ಬೆಂಗಳೂರು: ಪ್ರೀತಿ ಪ್ರೇಮ ಎಲ್ಲಿ ಯಾವಾಗ...ಹೇಗೆ..ಯಾರ ಮೇಲೆ ಹುಟ್ಟುತ್ತದೋ ಯಾರಿಗೂ ತಿಳಿಯದು. ಇದಕ್ಕೆ ಸಾಕ್ಷಿ ಎನ್ನುವಂತೆ ಹಲವು ಘಟನೆಗಳು ನಡೆಯುತ್ತಿವೆ. ಇದಕ್ಕೆ ದೇಶ, ಭಾಷೆಗಳ ಗಡಿಯಿಲ್ಲ. ಕಣ್ಣ ನೋಟದಲ್ಲಿ ಹುಟ್ಟುತ್ತಿದ್ದ ಪ್ರೇಮ ಈಗ ಮೊಬೈಲ್‌ಗಳ ಮೂಲಕ ಆರಂಭವಾಗುತ್ತಿದೆ. ಬೆಂಗಳೂರಿನ ಮಹಿಳೆಯೊಬ್ಬಳು ಪ್ರೀಯತಮನಿಗಾಗಿ ಪತಿಯನ್ನು ಮನೆಯಲ್ಲಿ ಲಾಕ್ ಮಾಡಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
25 ವರ್ಷ ಅರ್ಪಿತಾ ಎಂಬುವವರಿಗೆ ರಮೇಶ್ ಎಂಬಾತನ ಜೊತೆ ಎರಡು ತಿಂಗಳ ಹಿಂದೆ ಮದುವೆಯಾಗಿತ್ತು. ಸುಖದ ಸಂಸಾರವಾಗಿತ್ತು. ಆದರೆ ಅದೇನಾಯ್ತೋ ಗೊತ್ತಿಲ್ಲ ಪತಿಯನ್ನು ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾಳೆ.
2023 ಅಗಸ್ಟ್ 12 ರಂದು ಬೆಳಿಗ್ಗೆ ಸುಮಾರು 06:30 ಗಂಟೆ ರಮೇಶ್ ಬಾತ್ರೂಮ್ಗೆ ಹೋದ ವೇಳೆ ಹೆಂಡತಿ ಮನೆಯ ಬಾಗಿಲನ್ನು ಹಾಕಿ ಬೀಗ ಹಾಕಿಕೊಂಡು ಹೋಗಿದ್ದಾಳೆ. ಗಾಭರಿಗೊಂಡ ಪತಿ ರಮೇಶ್ ಆಕೆ ಕೆಲಸ ಮಾಡುತ್ತಿದ್ದ ಹಾಗೂ ಈ ಹಿಂದೆ ಕಲಸ ಮಾಡುತ್ತಿದ್ದ ನಾರಾಯಣ್ ನೇತ್ರಾಲಯಕ್ಕೆ ಹೋಗಿ ವಿಚಾರಿಸಿದ್ದಾನೆ. ಕಾರ್ತಿಕ್ ಎಂಬವನ ಜತೆ ಹೋಗಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಕೊನೆಗೂ ಸಿಕ್ಕಿದ್ರು ಜಿಂಗಿ ಚಕ.. ಜಿಂಗಿ ಚಕ..ಕುಚ್ ಕುಚ್..ಟುವ್ವಿ ಟುವ್ವಿ..ಗಾಯಕ; ಈ ಹಾಡು ಹಾಡಿದ್ದು ಫೇಮಸ್ ನಟ
ಮೊನ್ನೆ ಗಂಡ ಬಾತ್ರೂಮಿಗೆ ಹೋಗಿದ್ದಾಗ ಮನೆ ಬೀಗ ಹಾಕಿ ಹೆಂಡತಿ ಪ್ರಿಯತಮನ ಜತೆ ಪರಾರಿಯಾಗಿದ್ದಾಳೆ ಹುಡುಕಿಕೊಡಿ. ಮೊಬೈಲ್ ಸ್ಪೀಚ್ ಮಾಡಿಕೊಂಡಿದ್ದಾರೆ. ಹೆಂಡತಿಯನ್ನು ಕಾರ್ತಿಕ್ ಎಂಬುವವನೇ ಕರೆದುಕೊಂಡು ಹೋಗಿರುವ ಅನುಮಾನವಿದೆ. ಹೆಂಡತಿಯನ್ನ ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.