಗಿ ಕುದುರೆಗಳನ್ನು ಅವಲಂಬಿಸಿದ್ದರು. ಅಲ್ಲದೆ, ಅಂದಿನ ದಿನಗಳಲ್ಲಿ ವಾಸ ಮಾಡುವ ಉದ್ದೇದಿಂದ ಸ್ಥಳಾಂತರಗೊಳ್ಳಲು ಕುದುರೆಗಳು ಹೆಚ್ಚು ಸಹಾಯವಾದವು. ಅಲ್ಲಿಂದ ಕುದುರೆಗಳೇ ಮಂಗೋಲಿಯಾ ಜನರ ನಾಡಿಮಿಡಿತವಾದವು. ಅಲ್ಲದೆ, ಮಂಗೋಲಿಯನ್​ ಪ್ರಕಾರ, ಕುದುರೆಗಳಿಲ್ಲದೆ ಅಲ್ಲಿನ ಜೀವನ ಅಪೂರ್ಣ ಎಂದು ಹೇಳುತ್ತಾರೆ.

ಮಂಗೋಲಿಯಾದಲ್ಲಿ ಪ್ರತಿ ವರ್ಷ "ನಾದಮ್ ಹಬ್ಬ" ಆಚರಿಸಲಾಗುತ್ತದೆ. ಈ ಉತ್ಸವವು ಮೂರು ಪ್ರಮುಖ ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ - ಕುದುರೆ ಓಟ, ಕುಸ್ತಿ ಮತ್ತು ಬಿಲ್ಲುಗಾರಿಕೆ. ಈ ಉತ್ಸವದಲ್ಲಿ, 5 ರಿಂದ 12 ವರ್ಷದೊಳಗಿನ ಮಕ್ಕಳು ಕುದುರೆ ಓಟದಲ್ಲಿ ಭಾಗವಹಿಸುತ್ತಾರೆ.

ಮಂಗೋಲಿಯನ್ ಜನರು ಕುದುರೆ ಓಟವು ಕೇವಲ ಶಕ್ತಿಯ ಆಟವಲ್ಲ, ತಾಳ್ಮೆ ಮತ್ತು ತಂತ್ರದ ಆಟ ಎಂದು ನಂಬುತ್ತಾರೆ.(ಏಜೆನ್ಸೀಸ್​)