ನ್ಯೂಸ್

ಜಗತ್ತು ಭಾರತವನ್ನು ನಂಬುತ್ತದೆ, ಭವಿಷ್ಯದಲ್ಲಿ ಭಾರತ ಸೆಮಿಕಂಡಕ್ಟರ್‌ ನಿರ್ಮಿಸಲು ಸಿದ್ಧವಾಗಿದೆ: ಪ್ರಧಾನಿ ಮೋದಿ| PM Modi

PM Modi: ಜಗತ್ತು ಭಾರತವನ್ನು ನಂಬುತ್ತದೆ ಮತ್ತು ಇದರೊಂದಿಗೆ ಭವಿಷ್ಯದಲ್ಲಿ ಸೆಮಿಕಂಡಕ್ಟರ್‌ಗಳನ್ನು ನಿರ್ಮಿಸಲು ಸಿದ್ಧವಾಗಿದೆ ಎಂದು ಮಂಗಳವಾರ (ಸೆಪ್ಟೆಂಬರ್,02) ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಸೆಮಿಕಾನ್ ಇಂಡಿಯಾ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸೆಮಿಕಂಡಕ್ಟರ್‌ ವಲಯವನ್ನು ಮತ್ತಷ್ಟು ಉತ್ತೇಜಿಸಲು ತಮ್ಮ ಸರ್ಕಾರ ಶೀಘ್ರದಲ್ಲೇ ಸುಧಾರಣೆಗಳನ್ನು ಪ್ರಾರಂಭಿಸಲಿದೆ.ಅಲ್ಲೆದೆ, ಇವುಗಳನ್ನುಭಾರತದಲ್ಲಿ ತಯಾರಿಸಲಾಗಿದೆ ಮತ್ತು ಪ್ರಪಂಚದಿಂದ ವಿಶ್ವಾಸಾರ್ಹವಾಗಿದೆ ಎಂದು ಜಗತ್ತು ಹೇಳುವ ದಿನ ದೂರವಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಭಾರತದಲ್ಲಿ ತಯಾರಿಸಲಾದ ಚಿಕ್ಕ ಚಿಪ್ ಸಹ ವಿಶ್ವದ ಅತಿದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಸೆಮಿಕಂಡಕ್ಟರ್ ಉತ್ಪಾದನೆಗೆ ಅಗತ್ಯರುವ ಭೂಮಿ ಮತ್ತು ಇತರ ಹೆಚ್ಚುತ್ತಿರುವ ಸಂಪನ್ಮೂಲಗಳಿಗೆ ಬೇಡಿಕೆಯನ್ನು ಪೂರೈಸಲು ಭಾರತವು ನಿರ್ಣಾಯಕ ಖನಿಜಗಳ ಮಿಷನ್‌ನಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಘೋಷಿಸಿದರು. ಕಪ್ಪು ತೈಲ ಈಗ ಚಿನ್ನವಾಗಿದೆ, ಆದರೆ ಚಿಪ್​ಗಳು ವಜ್ರಗಳ ಬೆಲೆ ಬರುತ್ತದೆ. ಅಲ್ಲದೆ, ಉದ್ಯಮದ ಕಾರ್ಯತಂತ್ರದ ಮಹತ್ವವನ್ನು ಮೋದಿ ತಿಳಿಸಿದರು.

2021ರಿಂದ ಕೇಂದ್ರ ಸರ್ಕಾರವು 18 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಹೂಡಿಕೆಯೊಂದಿಗೆ 10 ಸೆಮಿಕಂಡಕ್ಟರ್ ಯೋಜನೆಗಳನ್ನು ಅನುಮೋದಿಸಿದೆ ಎಂದು ಮೋದಿ ಬಹಿರಂಗಪಡಿಸಿದರು. ಇದು ಭಾರತದ ಸಾಮರ್ಥ್ಯ ಜಾಗತಿಕ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಈ ಸಂದರ್ಭದಲ್ಲಿ ಮೋದಿ ಬಣ್ಣಿಸಿದರು.

ಜಾಗತಿಕ ಹಿಂಜರಿತದ ನಡುವೆಯೂ ಭಾರತದ ಆರ್ಥಿಕಯ ಬಗ್ಗೆ ಉಲ್ಲೇಖಿಸಿದ ಮೋದಿ, 2025 ರ ಏಪ್ರಿಲ್-ಜೂನ್ ದೇಶವು ಶೇಕಡಾ 7.8 ರಷ್ಟು GDP ಬೆಳವಣಿಗೆಯನ್ನು ದಾಖಲಿಸಿದೆ. ಇದು ಎಲ್ಲ ನಿರೀಕ್ಷೆಗಳನ್ನು ಮೀರಿಸಿದೆ ಎಂದು ಹೇಳಿದರು.(ಏಜೆನ್ಸೀಸ್)