ನ್ಯೂಸ್

ಡೆಲಿಗೇಟ್​ ರದ್ದುಗೊಳಿಸುವ ಹುನ್ನಾರ!

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಗಳ ಒಕ್ಕೂಟದ (ಕೋಮುಲ್​) ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಆಕಾಂಗಳು ಶತಾಯಗತಾಯ ಗೆಲ್ಲಲೇಬೇಕು ಎಂದು ಸಿದ್ಧತೆ ಕೈಗೊಂಡಿದ್ದಾರೆ.

ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಚುನಾವಣೆಯನ್ನು ಜೂ.25ಕ್ಕೆ ನಿಗದಿಪಡಿಸಲಾಗಿದೆ. ಒಕ್ಕೂಟ ಪ್ರವೇಶಿಸಲು ಬಂಗಾರಪೇಟೆ ಕ್ಷೇತ್ರದಿಂದ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಮುಂದೆ ಬಂದಿದ್ದು, ಬಂಗಾರಪೇಟೆ ತಾಲೂಕಿನ ನೆತ್ತಿಬಲೆ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂದಿಂದ ಪ್ರತಿನಿಧಿ (ಡೆಲಿಗೇಟ್​) ಹಕ್ಕು ಪಡೆದುಕೊಂಡಿದ್ದಾರೆ. ಇದನ್ನು ರದ್ದುಗೊಳಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ.

ಚುನಾವಣೆಯ ದಿನಾಂಕ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರು ಪ್ರಕ್ರಿಯೆಗಳನ್ನು ಕೈಗೊಳ್ಳುವಂತೆ ಸೂಚಿಸಿದ ಬೆನ್ನಲ್ಲೇ, ಒಕ್ಕೂಟದ ಅಧಿಕಾರಿಗಳು ಸಂಗಳಿಗೆ ಡೆಲಿಗೇಟ್​ ವಿವರಗಳನ್ನು ಏ.25ರೊಳಗೆ ಕಳುಹಿಸಿಕೊಡಲು ಸುತ್ತೋಲೆ ಹೊರಡಿಸಿ ಸೂಚಿಸಿದ್ದರು. ಆದರ ಪ್ರಕಾರ ಸಂಗಳಲ್ಲಿ ನಿರ್ದೇಶಕರ ಸಭೆ ನಡೆಸಿ, ಡೆಲಿಗೇಟ್​ ವಿವರಗಳನ್ನು ಕೋಲಾರ ಜಿಲ್ಲಾ ಉಪನಿಬಂಧಕರ ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿ ಡೆಲಿಗೇಟ್​ ಪರಿಶೀಲನೆ ನಡೆಯುತ್ತಿದೆ. ಇದರಲ್ಲಿ ನಾರಾಯಣಸ್ವಾಮಿ ಅವರ ಪ್ರತಿನಿಧಿ ಹಕ್ಕನ್ನು ರದ್ದುಗೊಳಿಸುವ ಹುನ್ನಾರ ಎದುರಾಳಿಗಳಿಂದ ನಡೆಯುತ್ತಿದ್ದು, ದೂರು ನೀಡಿದ್ದಾರೆ.

ಒಕ್ಕೂಟದ ವಿಚಾರದಲ್ಲಿ ಶಾಸಕರಾದ ಬಂಗಾರಪೇಟೆ ಎಸ್​.ಎನ್​.ನಾರಾಯಣಸ್ವಾಮಿ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ನಡುವೆ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. ಎರಡೂ ಅವಧಿಯಲ್ಲಿ ಭ್ರಷ್ಟಾಚಾರಗಳು ನಡೆದಿದ್ದು, ತನಿಖೆ ನಡೆಸಬೇಕು ಎಂದು ಶಾಸಕ ನಾರಾಯಣಸ್ವಾಮಿ ಅಧಿವೇಶನದಲ್ಲಿ ಧ್ವನಿ ಎತ್ತಿದ್ದು, ಜತೆಗೆ ಸಹಕಾರ ಸಚಿವರಿಗೆ ದೂರು ನೀಡಿದ್ದರು. ಇದು ನಂಜೇಗೌಡರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಂದಿನಿಂದ ಇಂದಿನ ವರೆಗೂ ಇಬ್ಬರ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ಇಬ್ಬರೂ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದು, ನಾರಾಯಣಸ್ವಾಮಿ ಒಕ್ಕೂಟದ ಪ್ರವೇಶ ಮಾಡದಂತೆ ಮಾಡಲು ಗಟ್ಟಿ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ.

ಒಕ್ಕೂಟದ ನಿರ್ದೇಶಕರಾಗಲು ಹಲವು ನಿಯಮಗಳು ಇದ್ದು, ಅದ್ಯಾವುದನ್ನು ಶಾಸಕ ನಾರಾಯಣಸ್ವಾಮಿ ಪಾಲಿಸಿಲ್ಲ, ಎಂಬ ಆರೋಪ ಕೇಳಿ ಬಂದಿದ್ದು, ನಾರಾಯಣಸ್ವಾಮಿ ಅವರಿಗೆ ಸಂಕಷ್ಟ ಎದುರಾಗಲಿದೆ.

ಒಂದು ಗುಂಪು ಚುನಾವಣೆ ನಡೆಯದಂತೆ ತಡೆಯೊಡ್ಡಲು ಮುಂದಾಗಿದ್ದರೆ, ಮತ್ತೊಂದು ಗುಂಪು ಡೆಲಿಗೇಟ್​ ಆಗಿ ಬಂದಿರುವ ನಾರಾಯಣಸ್ವಾಮಿ ಅವರ ಆಯ್ಕೆಯನ್ನು ಅನರ್ಹಗೊಳಿಸಲು ವೇದಿಕೆ ಸಿದ್ಧಗೊಳಿಸಿದೆೆ.

* ಆಯ್ಕೆ ಕಾನೂನು ಬಾಹಿರ...?

ಬಂಗಾರಪೇಟೆ ತಾಲೂಕಿನ ನತ್ತಿಬೆಲೆ ಪ್ರಾಥಮಿಕ ಹಾಲು ಸಹಹಾರ ಸಂದಲ್ಲಿ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಷೇರು ಪಡೆದುಕೊಂಡಿದ್ದಾರೆ. ಈಚೆಗೆ ನಡೆದ ಒಕ್ಕೂಟದ ಸರ್ವ ಸದಸ್ಯರ ಸಭೆಯಲ್ಲೂ ಪಾಲ್ಗೊಂಡಿದ್ದರು. ಆಗಲೂ ಸಹ ಸಭೆಗೆ ಹಾಜರಾಗಲು ಅವಕಾಶ ನೀಡಬಾರದು, ಎಂದು ಕೆಲ ಹಾಲು ಉತ್ಪಾದಕರು, ಅಧ್ಯಕ್ಷರು ಜಿಲ್ಲಾ ಸಹಕಾರ ಸಂಗಳ ಉಪ ನಿಬಂಧಕರಿಗೆ ದೂರು ನೀಡಿದ್ದರು. ನಾರಾಯಣಸ್ವಾಮಿ ಅವರು ಕಾನೂನು ಬಾಹಿರವಾಗಿ ಡೆಲಿಗೇಟ್​ ಆಗಿ ಆಯ್ಕೆಯಾಗಿದ್ದು, ಅವರು ಹಾಲು ಹಾಕಿರುವುದಕ್ಕೆ ದಾಖಲೆಗಳಿಲ್ಲ ಎಂದು ಬಂಗಾರಪೇಟೆ ಕೆಲ ಹಾಲು ಉತ್ಪಾದಕರು, ಮತದಾರರ ಪಟ್ಟಿ ಪರಿಶೀಲನಾಧಿಕಾರಿಗಳಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪರಿಶೀಲನೆ ನಡೆಸಿದಾಗ ಹಲವು ವಿಷಯಗಳು ಬೆಳಕಿಗೆ ಬಂದಿವೆ. 2023-&24ನೇ ಸಾಲಿನಲ್ಲಿ ನತ್ತಿಬೆಲೆ ಸಹಕಾರ ಸಂದಿಂದ ಷೇರು ನೀಡಿರುವುದಕ್ಕೆ ದಾಖಲೆಯಿಲ್ಲ. ಹಾಲು ಸರಬರಾಜು ಮಾಡಿ 15 ದಿನಕ್ಕೊಮ್ಮೆ ಹಾಲಿನ ಬಟವಾಡೆ ಬ್ಯಾಂಕ್​ ಖಾತೆಗೆ ವಹಿವಾಟು ಆಗಿರುವುದಕ್ಕೆ, ರಾಜ್ಯ ಸರ್ಕಾರದಿಂದ ಬರುವ 5 ರೂ. ಪ್ರೋತ್ಸಾಹ ಧನ ಬ್ಯಾಂಕ್​ಗೆ ಜಮೆ ಆಗಿರುವುದಕ್ಕೆ ದಾಖಲೆಯಿಲ್ಲ. ಈ ತೊಡಕುಗಳಿಂದ ಪಾರಾಗುವ ಪ್ರಯತ್ನಕ್ಕೆ ಎಸ್​.ಎನ್​.ನಾರಾಯಣಸ್ವಾಮಿ ಮುಂದಾಗಿದ್ದಾರೆ.

* ಮತದಾರರ ಮಾಹಿತಿ ಸಂಗ್ರಹ

ಒಕ್ಕೂಟದ ವ್ಯಾಪ್ತಿಗೆ 6 ತಾಲೂಕುಗಳು ಒಳಪಟ್ಟಿದ್ದು, 13 ಮಂದಿ ಚುನಾಯಿತ ಹಾಗೂ 5 ಮಂದಿ ವಿವಿಧ ಇಲಾಖೆಗಳ ಪ್ರತಿನಿಧಿಗಳಾಗಿರುತ್ತಾರೆ. ಪ್ರತಿ ತಾಲೂಕು ವ್ಯಾಪ್ತಿಗೆ ಇಬ್ಬರು ನಿರ್ದೇಶಕರ ಆಯ್ಕೆಗೆ ಅವಕಾಶವಿದ್ದು, ಇದರಲ್ಲಿ ಇಬ್ಬರು ಮಹಿಳಾ ನಿರ್ದೇಶಕರ ಆಯ್ಕೆಗೆ ಅವಕಾಶ ಇದೆ. ಆಕಾಂಗಳು ತಮ್ಮ ಮತ ಕ್ಷೇತ್ರದ ವ್ಯಾಪ್ತಿಯಲ್ಲಿನ ಮತದಾರರನ್ನು ಸೆಳೆಯುವ ತಂತ್ರಗಳನ್ನು ಈಗಿನಿಂದಲೇ ಶುರು ಮಾಡಿದ್ದಾರೆ. ಡೆಲಿಗೇಟ್​ ಮಾಹಿತಿ ಕಲೆ ಹಾಕಿ ಮತ ನೀಡುವಂತೆ ಮನವೊಲಿಸುವ ಪ್ರಯತ್ನ ನಡೆಸುತ್ತಿರುವ ಜತೆಗೆ ಆಮಿಷವನ್ನೂ ಒಡ್ಡತೊಡಗಿದ್ದಾರೆಂಬುದು ಮೂಲಗಳಿಂದ ತಿಳಿದು ಬಂದಿದೆ. ಕೊಟ್ಯಂತರ ರೂ. ವಹಿವಾಟು ನಡೆಯುವ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರಾಗಲು ಸಾಕಷ್ಟು ಮಂದಿ ಮುಂದಾಗಿದ್ದು, ಮತದಾರರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.