ನ್ಯೂಸ್

ಯುವತಿಗೆ ನಡುರಸ್ತೆಯಲ್ಲೇ I Love You ಎಂದ​ ಯುವಕ; ಒಪ್ಪದ ಯುವತಿ: ಪ್ರಪೋಸ್ ಡೇ ದಿನ ನಡೆದಿದ್ದು ಘನಘೋರ! | Propose Day

Propose Day: ಪ್ರೇಮಿಗಳ ಸಂದರ್ಭ ಹಿನ್ನೆಲೆ ಯವಕನೊಬ್ಬ ಲವರ್​​ಗೆ ಪ್ರಪೋಸ್​ ಮಾಡಲು ಹೋಗಿ, ಯುವತಿಗೆ ಕಪಾಳಮೋಕ್ಷ ಮಾಡಿ ಸಿಹಿ ತಿಂಡಿಗಳನ್ನು ಮೈಮೇಲೆ ಎಸೆದು ಅನುಚಿತವಾಗಿ ವರ್ತಿಸಿದ ಘಟನೆ ಉತ್ತರಪ್ರದೇಶ ಅಮ್ರೋಹಾ ಎನ್ನುವ ಪ್ರದೇಶದಲ್ಲಿ ನಡೆದಿದೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಯುವಕನ ಈ ಕ್ರೂರ ಕೃತ್ಯಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಈ ಫೆ.8ರಂದೇ ನಡೆದಿದೆ ಎಂದು ವರದಿ ಉಲ್ಲೇಖಿಸಿವೆ.

ವೈರಲ್​ ವಿಡಿಯೋದಲ್ಲಿನೇದೆ?

ಇಬ್ಬರು ಸ್ನೇಹಿತರು ಇರುವ ವಿಡಿಯೋದಲ್ಲಿ ಒಬ್ಬಾತ ಯುವತಿಗೆ ಪ್ರಪೋಸ್​ ಮಾಡಲು ಬಂದಿದ್ದಾನೆ. ಪ್ರಪೋಸ್​ ಮಾಡಿದಾಗ ಯುವಕನ ಪ್ರೇಮ ನಿವೇದನೆಯನ್ನು ಯುವತಿ ನಿರಾಕರಿಸುತ್ತಾಳೆ. ಇದರಿಂದ ಕುಪಿತನಾದ ಆರೋಪಿ ಸ್ವೀಟ್ಸ್​ ಬಾಕ್ಸ್​ ಎಸೆದು, ಯುವತಿಗೆ ಅವಾಚ್ಯ ಪದಗಳಿಂದ ಬೈದು ನಿಂದನೆ ಮಾಡಿದ್ದಲ್ಲದೇ ಆಕೆಯ ತೆಲೆಗೆ ಕೇಕ್​ ಹೊಡೆದಿದ್ದಾರೆ. ಇದನ್ನು ಇತನ ಸ್ನೇಹಿತ ವಿಡಿಯೋ ರೆಕಾರ್ಡ್​ ಮಾಡಿದ್ದಾನೆ. ಇದೀಗ, ಈ ವಿಡಿಯೋದ ಕ್ಲಿಪ್​ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ವೈರಲ್​ ಆಗಿದೆ.

ಪ್ರಕರಣ ದಾಖಲು

ಸೋಷಿಯಲ್​ ಮೀಡಿಯಾದಲ್ಲಿ ಆಕ್ರೋಶವ್ಯಕ್ತವಾದ ಬಳಿಕ, ಆರೋಪಿ ವಿರುದ್ಧ ಅಮ್ರೋಹಾದ ಗಜ್ರೌಲಾ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ದುರದೃಷ್ಟವಶಾತ್ ಇಂತಹ ಘಟನೆಗಳು ಸಮಾಜದಲ್ಲಿ ಮಹಿಳೆಯರಿಗೆ ಸುರಕ್ಷತೆ ಮತ್ತು ಗೌರವದ ಅಗತ್ಯವನ್ನು ಎತ್ತಿ ತೋರಿಸುತ್ತವೆ ಎಂದು ನೆಟಿಜನ್​​ ಕಳವಳ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)