ನ್ಯೂಸ್

VIDEO | 'ಹಾಯ್ ಇಲ್ಲ..ಬಾಯ್​ ಇಲ್ಲ', ಬೇಸರ ವ್ಯಕ್ತಪಡಿಸಿದ್ದ ಚಂದ್ರುಗೆ ಹೂಗುಚ್ಚ ಕೊಟ್ಟ ವಿಕಿಪೀಡಿಯ!

ಮೋಹನ್​ ಶೆಟ್ಟಿ

ಬೆಂಗಳೂರು: ಇತ್ತೀಚಿನ ವಿಜಯವಾಣಿ ಡಿಜಿಟಲ್ ಸಂದರ್ಶನವೊಂದರಲ್ಲಿ ಬೆಳ್ಳುಳ್ಳಿ ಕಬಾಬ್​ ಚಂದ್ರು 'ಕರಿಮಣಿ ಮಾಲೀಕ ರಾಹುಲ್ಲಾ' ಹಾಡು ಟ್ರೆಂಡ್​ ಆದ ಬಳಿಕ ನಡೆದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು, "ವಿಕಿಪೀಡಿಯ ಖ್ಯಾತಿಯ ವಿಕಾಸ್​ ತಮ್ಮ ಬಳಗದೊಂದಿಗೆ ನಮ್ಮ ಹೋಟೆಲ್​ಗೆ ಬಂದು ಸಾಂಗ್ ಶೂಟಿಂಗ್ ಮಾಡಿದರು. ಅರ್ಧ ಗಂಟೆಗೆ ಶೂಟ್​ ಮಾಡಿ, ಹಾಡು ಬಿಟ್ಟರು, ಕೋಟ್ಯಂತರ ಜನ ನೋಡಿದ್ರು, ಒಳ್ಳೆ ಕಾಸು ಆಯಿತು, ಒಂದು ಥ್ಯಾಂಕ್ಸ್​ ಇಲ್ಲ, ಹಾಯ್ ಇಲ್ಲ, ಬಾಯ್​ ಇಲ್ಲ ಇಷ್ಟೇ" ಎಂದು ಬೇಸರ ವ್ಯಕ್ತಪಡಿಸಿದ್ದರು. ಆದರೆ ಇದೀಗ.....

ನನ್ನ ಕಾಲಿಗೆ ಆಪರೇಷನ್​ ಆಗಿತ್ತು. ಆಗ ಯಾರು ನನ್ನನ್ನು ನೋಡಲು ಬರಲಿಲ್ಲ. ವಿಡಿಯೋ ಮಾಡಿದ್ರು, ಹೋದ್ರು, ಥ್ಯಾಂಕ್ಯೂ ಇಲ್ಲ, ಬಾಯ್​ ಇಲ್ಲ ಎಂದು ವಿಕಿಪೀಡಿಯ ಕುರಿತು ಚಂದ್ರು ಅಸಮಾಧಾನ ಹೊರಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ, ವಿಕಿಪೀಡಿಯ-ಚಂದ್ರು ಮಧ್ಯೆಯಿದ್ದ ಅಸಮಾಧಾನಕ್ಕೆ ತೆರೆ ಬಿದ್ದಿದೆ.

ವಿಡಿಯೋ ಹರಿದಾಡಿದ ಬೆನ್ನಲ್ಲೇ ಚಂದ್ರು ಮನೆಗೆ ಭೇಟಿ ನೀಡಿದ ವಿಕಿಪೀಡಿಯ ಖ್ಯಾತಿಯ ವಿಕಾಸ್​, ಚಂದ್ರು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿ, ಹೂಗುಚ್ಚ ಕೊಟ್ಟು ಆತ್ಮೀಯವಾಗಿ ಮಾತನಾಡಿದ್ದಾರೆ. ನಾವೆಲ್ಲ ಚೆನ್ನಾಗಿ ಇದ್ದೀವಿ, ಈ ವಿಶ್ವಾಸ ಸದಾ ಹೀಗೇ ಇರುತ್ತೆ ಎಂದು ಚಂದ್ರು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಇವರೊಂದಿಗೆ ಕಾರ್ಯಕ್ರಮಗಳನ್ನು ಮಾಡುತ್ತೀನಿ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಚಂದ್ರುಗೆ ಹಣ್ಣು, ಗಿಫ್ಟ್​ ಕೊಟ್ಟು ಒನ್​​ ಮೋರ್...​ ಒನ್​ ಮೋರ್​ ಎಂದು ವಿಕಾಸ್​ ಹೇಳಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.