ಬೆಂಗಳೂರು: ಜನದನಿ ಸರಕಾರೇತರ (ಎನ್ಜಿಒ) ಸಂಸ್ಥೆ ಕಳೆದ ಒಂಬತ್ತು ವರ್ಷಗಳಿಂದ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಾ, ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿದೆ.
ಯುವಜನತೆಯಲ್ಲಿ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಗಳನ್ನು ತಡೆಗಟ್ಟುವ ಕುರಿತು ಆರೋಗ್ಯಕರ ಚಿಂತನೆ ಮತ್ತು ಜವಾಬ್ದಾರಿಯನ್ನು ಹುಟ್ಟಿಸುವ ಉದ್ದೇಶದಿಂದ ಜನದನಿ ಸಂಸ್ಥೆ ಆನ್ಲೈನ್ ವೇದಿಕೆಯಲ್ಲಿ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ ಏರ್ಪಡಿಸಿತ್ತು.
ಇದೀಗ ಈ ಸ್ಪರ್ಧೆಯ ಫಲಿತಾಂಶ ಬಂದಿದ್ದು, ವಿಜೇತರ ಪಟ್ಟಿ ಹೀಗಿದೆ.
ಪ್ರಬಂಧ ಸ್ಪರ್ಧೆ
- ಪ್ರಥಮ ಬಹುಮಾನ: ಫಾತಿಮಾ ಅಂಜುಮ್.ಆರ್ - 9ನೇ ತರಗತಿ, ಸರಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ, ಗೌರಿಪಾಳ್ಯ, ಬೆಂಗಳೂರು
- ದ್ವಿತೀಯ ಬಹುಮಾನ: ವಿದ್ಯಶ್ರೀ ಗಣಪತಿ ಸೂರ್ಯವಂಶಿ, 10ನೇ ತರಗತಿ, ಸರಕಾರಿ ಪ್ರೌಢಶಾಲೆ, ಟಕ್ಕಳಕಿ, ವಿಜಯಪುರ ಜಿಲ್ಲೆ
- ತೃತೀಯ ಬಹುಮಾನ: ತ್ರಿಶಾ ಎ.ಎಂ, 10ನೇ ತರಗತಿ, ಸರಕಾರಿ ಪ್ರೌಢಶಾಲೆ, ಅಂಗರೇಖನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ
- ಮೆಚ್ಚುಗೆ ಬಹುಮಾನ: ನಾಗಮ್ಮ ಅಗಸರ್, ಕೊಕಟನೂರು, ರಕ್ಷಿತಾ ಎಂ.ಹುಡುಕುಳ, ಕುಸುಮಾ ಆರ್. ತುಮಕೂರು
ಚಿತ್ರಕಲಾ ಸ್ಪರ್ಧೆ
- ಪ್ರಥಮ ಬಹುಮಾನ: ವರ್ಷಿಣಿ ಎ.ಎಂ, 9ನೇ ತರಗತಿ, ಸರಕಾರಿ ಪ್ರೌಢಶಾಲೆ, ಅಂಗರೇಖನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ
- ದ್ವಿತೀಯ ಬಹುಮಾನ: ಪೂರ್ವಿ ದಯಾನಂದ ಶೇಟ್, ೯ನೇ ತರಗತಿ, ಶ್ರೀ. ಮಾರಿಕಾಂಬ ಸರಕಾರಿ ಪ್ರೌಢಶಾಲೆ, ಶಿರಸಿ
- ತೃತೀಯ ಬಹುಮಾನ: ಶ್ರೀರಕ್ಷಾ ಎ ಎಚ್, ೮ನೇ ತರಗತಿ, ಸೇಂಟ್ ಮೇರೀಸ್ ಕಾನ್ವೆಂಟ್ ಹೈಸ್ಕೂಲ್, ಯಂತ್ರಾಪುರ, ಹರಿಹರ ದಾವಣಗೆರೆ ಜಿಲ್ಲೆ
- ಮೆಚ್ಚುಗೆ ಬಹುಮಾನ: ಸ್ವಾತಿ ವಿ ಪಾಟೀಲ್- ಅಣ್ಣಿಗೇರಿ, ಕರಣ್ ಸಾವು ರಾಠೋಡ್- ಟಕ್ಕಳಕಿ, ನಿಸರ್ಗ ಎಸ್ ಬಿ, ಯಂತ್ರಾಪುರ
ಹದಿಹರೆಯದ ಮಕ್ಕಳಿಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪೋಷಕರು, ಶಾಲಾ ಸಿಬ್ಬಂದಿ ಯೋಚಿಸಬೇಕು ಎಂದು ಜನದನಿ ಟ್ರಸ್ಟ್ನ ಅಧ್ಯಕ್ಷೆ ಜಯಲಕ್ಷ್ಮಿ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.