ನ್ಯೂಸ್

ಅತಿ ಹೆಚ್ಚು ಬುದ್ಧಿವಂತರನ್ನು ಹೊಂದಿರುವ ದೇಶ ಯಾವುದು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಉತ್ತರ! Most Intellectuals

Most Intellectuals : ಈ ಜಗತ್ತಿನಲ್ಲೇ ಅತಿ ಹೆಚ್ಚು ಬುದ್ಧಿವಂತರನ್ನು ಹೊಂದಿರುವ ದೇಶ ಯಾವುದು ಗೊತ್ತಾ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇತ್ತೀಚೆಗೆ ನಡೆದ ಅಧ್ಯಯನ ಒಂದರಲ್ಲಿ ಏಷ್ಯಾದ ದೇಶವೊಂದು ಅಗ್ರಸ್ಥಾನದಲ್ಲಿದೆ. ಯಾವುದು ಆ ದೇಶ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಜಗತ್ತಿನ ಅತ್ಯಂತ ಬುದ್ಧಿವಂತ ಜನರು ಅಮೆರಿಕ ಮತ್ತು ಚೀನಾದಂತಹ ದೇಶಗಳಲ್ಲಿ ಮಾತ್ರ ವಾಸಿಸುತ್ತಾರೆ ಎಂಬ ಮನಸ್ಥಿತಿ ಈ ವಿಶ್ವದ ಅನೇಕ ಜನರಲ್ಲಿದೆ. ಇದಕ್ಕೆ ಭಾರತೀಯರು ಕೂಡ ಹೊರತಾಗಿಲ್ಲ. ಆದರೆ, ಅದು ಸುಳ್ಳು ಎಂಬುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ.

ಹೊಸ ಅಧ್ಯಯನದ ಪ್ರಕಾರ ಏಷ್ಯಾದ ದೇಶವೊಂದು ವಿಶ್ವದಲ್ಲೇ ಅತಿ ಹೆಚ್ಚು ಬುದ್ಧಿವಂತರನ್ನು ಹೊಂದಿದೆ. ಚೀನಾ, ಅಮೆರಿಕ, ರಷ್ಯಾ ಮತ್ತು ಇಸ್ರೇಲ್‌ನಂತಹ ದೇಶಗಳು ಟಾಪ್ 10 ರಲ್ಲಿಯೂ ಸ್ಥಾನ ಪಡೆದಿಲ್ಲ ಎಂಬುದೇ ಅಚ್ಚರಿಯ ಸಂಗತಿಯಾಗಿದೆ.

ಫಿನ್​ಲ್ಯಾಂಡ್​ನ ಕಂಪನಿಯಾದ Wiqtcom Inc ಪ್ರಪಂಚದಾದ್ಯಂತ ಜನರ IQ (ಇಂಟೆಲಿಜೆನ್ಸ್ ಕ್ವಾಷಿಯೆಂಟ್) ಸಾಮರ್ಥ್ಯವನ್ನು ಪರೀಕ್ಷಿಸಿ, ಅದರ ಆಧಾರದ ಮೇಲೆ ಶ್ರೇಯಾಂಕ ಪಟ್ಟಿಯನ್ನು ರಚಿಸಿದೆ. IQ ಎನ್ನುವುದು ವ್ಯಕ್ತಿಯ ಯೋಚಿಸುವ, ತಾರ್ಕಿಕಗೊಳಿಸುವ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಸಂಖ್ಯಾತ್ಮಕ ಮೌಲ್ಯವಾಗಿದೆ. ಹೆಚ್ಚಿನ IQ ಹೊಂದಿರುವ ವ್ಯಕ್ತಿಯನ್ನು ಬುದ್ಧಿವಂತ ಎಂದು ಪರಿಗಣಿಸಲಾಗುತ್ತದೆ.

ಜಪಾನ್ ದೇಶ 112.30 ಅಂಕಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜಪಾನ್‌ನ ಶಿಕ್ಷಣ ವ್ಯವಸ್ಥೆಯು ಸಮಸ್ಯೆ ಪರಿಹರಿಸುವ ಕೌಶಲ್ಯ, ಶಿಸ್ತು ಮತ್ತು ವಿಭಿನ್ನ ಚಿಂತನೆಗೆ ಒತ್ತು ನೀಡುತ್ತದೆ. ರೊಬೊಟಿಕ್ಸ್‌ನಿಂದ ಹಿಡಿದು ಕೃತಕ ಬುದ್ಧಿಮತ್ತೆಯವರೆಗೆ ಜಪಾನ್ ತನ್ನ ಕ್ರಾಂತಿಕಾರಿ ಸಂಶೋಧನೆಗಳಿಗೆ ಹೆಸರುವಾಸಿಯಾಗಿದೆ. ಜಪಾನ್‌ನ ತಂತ್ರಜ್ಞಾನವು ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದಂತಹ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ಈ ಪಟ್ಟಿಯಲ್ಲಿ ಜಪಾನ್ ನಂತರ, ಹಂಗೇರಿ 2ನೇ ಸ್ಥಾನದಲ್ಲಿದೆ. ತೈವಾನ್ 3ನೇ ಸ್ಥಾನದಲ್ಲಿದ್ದರೆ, ಇಟಲಿ 4ನೇ ಸ್ಥಾನದಲ್ಲಿದೆ ಮತ್ತು ದಕ್ಷಿಣ ಕೊರಿಯಾ 5ನೇ ಸ್ಥಾನದಲ್ಲಿದೆ. ಇದರ ನಂತರ ಸೆರ್ಬಿಯಾ, ಇರಾನ್, ಫಿನ್​ಲ್ಯಾಂಡ್​, ಹಾಂಗ್ ಕಾಂಗ್ ಮತ್ತು ವಿಯೆಟ್ನಾಂ ದೇಶಗಳು ಇವೆ. (ಏಜೆನ್ಸೀಸ್​)