ಹೈದರಾಬಾದ್: ಕೆಲವೇ ದಿನಗಳಲ್ಲಿ ತಾಳಿ ಕಟ್ಟಬೇಕಿದ್ದ ವರ ಮದುವೆ ಮುಂಚೆನೇ ನಾಪತ್ತೆಯಾಗಿರುವ(Missing Person) ಘಟನೆ ಹೈದರಾಬಾದ್ನಲ್ಲಿ ಇತ್ತೀಚಿಗೆ ನಡೆದಿದೆ.
ವರನ ಹಠಾತ್ ಕಣ್ಮರೆಯು ಇಬ್ಬರ (ವಧು-ವರ) ಕುಟುಂಬಗಳನ್ನು ಚಿಂತೆಗೀಡು ಮಾಡಿದೆ. ಅಲ್ಲದೆ, ಈ ಪ್ರಕರಣದಿಂದ ವಧುನಿನ ಮುಂದಿನ ಭವಿಷ್ಯದ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ಇನ್ನು 40 ವರ್ಷದ ಸಂದೀಪ್ ರಮೇಶ್ ನಾಪತ್ತೆಯಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಪೊಲೀಸ್ ಇಲಾಖೆ ಬಲೆ ಬೀಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ :ಹಾವೇರಿ ರೈತನ ಸಾವಿನ ಬಗ್ಗೆ ಸುಳ್ಳು ಸುದ್ದಿ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್ಐಆರ್ ದಾಖಲು | Tejasvi Surya
ಸಂದೀಪ್ ರಮೇಶ್ ಮದುವೆಯನ್ನು ಅವರ ಸಹದ್ಯೋಗಿ ಮಡೇಪಲ್ಲಿಯ ನಿವಾಸಿ ಜತೆ ಇದೇ ಶುಕ್ರವಾರ (ನ.08) ನಿಗದಿಪಡಿಸಲಾಗಿತ್ತು. ಈ ಹಿನ್ನೆಲೆ ಎರಡು ಕುಟುಂಬಗಳು ಮದುವೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಎಲ್ಲರೂ ಮದುವೆ ಸಿದ್ಧತೆ ಕಾರ್ಯದಲ್ಲಿ ಇರಬೇಕಾದಾಗ, ಸಂದೀಪ್ ತಮ್ಮ ಅಣ್ಣ ಶ್ರೀಕಾಂತ್ ಅವರ ಮೋಬೈಲ್ಗೆ ಮೆಸೇಜ್ (ನನಗೆ ಈ ಮದುವೆ ಇಷ್ಟ ಇಲ್ಲ) ಮಾಡಿ ಹೊರಟು ಹೋಗಿದ್ದಾರೆ. ಮೊಬೈಲ್ ಪೋನ್ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ :HD Kumaraswamy Statement | ನಿಖಿಲ್ ಏನೋ ಅಪರಾಧ ಮಾಡಿದ್ದಾನೆ ಎನ್ನುವ ಹಾಗೆ ಕಾಂಗ್ರೆಸ್ ಬಿಂಬಿಸುತ್ತಿದೆ
ಇದರಿಂದ ಕಳವಳಗೊಂಡ ಶ್ರೀಕಾಂತ್, ಖಾನಮೇಟ್ ಎಂಬ ಪ್ರದೇಶದ ತಮ್ಮನ ಬಾಡಿಗೆ ಮನೆಗೆ ಧಾವಿಸಿದ್ದಾನೆ. ಬಾಗಿಲು ಹಾಕಿದ್ದನ್ನು ಕಂಡುಕೊಂಡ ಶ್ರೀಕಾಂತ್, ತಮ್ಮ ಕುಟುಂಬದವರ ಮನೆಗಳು ಸೇರಿದಂತೆ ಇತರ ಪ್ರದೇಶಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಎಲ್ಲಿಯೂ ಸಂದೀಪ್ ಪತ್ತೆಯಾಗದ ಕಾರಣ ಕೂಡಲೇ ಮಾದಾಪುರ ಠಾಣೆಯಲ್ಲಿ ದೂರು ದಾಖಲಿದ್ದಾನೆ.
ತನಿಖೆ ಮೇರೆಗೆ ಸಂದೀಪ್ ಪತ್ತೆಗೆ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ಏಜೆನ್ಸೀಸ್)