ನ್ಯೂಸ್

26/11 ಮುಂಬೈ ದಾಳಿ: ಉಗ್ರ ಕಸಬ್ ವಿರುದ್ಧ ಸಾಕ್ಷಿ ಹೇಳಿ ಆತನಿಗೆ ಶಿಕ್ಷೆಯಾಗುವಂತೆ ಮಾಡಿದ್ದ ದೇವಿಕಾಗೆ ​ಸರ್ಕಾರದಿಂದ ಮನೆ ಮಂಜೂರು!

26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದ ಅತ್ಯಂತ ಕಿರಿಯ ಹಾಗೂ ಪ್ರಮುಖ ಸಾಕ್ಷಿಯಾಗಿದ್ದ ದೇವಿಕ ರೋಟವಾನ್​ ಅವರಿಗೆ ಸುದೀರ್ಘ 5 ವರ್ಷಗಳ ಹೋರಾಟದ ಬಳಿಕ ಕೊನೆಗೆ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(MHADA) ಮನೆ ನೀಡಿದೆ ಎಂದು ಶುಕ್ರವಾರ(ಜೂ.06) ವರದಿಯಾಗಿದೆ.

2008ರ ಮುಂಬೈ ದಾಳಿ ನಡೆಸಿದ ವೇಳೆ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣದಲ್ಲಿ ಭಯೋತ್ಪಾದಕರು ಗುಂಡು ಹಾರಿಸಿದಾಗ ಅವರ ಕಾಲಿಗೆ ಗುಂಡು ತಗುಲಿತು. ಆದರೆ, ಕ್ರೂರ ದಾಳಿಯಿಂದ ಬದುಕುಳಿದರು. ಅವರಿಗೆ ಆಗ ಕೇವಲ 10 ವರ್ಷ ವಯಸ್ಸಿನವರಾಗಿದ್ದರು.(ಇದೀಗ 25 ವರ್ಷ) ಇವರು ಕೋರ್ಟ್​ನಲ್ಲಿ ಸಾಕ್ಷಿ ಹೇಳಿದ್ದರಿಂದ ದಾಳಿ ವೇಳೆ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್​​ ಕಸಬ್ ಅನ್ನು ಶಿಕ್ಷಿಸಲು ಸಾಧ್ಯವಾಯಿತು.

ದಾಳಿಯ ದುರಂತದ ನಂತರ ದೇವಿಕ ಹಾಗೂ ಅವಳ ಕುಟುಂಬದ ಜೀವನ ಎಲ್ಲರೂ ಅಂದುಕೊಂಡಂತೆ ಇರಲ್ಲಿಲ್ಲ. ಮುಖ್ಯವಾಗಿ ಮನೆ ಇಲ್ಲದ ಕಾರಣ ಒಂದು ಸ್ಥಳದಿಂದ ಮತ್ತೊಂದು ಸ್ಥಳಗಳಿಗೆ ಸ್ಥಳಾಂತರಗೊಂಡು ಬಾಡಿಗೆ ಮನೆಯಲ್ಲಿ ವಾಸಿಸತೊಡಗಿದ್ದರು. ಇದೆಲ್ಲ ನಡೆದ ಬಳಿಕ 2020ರಲ್ಲಿ ಬಾಂದ್ರದ ಚೇತನ ಕಾಲೇಜಿನಲ್ಲಿ ಓದುತ್ತಿದ್ದಾಗ ಅರ್ಥಿಕ ದುರ್ಬಲ ವರ್ಗಗಳ ಯೋಜನೆಯಡಿಯಲ್ಲಿ ವಸತಿ ಪಡೆಯಲು ಸರ್ಕಾರದಿಂದ ಸಹಾಯವನ್ನು ಕೋರಿ ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಕೂಡಲೇ ಸರ್ಕಾರ ದೇವಿಕಾಗೆ ಮನೆ ಹಾಗೂ ಉನ್ನತಮಟ್ಟದ ಶಿಕ್ಷಣ ಒದಗಿಸುವಂತೆ ಕೋರ್ಟ್​ ಸೂಚಿಸಿತ್ತು.

2020ರಿಂದ ಇಲ್ಲಿಯವರೆಗೆ ಸುದೀರ್ಘ 5 ವರ್ಷಗಳ ಬಳಿಕ ಇದೀಗ 2025ರ ವರ್ಷದ ಆರಂಭದಲ್ಲಿ ದೇವಿಕಾಗೆ ಸರ್ಕಾರ ಮನೆ ಮಂಜೂರು ಮಾಡಿತು. ಆದರೆ, ಮನೆಯಲ್ಲಿ ಕರೆಂಟ್​​, ಪೆಂಟ್​ ಸೇರಿದಂತೆ ಇನ್ನೀತರ ಸಣ್ಣಪುಟ್ಟ ಕೆಲಸಗಳು ಉಳಿದ್ದರಿಂದ ಇದೀಗ ಸಂಪೂರ್ಣ ಕೆಲಸ ಪೂರ್ಣಗೊಂಡಿದ್ದು, ದೇವಿಕಾಗೆ ಮೆನೆ ಹಸ್ತಾಂತರಿಸಲಾಯಿತು ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)