ನ್ಯೂಸ್

ಸದ್ಯ ಕುಸಿತ ಕಂಡ ಡ್ರೋನ್​ ಕಂಪನಿ ಷೇರುಗಳ ಬೆಲೆ: ಮುಂದೆ ದುಪ್ಪಟ್ಟಾಗಲಿದೆ ಎನ್ನುತ್ತದೆ ದಲ್ಲಾಳಿ ಸಂಸ್ಥೆ

ಮುಂಬೈ: ಈ ಡ್ರೋನ್ ತಯಾರಿಕೆ ಕಂಪನಿಯ ಷೇರುಗಳು 1600 ರೂಪಾಯಿ ದಾಟುತ್ತವೆ. ನೀವು ಈಗ ಬಾಜಿ ಕಟ್ಟಿದರೆ ಮಲ್ಟಿಬ್ಯಾಗರ್ ರಿಟರ್ನ್ಸ್ ಸಿಗುತ್ತದೆ. ಅಂದರೆ, ಷೇರು ಬೆಲೆ ದುಪ್ಪಟ್ಟಾಗಲಿದೆ ಎಂದು ಬ್ರೋಕರೇಜ್​ ಸಂಸ್ಥೆಯೊಂದು ಭವಿಷ್ಯ ನುಡಿದಿದೆ.

ಐಡಿಯಾಫೋರ್ಜ್ ಟೆಕ್ನಾಲಜಿ ಲಿಮಿಟೆಡ್ (Ideaforge Technology Ltd.) ಡ್ರೋನ್ ತಯಾರಿಕೆ ಕಂಪನಿಯಾಗಿದೆ. ಈ ಷೇರುಗಳ ಬೆಲೆ ಮಂಗಳವಾರದ ವಹಿವಾಟಿನಲ್ಲಿ 1.36% ರಷ್ಟು ಏರಿಕೆಯಾಗಿ, 741.25 ರೂ. ತಲುಪಿವೆ.

ಕಳೆದ ವರ್ಷ ಐಪಿಒ ಮೂಲಕ 672 ರೂಪಾಯಿ ಬೆಲೆಯಲ್ಲಿ ಈ ಕಂಪನಿಯ ಷೇರುಗಳನ್ನು ನೀಡಲಾಗಿತ್ತು. ಅಂದರೆ ಪ್ರಸ್ತುತ ಈ ಷೇರು ಐಪಿಒ ಬೆಲೆಗಿಂತ 9% ರಷ್ಟು ಹೆಚ್ಚು ಇದೆ.

ಕಳೆದ ವಾರ (ಫೆಬ್ರವರಿ 14) ಈ ಸ್ಟಾಕ್ ತನ್ನ ದಾಖಲೆಯ ಕನಿಷ್ಠ ಬೆಲೆ 689 ರೂಪಾಯಿ ತಲುಪಿತ್ತು. ಈ ವರ್ಷದ ಜನವರಿಯಲ್ಲಿ 14 ಪ್ರತಿಶತಕ್ಕಿಂತ ಹೆಚ್ಚು ಕುಸಿದ ನಂತರ, ಫೆಬ್ರವರಿಯಲ್ಲಿ ಇದುವರೆಗೆ 4 ಪ್ರತಿಶತದಷ್ಟು ಕುಸಿದಿದೆ.

ಏತನ್ಮಧ್ಯೆ, ಜುಲೈ 2023 ರಲ್ಲಿ ಪಟ್ಟಿಯಾದ ನಂತರ ಈ ಸ್ಟಾಕ್ ಆಗಸ್ಟ್ 2023 ರಲ್ಲಿ ಶೇಕಡಾ 13, ಸೆಪ್ಟೆಂಬರ್‌ನಲ್ಲಿ ಶೇಕಡಾ 9, ಅಕ್ಟೋಬರ್‌ನಲ್ಲಿ ಶೇಕಡಾ 11 ಮತ್ತು ನವೆಂಬರ್‌ನಲ್ಲಿ ಶೇಕಡಾ 2 ಕ್ಕಿಂತ ಹೆಚ್ಚು ಕುಸಿದಿದೆ. ಆದರೂ ಇದು ಕಳೆದ ಡಿಸೆಂಬರ್‌ನಲ್ಲಿ 6 ಪ್ರತಿಶತದಷ್ಟು ಏರಿಕೆ ಕಂಡಿದೆ.

ನಿರಾಶಾದಾಯಕ ಪ್ರದರ್ಶನದ ಹೊರತಾಗಿಯೂ, ಬ್ರೋಕರೇಜ್ ಸಂಸ್ಥೆಯಾದ ಏಷ್ಯನ್ ಮಾರ್ಕೆಟ್ ಸೆಕ್ಯುರಿಟೀಸ್ (AMSEC) ಈ ಸ್ಟಾಕ್ ಡಿಸೆಂಬರ್ 2026 ರವರೆಗೆ ಮಲ್ಟಿಬ್ಯಾಗರ್ ಆದಾಯವನ್ನು ನೀಡುತ್ತದೆ ಎಂದು ಅಂದಾಜಿಸಿದೆ.

ಈ ಷೇರುಗಳ ಮೇಲೆ 'ಖರೀದಿ'ಗೆ ಕರೆ ನೀಡಿದೆ. 1,607 ರೂಪಾಯಿಯ ಗುರಿ ಬೆಲೆಯನ್ನು ಈ ಸ್ಟಾಕ್‌ಗೆ ನೀಡಿದೆ. ಇದರ ಪ್ರಸ್ತುತ ಬೆಲೆಗಿಂತ 100 ಪ್ರತಿಶತ ಹೆಚ್ಚಳ ಇದಾಗಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ಈ ಸಂಸ್ಥೆಯು 14.8 ಕೋಟಿ ರೂ. ಲಾಭವನ್ನು ವರದಿ ಮಾಡಿದೆ. ಇದು ಹಿಂದಿನ ತ್ರೈಮಾಸಿಕದ ರೂ. 89 ಲಕ್ಷಕ್ಕೆ ಹೋಲಿಸಿದರೆ, ಶೇ. 1,562ರಷ್ಟು ಹೆಚ್ಚಾಗಿದೆ.ಹಿಂದಿನ ವರ್ಷದ ತ್ರೈಮಾಸಿಕದಲ್ಲಿ 7.8 ಕೋಟಿ ರೂ. ನಷ್ಟ ಅನುಭವಿಸಿತ್ತು.