ನ್ಯೂಸ್

ಫಸ್ಟ್ ನೈಟ್ ದಿನ ಕೋಣೆಯಲ್ಲಿ ಪತ್ನಿಗಾಗಿ ಕಾಯುತ್ತಿದ್ದ ಹುಡುಗ..ಅಷ್ಟರಲ್ಲಿ ನಡೆದಿದ್ದೇ ಬೇರೆ..!

ಲಖನೌ: ಪ್ರತಿಯೊಬ್ಬರ ದಾಂಪತ್ಯದಲ್ಲಿ ಮೊದಲ ರಾತ್ರಿಗೆ ಪ್ರಾಶಸ್ತ್ಯವಿರುತ್ತದೆ. ಅದೇ ರೀತಿ ಇಲ್ಲೊಂದು ವರ ಸಿಂಗಾರಗೊಂಡಿದ್ದ ಮಂಚದ ಮೇಲೆ ಹೆಂಡತಿ ಬರುವುದನ್ನೇ ಕಾಯುತ್ತಿದ್ದ. ಆದರೆ ರಾತ್ರಿ 9ಗಂಟೆಗೆ ಕೋಣೆಗೆ ಬರಬೇಕಿದ್ದ ಪತ್ನಿ ಅರ್ಧ ರಾತ್ರಿಯಾದರೂ ಬರಲಿಲ್ಲ. ಕಡೆಗೆ ಗಂಡ ಬೇಸತ್ತು ಕೋಣೆಯಿಂದ ಹೊರಬಂದ. ತನ್ನ ಹೆಂಡತಿಯನ್ನು ಹುಡುಕಿದ. ಎಲ್ಲೂ ಸಿಕ್ಕಿಲ್ಲ. ಮನೆಯಲ್ಲಿ ಹೇಳಿದಾಗ, ಎಲ್ಲರೂ ಸೇರಿ ಹುಡುಕಿದರೂ ವ್ಯರ್ಥವಾಯಿತು. ಫೋನ್ ಸ್ವಿಚ್ ಆಗಿತ್ತು. ಹುಡುಗಿ ಚಿನ್ನಾಭರಣ, ಹಣದೊಂದಿಗೆ ಬಾಯ್​ಫ್ರೆಂಡ್​ ಜೊತೆ ನಾಪತ್ತೆಯಾಗಿದ್ದಳು.

ಉತ್ತರ ಪ್ರದೇಶದ ಅಮೇಥಿಯ ತಿಲೋಯ್ ಗ್ರಾಮದ ಯುವಕ ಅಮಿತ್​ (ಹೆಸರು ಬದಲಾಯಿಸಲಾಗಿದೆ) ಪಕ್ಕದ ಹಳ್ಳಿಯ ಹುಡುಗಿಯನ್ನು ಮದುವೆಯಾಗಿದ್ದಾನೆ. ಕುಟುಂಬಸ್ಥರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹ ನಡೆದಿದೆ. ಬಳಿಕ ವರನ ಕುಟುಂಬಸ್ಥರು ವಧುವನ್ನು ತಮ್ಮ ಮನೆ ತುಂಬಿಸಿಕೊಂಡಿದ್ದಾರೆ. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿದೆ. ಮೂರ್ನಾಲ್ಕು ದಿನ ಯುವತಿ ಅತ್ತೆಯ ಮನೆಯಲ್ಲಿ ಚೆನ್ನಾಗಿದ್ದಳು. ವೈದಿಕರ ಸೂಚನೆಯಂತೆ ಹಿರಿಯರು ಜು.24ರಂದು ಸೋಬಾನಕ್ಕೆ ಮುಹೂರ್ತ ನಿಗದಿ ಮಾಡಿದರು. ಆದರೆ, ಅದೇ ರಾತ್ರಿ ವಧು ತನ್ನ ಬಾಯ್​ಫ್ರೆಂಡ್​ ಜೊತೆ ಓಡಿ ಹೋಗಿದ್ದಾಳೆ.

ಕಡೆಗೆ ಮದುಮಗ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಆಕೆ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ಬಾಯ್ ಫ್ರೆಂಡ್ ಇದ್ದಾನೆ ಎಂದು ಮೊದಲೇ ಹೇಳಿದ್ದರೆ ಮದುವೆಯಾಗುತ್ತಿರಲಿಲ್ಲ ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ. ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಯುವತಿ ಹಾಗೂ ಆಕೆಯ ಪ್ರಿಯಕರನಿಗಾಗಿ ಹುಡುಕಾಟ ನಡೆಸಿದ್ದಾರೆ.