ನ್ಯೂಸ್

ವಿದೇಶಿ ಮಹಿಳೆಯೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆ ಹೋಗಿದ್ದವನಿಗೆ ಅಲ್ಲೇ ಕಾದಿತ್ತು ಸಾವು

ಉತ್ತರಕನ್ನಡ: ಪ್ರವಾಸಕ್ಕೆಂದು ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ತೆರಳಿದ್ದ ವ್ಯಕ್ತಿ ಈಜಲು ಹೋಗಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿಯ ರಿಷಬ್​ ಸಿಂಗ್​ (36) ಮೃತ ವ್ಯಕ್ತಿ. ಗೋಕರ್ಣದ ಕುಡ್ಲೆ ಬೀಚ್​​ನಲ್ಲಿ ಘಟನೆ ನಡೆದಿದೆ. ಇವರು ವಿದೇಶಿ ಮಹಿಳೆಯೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಸಮುದ್ರಕ್ಕೆ ಈಜಲು ಹೋಗಿದ್ದಾಗ ಅವಘಡ ಸಂಭವಿಸಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)