ನ್ಯೂಸ್

ನೋಟಿನ ಹಾರ ಹಿಡಿದು ಓಡಿದ ಖದೀಮ.. ಕಳ್ಳನನ್ನು ಹಿಂಬಾಲಿಸಿದ ವರ ಮತ್ತು ಕುಟುಂಬಸ್ಥರು..! | Marriage

ಮೀರತ್​: ಮದುವೆ(Marriage) ಮೆರವಣಿಗೆ ವೇಳೆ ವರನ ಕೊರಳಲ್ಲಿದ್ದ ನೋಟಿನ(ನಗದು ಹಣ) ಹಾರವನ್ನು ಕದ್ದ ಕಳ್ಳನು ಟ್ರಕ್​ ಏರಿ ಓಡಿ ಹೋಗಿದ್ದು, ವರ ಮತ್ತು ಕುಟುಂಬಸ್ಥರು ಮೆರವಣಿಗೆ ಬಿಟ್ಟು ಕಳ್ಳನನ್ನು ಹಿಡಿಯಲು ಹಿಂಬಾಲಿಸುತ್ತಿರುವ ಘಟನೆ ಮೀರತ್​ನಲ್ಲಿ ಇತ್ತಿಚಿಗೆ ನಡೆದಿದೆ.

ಅಲ್ಲದೆ, ಕುದುರೆ ಮೇಲೆ ಹೋಗುತ್ತಿದ್ದ ವರ ಮೆರವಣಿಗೆಯ ವಿಧಿ ವಿಧಾನಗಳನ್ನು ಬಿಟ್ಟು ಕಳ್ಳನನ್ನು ಹಿಡಿಯಲು ಟ್ರಕ್​ ಹತ್ತುತ್ತಿರುವ ಈ ಘಟನೆಯ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇನ್ನೂ ಆರೋಪಿಯು ನೋಟಿನ ಹಾರ ಕಿತ್ತುಕೊಂಡು ತಪ್ಪಿಸಿಕೊಳ್ಳಲು ಚಲಿಸುತ್ತಿರುವ ಲೋಡ್​ ಲಾರಿ ಹತ್ತಿದ್ದಾನೆ. ಇದನ್ನೇ ಹಿಂಬಾಲಿಸಿದ ವರ ಕೂಡ ಚಲಿಸುತ್ತಿರುವ ಲಾರಿ(ಟ್ರಕ್) ಹತ್ತಿ ಬಾಗಿಲಿನಿಂದ ಚಾಲಕನಿಗೆ ನಿಲ್ಲಿಸಲು ಹೇಳಿದ್ದಾನೆ. ನಿಲ್ಲಲು ಚಾಲಕ ನಿರಾಕಾರಿಸಿದಾಗ, ಚಲಿಸುತ್ತಿರುವ ಟ್ರಕ್​ನ ಬಾಗಿಲಿನ ಡೋರ್​ ಮೂಲಕ ಒಳಹೋಗಿದ್ದಾನೆ. ಬಳಿಕ ಕುಟುಂಬಸ್ಥರು ಬಂದ ಮೇಲೆ ಟ್ರಕ್​ ನಿಲ್ಲಿಸಿದ್ದು, ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಇನ್ನೂ ಪಾದಾಚಾರಿ ಒಬ್ಬನು ಈ ಘಟನೆಯನ್ನು ತನ್ನ ಮೋಬೈಲ್​ನಲ್ಲಿ ಚಿತ್ರಿಸಿಕೊಂಡಿದ್ದಾನೆ. ಇದೀಗ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. (ಏಜೆನ್ಸೀಸ್​).