ನ್ಯೂಸ್

ಒಟಿಟಿಗೆ ಬರಲಿದೆ 'ಲಿಯೋ' ನಟಿಯ ಬಹುನಿರೀಕ್ಷಿತ ಸಿನಿಮಾ!

ಮೋಹನ್​ ಶೆಟ್ಟಿ

ತಮಿಳುನಾಡು: ಇತ್ತೀಚೆಗಷ್ಟೇ ತಮಿಳು ಚಿತ್ರರಂಗದ ಸ್ಟಾರ್​ ನಟ, ದಳಪತಿ ವಿಜಯ್​ ಜತೆಗೆ ಪ್ಯಾನ್​ ಇಂಡಿಯಾ 'ಲಿಯೋ' ಸಿನಿಮಾದಲ್ಲಿ ನಟಿಸಿ, ಮಿಂಚಿದ ಬಹುಭಾಷಾ ನಟಿ ತ್ರಿಶಾ ಕೃಷ್ಣನ್​ ಇದೀಗ ಮತ್ತೊಂದು ಚಿತ್ರದ ಮುಖೇನ ಸಿನಿಪ್ರೇಕ್ಷಕರನ್ನು ಒಟಿಟಿಯಲ್ಲಿ ಮನರಂಜಿಸಲು ಸಜ್ಜಾಗಿದ್ದಾರೆ.

ಅರುಣ್ ವಸೀಗರನ್ ನಿರ್ದೇಶಿಸಿ, ಬರೆದ ಕ್ರೈಮ್-ಥ್ರಿಲ್ಲರ್ 'ದಿ ರೋಡ್‌'ನಲ್ಲಿ ನಾಯಕಿಯಾಗಿ ತ್ರಿಶಾ ಅಭಿನಯಿಸಿದ್ದರು. ಈ ಸಿನಿಮಾ ಕಳೆದ ತಿಂಗಳು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಇದೀಗ ಸಿನಿಮಾ ಡಿಜಿಟಲ್​ನಲ್ಲಿ ರಿಲೀಸ್​ಗೆ ಮುಂದಾಗಿದ್ದು, ತಮಿಳು ಮತ್ತು ತೆಲುಗು ಎರಡೂ ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ.

ಒಟಿಟಿ ಪ್ಲಾಟ್​​ಫಾರ್ಮ್​​ 'ಆಹಾ'ದಲ್ಲಿ 'ದಿ ರೋಡ್'​ ಸಿನಿಮಾ ಸ್ಟ್ರೀಮ್ ಆಗಲಿದ್ದು, ತಮಿಳು ಮತ್ತು ತೆಲುಗು ಎರಡೂ ಆವೃತ್ತಿಗಳಲ್ಲಿ ಲಭ್ಯವಿರಲಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದವರು ಈಗ ಒಟಿಟಿಯಲ್ಲಿ ಈ ಸಿನಿಮಾವನ್ನು ನೋಡಬಹುದು,(ಏಜೆನ್ಸೀಸ್).