ನ್ಯೂಸ್

ಜನಪದ ಕಲಾವಿದ ಜನ್ನಘಟ್ಟ ಕೃಷ್ಣಮೂರ್ತಿ ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರಿಯಕರನೊಂದಿಗೆ ಸೇರಿ ಸ್ಕೆಚ್‌ ಹಾಕಿ ಮುಗಿಸಿದ್ಲು ಪತ್ನಿ!

ಕೋಲಾರ: ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಮುಗಿಸಿದ್ದಾಳೆ. ಈ ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಕೋಲಾರ ತಾಲೂಕಿನಲ್ಲಿ ನಡೆದಿದೆ.

ಕೃಷ್ಣಮೂರ್ತಿ ಮೃತ. ಜನ್ನಘಟ್ಟ ಕೃಷ್ಣಮೂರ್ತಿ ಜಾನಪದ ಕಲಾವಿದರಾಗಿದ್ದು, ಅವರಿಗೆ ರಾಜ್ಯ ಯುವ ಪ್ರಶಸ್ತಿ ಸಹ ಲಭಿಸಿದೆ. ಅಲ್ಲದೇ, ಕೋಲಾರ ಜಾನಪದ ಕಲಾ ಸಂಘದ ಅಧ್ಯಕ್ಷರಾಗಿದ್ದರು. ಮಾನವ ಹಕ್ಕುಗಳು ಜಾಗೃತಿ ಸಮಿತಿಯ ರಾಜ್ಯ ಅಧ್ಯಕ್ಷರೂ (ಸಾಂಸ್ಕೃತಿಕ ಶಾಖೆ) ಆಗಿದ್ದರು.

ಸೌಮ್ಯ ಹಾಗೂ ಈಕೆ ಪ್ರಿಯಕರ ಶ್ರೀಧರ್ ಕೊಲೆ ಮಾಡಿರುವ ಆರೋಪಿಯಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಮುಗಿಸಲು ಪ್ರಿಯಕರನ ಜತೆ ಸೇರಿ ಕೊಲೆ ಮಾಡಿ ಸಿಕ್ಕಿ ಬಿದ್ದಿದ್ದಾಳೆ.

ನಡೆದಿದ್ದೇನು?: ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಕೋಲಾರದಿಂದ ಮನೆಗೆ ತೆರಳುತ್ತಿದ್ದ ಕೃಷ್ಣಮೂರ್ತಿಯನ್ನ, ಜನ್ನಘಟ್ಟ ರೈಲ್ವೆ ಬ್ರಿಡ್ಜ್ ಬಳಿ ಡ್ರಾಪ್ ಕೇಳುವ ನೆಪದಲ್ಲಿ ಬೈಕ್ ನಿಲ್ಲಿಸಿದ ಪ್ರಿಯಕರ ಶ್ರೀಧರ್ ಹಾಗೂ ಆತನ ಸ್ನೇಹಿತ ಶ್ರೀಧರ್, ಕೃಷ್ಣಮೂರ್ತಿ ನಿಲ್ಲಿಸಿದ ಕೂಡಲೇ ರಾಡ್ ನಿಂದ ತಲೆಯ ಹಿಂಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಸೋಮವಾರ ರಾತ್ರಿ ಪ್ರಿಯಕರ ಮತ್ತವನ ಸ್ನೇಹಿತನ ಜತೆ ಸೌಮ್ಯಾ ಪತಿಯನ್ನ ಹತ್ಯೆ ಮಾಡಿಸಿದ್ದಾಳೆ. ತನ್ನ ಪತಿ ಬೈಕ್‌ನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಬಿಂಬಿಸಿದ್ದಳು. ಕಳೆದ ರಾತ್ರಿ ಕೋಲಾರ ತಾಲ್ಲೂಕಿನ ಜನ್ನಘಟ್ಟ ಬಳಿ ಈ ಘಟನೆ ನಡೆದಿತ್ತು.

ಆದರೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಕೋಲಾರ ಗ್ರಾಮಾಂತರ ಪೊಲೀಸರಿಗೆ ಅನುಮಾನ ಮೂಡಿತ್ತು. ಸೌಮ್ಯಾಳನ್ನ ವಿಚಾರಣೆಗೆ ಒಳಪಡಿಸಿದಾಗ ಬಣ್ಣ ಬಯಲಾಗಿ ತಗಲಾಕಿಕೊಂಡಿದ್ದಾಳೆ. ಆರೋಪಿಗಳನ್ನ ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಮೂರು ಜನರನ್ನ ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.