ನ್ಯೂಸ್

ಬಡ ಮಕ್ಕಳು-ವೃದ್ಧರ ಮೊಗದಲ್ಲಿ ನಗು ಮೂಡಿಸಿತು ರಿಲಯನ್ಸ್ ಫೌಂಡೇಷನ್​ನ 'ದಿ ಸೌಂಡ್ ಆಫ್ ಮ್ಯೂಸಿಕ್' ವಿಶೇಷ ಪ್ರದರ್ಶನ

ನವದೆಹಲಿ: ಬಡ ಮಕ್ಕಳು ಹಾಗೂ ಹಿರಿಯ ನಾಗರಿಕರಿಗಾಗಿ ರಿಲಯನ್ಸ್ ಫೌಂಡೇಷನ್​ 'ದಿ ಸೌಂಡ್ ಆಫ್ ಮ್ಯೂಸಿಕ್' ವಿಶೇಷ ಪ್ರದರ್ಶನ ಹಮ್ಮಿಕೊಂಡಿತ್ತು. ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಈ ಪ್ರದರ್ಶನವನ್ನು ಒಟ್ಟು 3,400 ಮಕ್ಕಳು-ಹಿರಿಯ ನಾಗರಿಕರಿಗೆ ಸಮರ್ಪಿಸಲಾಯಿತು.

ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಹಲವಾರು ವರ್ಷಗಳಿಂದ ಮಕ್ಕಳಿಗಾಗಿ ಹಮ್ಮಿಕೊಂಡು ಬರುತ್ತಿದ್ದ ಕಾರ್ಯಕ್ರಮಗಳ ಅಂಗವಾಗಿ ಈ ಪ್ರದರ್ಶನ ಆಯೋಜಿಸಲಾಗಿತ್ತು.

ರಿಲಯನ್ಸ್ ಫೌಂಡೇಷನ್ ಬೆಂಬಲಿತ 18 ಎನ್​ಜಿಒಗಳ ಮಕ್ಕಳು ಮತ್ತು ಹಿರಿಯ ನಾಗರಿಕರಿಗಾಗಿ ಆಯೋಜಿಸಲಾದ ಈ ವಿಶೇಷ ಪ್ರದರ್ಶನಗಳು ಹಾಜರಿದ್ದವರ ಮೊಗದಲ್ಲಿ ನಗು ಮೂಡಿಸಿದವು.

ರಿಲಯನ್ಸ್ ಫೌಂಡೇಷನ್​ನ ಎಜುಕೇಷನ್ ಆ್ಯಂಡ್​ ಸ್ಪೋರ್ಟ್ಸ್ ಫಾರ್ ಆಲ್ (ಇಎಸ್ಎ) ಕಾರ್ಯಕ್ರಮವು 2010ರಿಂದ ನಡೆಯುತ್ತಿದ್ದು, ಮಕ್ಕಳ ಸಮಗ್ರ ಮತ್ತು ಅಂತರ್ಗತ ಅಭಿವೃದ್ಧಿಗೆ, ಅವರ ಆಕಾಂಕ್ಷೆಗಳನ್ನು ಈಡೇರಿಕೆಗೆ ಮತ್ತು ಅವರ ಸಾಧಿಸುವ ಸಾಮರ್ಥ್ಯವನ್ನು ರೂಪಿಸಿಕೊಳ್ಳುವಲ್ಲಿ ನಿರಂತರ ನೆರವು ಒದಗಿಸಿದೆ.