More

    ಬ್ಯಾಕ್-ಟು-ಬ್ಯಾಕ್ ಆರ್ಡರ್‌ ಪಡೆದುಕೊಂಡ ಐಟಿ ಕಂಪನಿ: ಒಂದೇ ದಿನದಲ್ಲಿ ಷೇರು ಬೆಲೆ 14.45% ಜಿಗಿತ

    ಮುಂಬೈ: ಐಟಿ ಸಂಬಂಧಿತ ವಲಯದ ಸ್ಮಾಲ್ ಕ್ಯಾಪ್ ಕಂಪನಿಯಾದ ಝಾಗಲ್ ಪ್ರಿಪೇಯ್ಡ್ ಓಷನ್ ಸರ್ವಿಸಸ್ ಲಿಮಿಟೆಡ್ (Zaggle Prepaid Ocean Services Ltd) ಷೇರುಗಳ ಬೆಲೆ ಮಂಗಳವಾರ ವಹಿವಾಟಿನಲ್ಲಿ 14.45% ರಷ್ಟು ಹೆಚ್ಚಳ ಕಂಡಿತು.

    ಏಕೆಂದರೆ ಕಂಪನಿಯು ಬ್ಯಾಕ್-ಟು-ಬ್ಯಾಕ್ ಆರ್ಡರ್‌ಗಳನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಈ ಷೇರುಗಳ ಬೆಲೆ ಶೇ. 14.45ರಷ್ಟು ಹೆಚ್ಚಳವಾಗಿ 290.35 ರೂಪಾಯಿ ತಲುಪಿದವು. ಈ ಕಂಪನಿಯ ಷೇರುಗಳ ಬೆಲೆ ಕಳೆದ 2 ವಾರಗಳಲ್ಲಿ 25% ಮತ್ತು ವರ್ಷದಿಂದ ಇಲ್ಲಿಯವರೆಗೆ 33% ಹೆಚ್ಚಳ ಕಂಡಿವೆ.

    ಸೆಪ್ಟೆಂಬರ್ 22, 2023 ರಂದು ಈ ಕಂಪನಿಯ ಷೇರುಗಳನ್ನು ಪಟ್ಟಿ ಮಾಡಲಾಗಿದ್ದು, 164 ರೂಪಾಯಿಗಳ ಐಪಿಒ ಬೆಲೆಯಲ್ಲಿ ವ್ಯಾಪಾರವನ್ನು ಪ್ರಾರಂಭಿಸಿತು. ಪ್ರತಿ ಷೇರಿಗೆ ರೂ 164 ರ ಐಪಿಒ ಬೆಲೆಯಿಂದ ಸ್ಟಾಕ್ ಸುಮಾರು 76.22% ಗಳಿಸಿದೆ. ಕಂಪನಿಯ ಮಾರುಕಟ್ಟೆ ಬಂಡವಾಳ 3,535.31 ಕೋಟಿ ರೂ. ಇದೆ.

    ಬೆನೆಟ್​, ಕೋಲ್​ಮನ್​ ಆ್ಯಂಡ್​ ಕಂಪನಿ ಲಿಮಿಟೆಡ್​ ಜತೆ ಒಪ್ಪಂದ ಮಾಡಿಕೊಂಡಿದೆ. ಈಸಿ ಟ್ರಿಪ್ ಪ್ಲಾನರ್‌ ಜತೆಗೂ ಒಪ್ಪಂದ ಮಾಡಿಕೊಂಡಿದೆ.

    ಕಾರ್ಪೊರೇಟ್ ಗ್ರಾಹಕರಿಗೆ ಇಂಟಿಗ್ರೇಟೆಡ್ ಟ್ರಾವೆಲ್ ಮತ್ತು ಎಕ್ಸ್‌ಪೆನ್ಸ್ ಮ್ಯಾನೇಜ್‌ಮೆಂಟ್ ಪರಿಹಾರಗಳನ್ನು ಒದಗಿಸಲಿದೆ. ಕ್ವೆಸ್ ಕಾರ್ಪ್ ಲಿಮಿಟೆಡ್‌ ಜತೆಗೂ ಒಪ್ಪಂದ ಮಾಡಿಕೊಂಡಿದೆ. ಇದು ವಾರ್ಷಿಕ 10 ಕೋಟಿ ರೂ. ಮೊತ್ತದ ಆರ್ಡರ್​ ಆಗಿದೆ. ಈ ಆರ್ಡರ್​ ಕಾರ್ಯಗತಗೊಳಿಸಬೇಕಾದ ಅವಧಿಯು 14 ಫೆಬ್ರವರಿ 2024 ರಿಂದ 31 ಜನವರಿ 2025 ರವರೆಗೆ ಇರುತ್ತದೆ.

    ಆಕ್ಸಿಸ್ ಬ್ಯಾಂಕ್‌ ಜತೆಗೂ ಸೇವಾ ಒಪ್ಪಂದ ಮಾಡಿಕೊಂಡಿದೆ. ಪಾವತಿಸಬೇಕಾದ ಸಾಫ್ಟ್‌ವೇರ್ ಮತ್ತು ವೆಚ್ಚ ನಿರ್ವಹಣೆ ಸಾಫ್ಟ್‌ವೇರ್ ಮತ್ತು ಕ್ರೆಡಿಟ್ ಕಾರ್ಡ್‌ ಸಂಬಂಧಿತು ಸೇವೆ ಒದಗಿಸುವ ಒಪ್ಪಂದ ಇದಾಗಿದೆ. ಈ ಆರ್ಡರ್ ಗಾತ್ರವು 7 ಕೋಟಿ ರೂ. ಇದೆ. Zaggle ಪ್ರಿಪೇಯ್ಡ್ ಷೇರುಗಳ 52-ವಾರದ ಗರಿಷ್ಠ ಬೆಲೆ ಪ್ರತಿ ರೂ 298.80 ಮತ್ತು ಕನಿಷ್ಠ ಬೆಲೆ ರೂ 155.60 ಇದೆ. ಈ ಕಂಪನಿಯ ಷೇರುಗಳು ಕಳೆದ 2-ವಾರಗಳಲ್ಲಿ 25% ಲಾಭ ನೀಡಿವೆ. ಕಳೆದ 3-ತಿಂಗಳಲ್ಲಿ 18% ರಷ್ಟು ಏರಿಕೆ ಕಂಡಿವೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts