ಸಿನಿಮಾ ಮಂದಿಗೆ ಸಿನಿಮಾದಷ್ಟೇ ಸಿನಿಮೋತ್ಸವಗಳು ತುಂಬ ಇಂಪಾರ್ಟೆಂಟ್. ವಿಶ್ವದ ಎಲ್ಲ ಭಾಷೆಗಳ ಅತ್ಯುತ್ತಮ ಆಯ್ದ ಸಿನಿಮಾಗಳು ಆ ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳುವುದು ಒಂದೆಡೆಯಾದರೆ, ತಾರೆಗಳನ್ನು ಸೆಳೆಯುವ ರೆಡ್ ಕಾರ್ಪೆಟ್ ಕೂಡ ಆಕರ್ಷಣೀಯವಾಗಿರುತ್ತದೆ. ಬಾಲಿವುಡ್ನಿಂದಲೂ ಪ್ರತಿ ವರ್ಷ ನೂರಾರು ಸೆಲೆಬ್ರಿಟಿಗಳು ಹತ್ತು ಹಲವು ಸಿನಿಮೋತ್ಸವಗಳಿಗೆ ಭೇಟಿ ನೀಡಿ, ರೆಡ್ಕಾರ್ಪೆಟ್ ಮೇಲೆ ಮಾರ್ಜಾಲ ನಡಿಗೆ ಪ್ರದರ್ಶಿಸಿ ಬರುತ್ತಾರೆ. ಆದರೆ ಈ ವರ್ಷದ ಸ್ಥಿತಿ ಅತಂತ್ರವಾಗಿದೆ. ಈಗಾಗಲೇ ನಿಗದಿಯಂತೆ ನಡೆಯಬೇಕಿದ್ದ ಹತ್ತಾರು ಸಿನಿಮೋತ್ಸವಗಳು ಕರೊನಾ ಹಾವಳಿಗೆ ತುತ್ತಾಗಿ ರದ್ದು ಮಾಡಿಕೊಂಡಿವೆ. ಇನ್ನು ಕೆಲವು ಸಿನಿಮೋತ್ಸವಗಳು ದಿನಾಂಕವನ್ನು ಮುಂದೂಡಲ್ಪಟ್ಟಿವೆ. ಅದರಲ್ಲೂ ಬಾಲಿವುಡ್ ಮಂದಿಯ ನೆಚ್ಚಿನ ಸಿನಿಮೋತ್ಸವ ಎಂದೇ ಖ್ಯಾತಿಯಾಗಿರುವ ಕಾನ್ ಸಿನಿಮೋತ್ಸವಕ್ಕೂ ಕರೊನಾ ಕರಾಳತೆ ಆವರಿಸಿದೆ! ಎಲ್ಲ ಅಂದುಕೊಂಡಂತೆ ಆಗಿದ್ದರೆ, ಐತಿಹಾಸಿಕ 73ನೇ ಕಾನ್ ಸಿನಿಮೋತ್ಸವ 12ರಿಂದ 23ರವರೆಗೆ ಫ್ರಾನ್ಸ್ನಲ್ಲಿ ನಡೆಯಬೇಕಿತ್ತು. ಕರೊನಾ ವಿಷಜಾಲ ಹೆಚ್ಚಾಗುತ್ತಿದ್ದಂತೆ ಈಗ ಅದನ್ನು ಜೂನ್ ಅಥವಾ ಜುಲೈನಲ್ಲಿ ಸಿನಿಮೋತ್ಸವ ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ. ಕರೊನಾ ಕೈ ಮೀರಿದರೆ, ಸೆಪ್ಟೆಂಬರ್ ವೇಳೆಗೂ ಆಯೋಜಿಸುವ ಸಾಧ್ಯತೆ ಇದೆ.
ಭಾರತೀಯ ಸಿನಿಮೋತ್ಸವಗಳು ಸದ್ಯಕ್ಕೆ ಸೇಫ್
ಕರೊನಾದಿಂದ ಭಾರತೀಯ ಸಿನಿಮೋತ್ಸವಗಳು ಸೇಫ್ ಆಗಿವೆ ಎನ್ನಬಹುದು. ವಿದೇಶಿ ಸಿನಿಮೋತ್ಸವಕ್ಕೆ ಹೋಲಿಕೆ ಮಾಡಿದರೆ, ಭಾರತೀಯ ಫಿಲಂ ಫೆಸ್ಟಿವಲ್ಗಳು ನವೆಂಬರ್, ಡಿಸೆಂಬರ್ನಲ್ಲಿ ಆಯೋಜನೆಗೆ ಯೋಜನೆ ಸಿದ್ಧಪಡಿಸಿವೆ. ಒಂದಷ್ಟು ಸಿನಿಮೋತ್ಸವಗಳು ಜನವರಿಯಿಂದ ಫೆಬ್ರವರಿ ಅಂತ್ಯದ ಒಳಗೆ ಮುಕ್ತಾಯವಾಗಿವೆ. ಜೈಪುರ ಸಿನಿಮೋತ್ಸವ, ಮುಂಬೈ ಸಿನಿಮೋತ್ಸವ, ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಈಗಾಗಲೇ ಮುಕ್ತಾಯವಾಗಿವೆ. ದೆಹಲಿ ಸಿನಿಮೋತ್ಸವ ಜುಲೈನಲ್ಲಿ ನಡೆಯುವ ಸಾಧ್ಯತೆ ಇದೆ. ಧರ್ಮಶಾಲಾ ಸಿನಿಮೋತ್ಸವ ನವೆಂಬರ್ 26ಕ್ಕೆ ನಡೆಯಲಿದೆ. ಕೇರಳ ಅಂತಾರಾಷ್ಟ್ರೀಯ ಸಿನಿಮೋತ್ಸವ ನವೆಂಬರ್ನಲ್ಲಿ ಆಯೋಜನೆಗೊಳ್ಳಲಿದೆ.
ರದ್ದಾದ ಮತ್ತು ಮುಂದೂಡಲ್ಪಟ್ಟ ಅಂತಾರಾಷ್ಟ್ರೀಯ ಸಿನಿಮೋತ್ಸವಗಳ ವಿವರ