ನ್ಯೂಸ್

79ನೇ ಸ್ವಾತಂತ್ರ್ಯದಿನಾಚರಣೆಯ ಥೀಮ್​ ಅನಾವರಣ! ನಾಳೆ ಬೆಳಿಗ್ಗೆ 7:30ಕ್ಕೆ ಪ್ರಧಾನಿ ಮೋದಿಯಿಂದ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ| Independence Day

Independence Day : ಆಗಸ್ಟ್​ 15ರಂದು ಭಾರತವು ತನ್ನ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸುತ್ತಿದ್ದು, " ನಯ ಭಾರತ್​ " ಥೀಮ್​ನೊಂದಿಗೆ ಸಜ್ಜಾಗುತ್ತಿದೆ. ಇದು ಸಮ್ಋದ್ದೀ, ಸುರಕ್ಷತೆ ಮತ್ತು ಸ್ವಾವಲಂಬಿ ಭವಿಷ್ಯದ ಮೇಲೆ ಕೇಂದ್ರಿಕರಿಸುತ್ತದೆ. ಹಾಗೇ ಯಶಸ್ವಿ ಆಪರೇಷನ್​ ಸಿಂಧೂರಕ್ಕೆ ಗೌರವ ಸಲ್ಲಿಸುತ್ತಿದೆ. ಇನ್ನು ನರೇಂದ್ರ ಮೋದಿಯವರು ದೆಹಲಿಯ ಐತಿಹಾಸಿಕ ಕೋಟೆಯಲ್ಲಿ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸ ಮಾತನಾಡಲಿದ್ದಾರೆ.

2025 ರ ಸ್ವಾತಂತ್ರ್ಯ ದಿನಾಚರಣೆಯ ಥೀಮ್​ ಏನು?

2047 ರ ವೇಳೆಗೆ ಭಾರತ ಸರ್ಕಾರದ ವೀಕ್ಷಿತ್​ ಭಾರತ್​ ದೃಷ್ಟಿಕೋನವನ್ನು ಸಾಧಿಸುವ ದೃಢಸಂಕಲ್ಪವನ್ನು ಸಂಕೇತಿಸುವ ಸಲುವಾಗಿ ರಾಷ್ಟ್ರವು ಹೆಜ್ಜೆ ಇಡುತ್ತಿರುವುದರಿಂದ " ನಯ ಭಾರತ್​ " ಎಂದು ಹೆಸರಿಸಲಾಗಿದೆ ಎಂದು ಬುಧವಾರ ರಕ್ಷಣಾ ಸಚಿವಾಲಯ ಅಧಿಕೃತವಾಗಿ ತಿಳಿಸಿದೆ. ಇನ್ನು ಈ ವಿಷಯವು ಭಾರತದ ಬೆಳೆಯುತ್ತಿರುವ ಆರ್ಥಿಕ ಶಕ್ತಿ, ಭದ್ರತಾ ಸಿದ್ದತೆ ಹಾಗೂ ಅಭಿವೃದ್ದಿ ವೇಗದಲ್ಲಾಗುತ್ತಿರುವ ಬದಲಾವಣೆಗಳನ್ನು ಪ್ರೊತ್ಸಾಯಿಸುತ್ತದೆ.

ಆಪರೇಷನ್​ ಸಿಂಧೂರ ಬಗ್ಗೆ ಪ್ರಶಂಸೆ

ಈ ವರ್ಷದ ಸ್ವಾತಂತ್ರಯ ದಿನಾಚರಣೆಯಲ್ಲಿ ಆಪರೇಷನ್​ ಸಿಂಧೂರವನ್ನು ಗೌರವಿಸಲಿದ್ದು, ಅದರ ಲೋಗೋವನ್ನು ಜ್ಞಾನಪಥ್‌ನಲ್ಲಿರುವ ಗೋಡೆಗಳಿಗೆ ಹಾಗೂ ಅಧಿಕೃತ ಆಮಂತ್ರಣ ಪತ್ರಗಳಲ್ಲಿ ನಮೂದಿಸಲಾಗಿದೆ. ನಯಾ ಭಾರತದ ಉದಯವನ್ನು ಸಂಕೇತಿಸುವ ಐಕಾನಿಕ್​ ಚೆನಾಬ್​ ಸೇತುವೆಯ ವಾಟರ್​ಮಾರ್ಕ್​ನ್ನು ಸಹ ಈ ಆಮಂತ್ರಣ ಕಾರ್ಡ್​ಗಳು ಒಳಗೊಂಡಿವೆ.

ದೆಹಲಿ ಕೆಂಪು ಕೋಟೆಯಲ್ಲಿ ನರೇಂದ್ರ ಮೋದಿಯಿಂದ ಧ್ವಜಾರೋಹಣ

ಭಾರತದ ಪ್ರಧಾನಿ ನರೇಂದ್ರ ಮೋದಿಯವರು 79 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಧ್ವಜಾರೋಹಣ ಮಾಡಿ, ಈ ವೇಳೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಈ ಸಂದರ್ಭದಲ್ಲಿ ದೇಶಾದ್ಯಂತ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.(ಏಜೆನ್ಸೀಸ್)