Girls : ಅಂಧ ಬಾಲಕಿಯರ ಗುಂಪೊಂದು ಶಾಲೆಯ ಸಮವಸ್ತ್ರ ಧರಿಸಿ ಸಾಂಪ್ರದಾಯಕವಾಗಿ ರಸ್ತೆಯಲ್ಲಿ ಡೋಲು ಬಾರಿಸುತ್ತಿರುವ ದೃಶ್ಯ ಇದೀಗ ಎಲ್ಲರ ಗಮನಸೆಳೆಯುತ್ತಿದೆ.
ಇದನ್ನೂ ಓದಿ: ಟ್ರ್ಯಾಕ್ಟರ್ಗೆ ಟ್ರಕ್ ಡಿಕ್ಕಿ: 8 ಮಂದಿ ಸಾವು, 43 ಜನರಿಗೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ.. truck hits tractor
ಈ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಡೋಲ್ನ್ನು ಬಾರಿಸುತ್ತಿದ್ದು,ಅದರಲ್ಲಿರುವ ಲಯ ಹಾಗೂ ಶಕ್ತಿಯನ್ನು ಪ್ರದರ್ಶನ ಮಾಡಿ, ಇವರ ಪ್ರತಿಭೆ ದೈಹಿಕ ಮಿತಿಗಳನ್ನು ಮೀರಿದೆ ಎಂದು ಸಾಬೀತು ಪಡಿಸಿದರು. ವಿದ್ಯಾರ್ಥಿಗಳು ಹಾಕುತ್ತಿದ್ದ ಬೀಟ್ಗಳು ಹೆಮ್ಮೆ ಮತ್ತು ಶಕ್ತಿಯಿಂದ ಪ್ರತಿನಿಧಿಸುತ್ತಿದ್ದು, ಈ ಸದ್ದುಗಳು ನೋಡುಗರನ್ನು ತೀವ್ರವಾಗಿ ಆಕರ್ಷಣೆ ಮಾಡಿದವು.
"ತಾಳ ಎಂದರೇನು ಎಂದು ತೋರಿಸಿದ ಶಿವಾಜಿ ಹೆಣ್ಣುಮಕ್ಕಳು" ಎಂಬ ಶೀರ್ಷಿಕೆಯೊಂದಿಗೆ ಕೆಲವು ದಿನಗಳ ಹಿಂದೆ ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಂಡಿದ್ದ ಈ ವಿಡಿಯೋ ಇದೀಗ ವೈರಲ್ ಆಗಿದೆ. ಇನ್ನು ಈ ವಿಡಿಯೋದಲ್ಲಿ ವಿದ್ಯಾರ್ಥಿಗಳ ತಾಳ ಹಾಗೂ ಅವರ ಸಂಗೀತ ಕೌಶಲ್ಯವನ್ನು ಆಚರಿಸುವುದಲ್ಲದೆ, ವಿದ್ಯಾರ್ಥಿಗಳ ದೃಢಸಂಕಲ್ಪವು ಜನರನ್ನು ಸೆಳೆದಿದೆ.
ಈ ವಿಡಿಯೋ ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ನಿಮ್ಮಲ್ಲಿರುವ ಕಲೆ, ದೃಢನಿಶ್ಚಯ ಮತ್ತು ಶಕ್ತಿಗೆ ಹೃತ್ಪೂರ್ವಕ ನಮನಗಳು ಎಂದು ತಿಳಿಸಿದ್ದಾರೆ. ಇನ್ನೋರ್ವ ತನ್ನ ಇನ್ಸ್ಟಾಗ್ರಾಮ್ನಲ್ಲಿ ಈ ದೃಶ್ಯ ನೋಡಲು ಬಹಳ ಸುಂದರವಾಗಿದೆ. ವರ್ಣಿಸಲು ಪದಗಳು ಸಾಲುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)