ನ್ಯೂಸ್

63 ವರ್ಷದ ಕಳ್ಳನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು!

ನೆಲಮಂಗಲ: ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಕಳ್ಳತನ ನಡೆಸಲು ಬಂದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ. ದಾಬಸ್‌ಪೇಟೆ ಸಮೀಪದ ಅನ್ನಪೂರ್ಣೇಶ್ವರಿ ಲೇಔಟ್​​ನಲ್ಲಿರುಬ ಸುಜಾತ ಎಂಬುವರ ಮನೆಗೆ ಕನ್ನ ಹಾಕಲು ಯತ್ನಿಸಿದ್ದ.

ಆರೋಪಿ ತುಮಕೂರಿನ ಸಿರಾಜ್ ಖಾನ್ (63) ಮನೆಯ ಬೀಗ ಒಡೆದು ಮನೆಗಳ್ಳತನಕ್ಕೆ ಯತ್ನಿಸುತ್ತಿದ್ದ. ಈ ವೇಳೆ ಆರೋಪಿಯ ಕೃತ್ಯ ಸ್ಥಳೀಯರ ಗಮನಕ್ಕೆ ಬಂದಿದೆ. ಕೂಡಲೇ ಆರೋಪಿಯನ್ನು ಹಿಡಿದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಮನೆಗೆ ಮುಖ್ಯ ಬಾಗಿಲಿನ ಬೀಗ ಒಡೆದಿದ್ದಾನೆ. ಇದು ಸ್ಥಳಿಯರ ಗಮನಕ್ಕೆ ಬಂದ ಕಾರಣ ದರೋಡೆ ಮಾಡಲು ಸಾಧ್ಯವಾಗಿಲ್ಲ. ಕಳ್ಳತನಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ. ಸ್ಥಳಿಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಸ್ಥಳ ಪರಿಶೀಲಿಸಿದ್ದಾರೆ. ನಂತರ ಆರೋಪಿಯನ್ನು ಬಂಧಿಸಿದ್ದಾರೆ. ದಾಬಸ್​ ಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.