ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಸೇತುವೆಯಿಂದ ಮಲಪ್ರಭಾ ನದಿಗೆ ಉರುಳಿದ ಘಟನೆ ಬೆಳಗಾವಿಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 4ರ ಸೇತುವೆ ಮೇಲಿಂದ ಮಲಪ್ರಭಾ ನದಿಗೆ ಕ್ಯಾಂಟರ್ ಉರುಳಿದೆ. ವಾಹನವು ಚಿಕ್ಕಮಗಳೂರಿನಿಂದ ಮಹಾರಾಷ್ಟ್ರಕ್ಕೆ ಹೊರಟಿತ್ತು. ಈ ವೇಳೆ ಎದುರಿಗೆ ಬರುತ್ತಿದ್ದ ಕಾರ್ ತಪ್ಪಿಸಲು ಹೋಗಿ ಟ್ಯಾಂಕರ್ ನದಿಗೆ ಉರುಳಿ ಬಿದ್ದಿದೆ.
ಟ್ಯಾಂಕರ್ ಸುಮಾರು 50 ಅಡಿ ಎತ್ತರದಿಂದ ಉರುಳಿದ ಪರಿಣಾಮ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಘಟನೆಯಲ್ಲಿ ಪವಾಡಸದೃಶವಾಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.(ಏಜೆನ್ಸೀಸ್)