ನ್ಯೂಸ್

ಲಾರಿ ಓಡಿಸುತ್ತಿದ್ದಾಗಲೇ ಚಾಲಕನಿಗೆ ಎದೆನೋವು, ಕ್ಷಣ ಮಾತ್ರದಲ್ಲೇ ಹೃದಯಾಘಾತಕ್ಕೆ ಬಲಿ! | Heart Attack

ಬ್ಯಾಡಗಿ: ಲಾರಿ ಓಡಿಸುತ್ತಿದ್ದ ಚಾಲಕ ಹೃದಯಾಘಾತದಿಂದ(Heart Attack) ಮೃತಪಟ್ಟ ಘಟನೆ ತಾಲೂಕಿನ ಮೋಟೆಬೆನ್ನೂರ ಸೇತುವೆ ಬಳಿ ಎನ್ಎಚ್-48ರಲ್ಲಿ ಮಂಗಳವಾರ ನಡೆದಿದೆ.

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಪುಲಬರಿ ತಾಲೂಕಿನ ಉಮ್ರಾವತಿ ಗ್ರಾಮದ ಬಾಬುರಾವ್ ತಾತೆರಾವ್ ಖಮ್ಮಟ್ (50) ಮೃತ ಚಾಲಕ.

ಈತ ಬೆಂಗಳೂರು ಕಡೆಯಿಂದ ಮಹಾರಾಷ್ಟ್ರದ ಕಡೆಗೆ ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯದಲ್ಲಿ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ.

ಕೂಡಲೇ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ ಕೆಳಗೆ ಇಳಿಯುವಷ್ಟರಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.