ಗದಗ: ಪ್ರಸಕ್ತ ವರ್ಷದಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. ಜಗತ್ತಿನ ಪ್ರಭಾವಿ ಸಂತರೊಬ್ಬರು ಹಾಗೂ ಪ್ರಧಾನಿಗಳಿಬ್ಬರು ಸಾವಿಗೀಡಾಗುವ ಲಕ್ಷಣಗಳಿವೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ನಗರದಲ್ಲಿ ಶುಕ್ರವಾರ ಮಾತನಾಡಿ, 2024ರಲ್ಲಿ ಅಕಾಲಿಕ ಮಳೆ, ಭೂಕಂಪ, ಜಲಕಂಟಕ, ಅಣುಬಾಂಬ್ ಸ್ಪೋಟದಂತಹ ಸನ್ನಿವೇಶ ಮತ್ತು ಯುದ್ಧದ ಭೀತಿಯಿಂದ ಜಗತ್ತು ತಲ್ಲಣಗೊಳ್ಳುವಂತಹ ಸ್ಥಿತಿ ನಿರ್ವಣವಾಗಲಿದೆ ಎಂದರು.
ಭಾರತೀಯರು ದೇವರು, ಧರ್ಮ, ಸತ್ಯ, ನಂಬಿಕೆ ವಿಚಾರದಲ್ಲಿ ಪ್ರಬುದ್ಧರಾಗಿದ್ದಾರೆ. ದೇಶದ ಹಲವಾರು ಕಡೆಗಳಲ್ಲಿ ದೈವಾಂಶ ಸಂಭೂತರ ಹೆಸರಿನಲ್ಲಿ ದೇವಸ್ಥಾನ, ಗುಡಿ, ಗೋಪುರಗಳನ್ನು ನಿರ್ವಿುಸಿ ಸ್ಮರಣೆ ಮಾಡುವುದು ಸಾಮಾನ್ಯವಾಗಿದೆ. ಆ ದೆಸೆಯಲ್ಲಿ ಶ್ರೀರಾಮನ ದೇವಸ್ಥಾನ ಲೋಕಾರ್ಪಣೆಗೊಂಡಿರುವುದು ಧಾರ್ವಿುಕತೆಯ ಪ್ರತೀಕವಾಗಿದೆ. ಇದರಿಂದ ಧಾರ್ವಿುಕವಾಗಿಯೂ ಒಳ್ಳೆಯ ಸೂಚನೆ ಸಿಕ್ಕಂತಾಗಿದೆ. ರಾಜಕೀಯದಲ್ಲಿ ಧಾರ್ವಿುಕತೆ ಬೆರೆಸುವುದು ಸೂಕ್ತವಲ್ಲ ಎಂದು ಹೇಳಿದರು.
ಸಾಮಾನ್ಯವಾಗಿ ಸಂಕ್ರಾಂತಿ ನಂತರ ಹಾಗೂ ಯುಗಾದಿ ನಂತರ ಭವಿಷ್ಯ ಹೇಳಲಾಗುತ್ತದೆ. ಸಂಕ್ರಾಂತಿ ನಂತರ ವ್ಯಾಪಾರ, ವಾಣಿಜ್ಯ; ಯುಗಾದಿ ನಂತರ ದೇಶದ ಸಮಗ್ರ ಮಳೆ, ಬೆಳೆ, ಜನರು, ರಾಜರು ಇತ್ಯಾದಿಗಳ ಬಗ್ಗೆ ಹೇಳಲಾಗುತ್ತದೆ. ಈಗ ರಾಜಕೀಯ ಕುರಿತು ಹೇಳುವುದು ಪ್ರಶಸ್ತವಲ್ಲ. ಯುಗಾದಿ ನಂತರ ರಾಜಕೀಯದಲ್ಲಾಗುವ ಬದಲಾವಣೆಗಳ ಕುರಿತು ಭವಿಷ್ಯ ಹೇಳಲು ಸಾಧ್ಯವಾಗುತ್ತದೆ ಎಂದರು.