ನ್ಯೂಸ್

VIDEO |ಅಬ್ಬಾ..ಇದು ಭಯಂಕರ ಫೋಟೋಶೂಟ್; ವರನ ಸ್ಥಿತಿ ಹೇಗಿದೆ? ಎಂದ ನೆಟ್ಟಿಗರು

ನವದೆಹಲಿ: ಮದುವೆಯಾಗಲಿರುವ ಜೋಡಿಗಳು..ವಿವಾಹಪೂರ್ವ ಫೋಟೋಶೂಟ್, ಮದುವೆಯ ನಂತರದ ಫೋಟೋಶೂಟ್ ಮಾಡಿಸುತ್ತಾರೆ. ಅಂತೆಯೇ ಹಲವು ಮದುವೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಧುವಿನ ಈ ಸ್ಟೈಲ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಇನ್​ಸ್ಟಾಗ್ರಾಮ್​​​ ಖಾತೆಯೊಂದರ ಮೂಲಕ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. "ತಾಯಿ ಇದು ಯಾವ ಭಂಗಿ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಆಗಸ್ಟ್ 8 ರಂದು ಹಂಚಿಕೊಂಡ ವೈರಲ್ ವಿಡಿಯೋ ಈಗಾಗಲೇ 27 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.

ವಿಡಿಯೋದಲ್ಲಿ ಕೆಂಪು ಲೆಹೆಂಗಾ ಧರಿಸಿರುವ ಹುಡುಗಿಯೊಬ್ಬಳು ಹುಡುಗನ ಜತೆ ನಿಂತಿರುವುದನ್ನು ನೋಡಬಹುದು. ವಧು ತಕ್ಷಣವೇ ತನ್ನ ಒಂದು ಕಾಲನ್ನು ಅವನ ತೊಡೆಯ ಮೇಲೆ ಮತ್ತು ಇನ್ನೊಂದು ಅವನ ಕುತ್ತಿಗೆಯ ಮೇಲೆ ತನ್ನನ್ನು ಮೇಲಕ್ಕೆತ್ತಿದಳು. ಇದಲ್ಲದೆ, ಅವರು ನಗುತ್ತಾ ಫೋಟೋಗಳಿಗೆ ಪೋಸ್ ನೀಡಿದರು.

ಹನಿ ಸಿಂಗ್ ಹಾಡಿರುವ 'ಪಾರ್ಟಿ ವಿತ್ ಭೂತನಾಥ್' ಹಾಡು ಹಿನ್ನಲೆಯಲ್ಲಿ ಪ್ಲೇ ಆಗುತ್ತಿದೆ. ಈ ಸ್ಟಂಟ್ ವಧು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿ ತಮಾಷೆ ಮಾಡಿದ್ದಾರೆ.