ಮುಂಬೈ: ವಾರದ ಮೂರನೇ ವಹಿವಾಟಿನ ದಿನವಾದ ಬುಧವಾರ, ಈ ಐಟಿ ಪೆನ್ನಿ ಸ್ಟಾಕ್ 20% ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್ ಆಗಿದೆ. ಈ ಷೇರಿನ ಬೆಲೆ ರೂ 7.20 ತಲುಪಿದ್ದು, ಇದು ಈ ಸ್ಟಾಕ್ನ 52 ವಾರಗಳ ಗರಿಷ್ಠ ಬೆಲೆಯಾಗಿದೆ. ಕಳೆದೊಂದು ವಾರದಲ್ಲಿ ಈ ಸ್ಟಾಕ್ 40 ಪ್ರತಿಶತಕ್ಕಿಂತ ಹೆಚ್ಚು ಏರಿಕೆ ಕಂಡಿದೆ.
ಷೇರುಪೇಟೆ ಈಗ ಏರುಗತಿಯಲ್ಲಿ ಪ್ರತಿದಿನ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಇದೇ ಸಂದರ್ಭದಲ್ಲಿ ಐಟಿ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಯಾದ ಕಂಪ್ಯೂಟರ್ ಪಾಯಿಂಟ್ ಲಿಮಿಟೆಡ್ ಷೇರುಗಳ ಖರೀದಿಗೆ ಹೂಡಿಕೆದಾರರು ಮುಗಿಬಿದ್ದಿದ್ದರಿಂದ ಈ ಷೇರು ಅಪ್ಪರ್ ಸರ್ಕ್ಯೂಟ್ ಹಿಟ್ ಆಗಿದೆ.
ಈ ಷೇರಿನ 52 ವಾರಗಳ ಕನಿಷ್ಠ ಬೆಲೆ 2.26 ರೂ. ಇತ್ತು. ಈ ಬೆಲೆ ಜುಲೈ 2023 ರಲ್ಲಿತ್ತು. ಒಂದು ವರ್ಷದ ಅವಧಿಯಲ್ಲಿ ಈ ಷೇರು ಬೆಲೆ 190 ರಷ್ಟು ಏರಿಕೆಯಾಗಿದೆ. ಮೂರು ವರ್ಷಗಳಲ್ಲಿ ಈ ಷೇರು ಶೇ. 1000 ರಷ್ಟು ಹೆಚ್ಚಳ ಕಂಡಿದೆ.
ಕೆಲವು ವರ್ಷಗಳ ಹಿಂದೆ ಈ ಷೇರಿನ ಬೆಲೆ 35 ರೂ. ಇತ್ತು. ಇದಾದ ನಂತರ ಷೇರಿನ ಬೆಲೆ ಕುಸಿತ ಕಂಡು 10 ರೂ.ಗಿಂತ ಕಡಿಮೆಯಾಯಿತು. ಆದರೆ, ಈಗ ಮತ್ತೊಮ್ಮೆ ಈ ಸ್ಟಾಕ್ ಬೆಲೆ ಈಗ ಏರುಗತಿಯಲ್ಲಿ ಸಾಗಿದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 75.25 ಹಾಗೂ ಕನಿಷ್ಠ ಬೆಲೆ 29 ಪೈಸೆ ಆಗಿದೆ.