Thalapathy Vijay: ಈ ಹಿಂದೆ ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಶೀಘ್ರವೇ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿತ್ತು. ಆ ಎಲ್ಲ ವದಂತಿಗಳನ್ನು ಕೊನೆಗೂ ನಿಜವಾಗಿಸಿದ ಸ್ಟಾರ್ ನಟ, 'ತಮಿಳಗ ವೆಟ್ರಿ ಕಳಗಂ' ಎಂಬ ಸ್ವಯಂ ಪಕ್ಷ ಕಟ್ಟಿ, ತಮಿಳುನಾಡಿನಲ್ಲಿ ತಮ್ಮದೇ ಹೊಸ ಅಲೆಯನ್ನು ಎಬ್ಬಿಸಿದರು. ಇದು ತಮಿಳು ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಸಂಚಲವನ್ನೇ ಹುಟ್ಟುಹಾಕಿತು.
ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆ ತಮಿಳು ಚಿತ್ರರಂಗಕ್ಕೆ ತಮ್ಮ ಕೊನೆಯ ಚಿತ್ರದ ಮುಖೇನ ಗುಡ್ಬೈ ಹೇಳಲಿರುವ ವಿಜಯ್, ಸಿನಿಮಾ ತೆರೆಕಂಡ ಬಳಿಕ ತಮ್ಮ ಸಂಪೂರ್ಣ ಸಮಯವನ್ನು ರಾಜಕೀಯಕ್ಕೆ ಮೀಸಲಿಡಲಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಲ್ಲಿ ಕೊಂಚ ಬೇಸರ ಮೂಡಿಸಿದ್ದೇ ಆದರೂ ನೆಚ್ಚಿನ ನಟನನ್ನು ರಾಜಕೀಯ ಅಖಾಡದಲ್ಲಿ ನೋಡುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ದಳಪತಿ ಅಭಿನಯದ ಕಟ್ಟ ಕಡೆಯ ಸಿನಿಮಾದ ಭರ್ಜರಿ ಓಪನಿಂಗ್ 2026ರ ಜನವರಿ 15ರಂದು ಆಗಲಿದೆ.
ಒಂದೆಡೆ ಸೂರ್ಯ ಮಕರ ರಾಶಿಗೆ ಪ್ರವೇಶಿಸಿದರೆ. ಮತ್ತೊಂದೆಡೆ ತಮಿಳುನಾಡಿನಲ್ಲಿ ಪೊಂಗಲ್ ಸಂಭ್ರಮದ ದಿನವೇ ದಳಪತಿ ಅಭಿನಯದ ಕೊನೆಯ ಸಿನಿಮಾ ತೆರೆ ಕಾಣಲಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಸುಮಾರು 500 ಕೋಟಿ ರೂ. ಅಧಿಕ ಬಜೆಟ್ನಲ್ಲಿ ಸೆಟ್ಟೇರಿರೋ ಸಿನಿಮಾ 'ಜನನಾಯಕನ್'. ಈ ಸಿನಿಮಾ ಹಲವು ವಿಶೇಷಗಳಿಗೆ ಕಾರಣವಾಗಿದೆ. ಅದರಲ್ಲೂ ಇದು ದಳಪತಿ ವಿಜಯ್ ಅಭಿನಯದ 69ನೇ ಸಿನಿಮಾ ಎಂಬುದು ಗಮನಾರ್ಹ.
ಇದನ್ನೂ ಓದಿ: ಆಕೆಯ ಅಪ್ಪಣೆಯಿಲ್ಲದೆ ಹಣಕಾಸಿನ ವ್ಯವಹಾರ ಸಾಧ್ಯವೇ ಇಲ್ಲ! ಬಾಲಿವುಡ್ ಬ್ಯೂಟಿ ಸಾರಾ ಅಲಿ ಖಾನ್ ಓಪನ್ ಟಾಕ್ | Sara
ದಳಪತಿಯ 69ನೇ ಚಿತ್ರಕ್ಕೆ 500 ಕೋಟಿ ರೂ.ಗೂ ಅಧಿಕ ಬಜೆಟ್ನಲ್ಲಿ ಚಿತ್ರ ತಯಾರಾಗುತ್ತಿದ್ದು, ಈಗಾಗಲೇ ದೊಡ್ಡ ಬಜೆಟ್ನಡಿ ಕೆವಿಎನ್ ಸಂಸ್ಥೆಯ ಕೆ. ವೆಂಕಟ್ ನಾರಾಯಣ್ ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ನು ಈ ಸಿನಿಮಾ ತಮಿಳುನಾಡಿನ ಹೆಮ್ಮೆಯ ಹಬ್ಬ ಪೊಂಗಲ್ ದಿನವೇ ತೆರೆ ಮೇಲೆ ಅಬ್ಬರಿಸಲಿದೆ. ಜನನಾಯಕನ್ ಆಗಮನಕ್ಕಾಗಿ ದಳಪತಿ ವಿಜಯ್ ಅಭಿಮಾನಿಗಳಷ್ಟೇ ಇಡೀ ದಕ್ಷಿಣ ಭಾರತ ಕೂಡ ಕಾಯುತ್ತಿದೆ. ಅದಕ್ಕೆ ಒಂದೇ ಒಂದು ಕಾರಣ, ಈ ಚಿತ್ರ ಅವರ ಕೊನೆಯ ಸಿನಿಮಾ ಎಂದು,(ಏಜೆನ್ಸೀಸ್).