ನ್ಯೂಸ್

'ದಳಪತಿ 68' ಇದೊಂದು ಟೈಂ ಟ್ರಾವೆಲ್​ ಕಥೆ?

ತಮಿಳುನಾಡು: ಕಾಲಿವುಡ್​ ಸ್ಟಾರ್​, ದಳಪತಿ ವಿಜಯ್​ ನಟಿಸಲಿರುವ ಮುಂದಿನ ತಾತ್ಕಾಲಿಕ ಶೀರ್ಷಿಕೆಯುಳ್ಳ 'ದಳಪತಿ 68' ಚಿತ್ರದ ಬಗ್ಗೆ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ಇತ್ತೀಚೆಗಷ್ಟೇ ವಿಜಯ್ ಅಭಿನಯದ ಬಹುನಿರೀಕ್ಷಿತ 'ಲಿಯೋ' ಬಹುತೇಕ ಚಿತ್ರಮಂದಿರಗಳಲ್ಲಿ ಅದ್ದೂರಿ ಓಪನಿಂಗ್​ ಪಡೆದು, ಬಾಕ್ಸ್​ ಆಫೀಸ್​ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇಷ್ಟು ದಿನ 'ಲಿಯೋ' ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗುತ್ತಿತ್ತು. ಇದೀಗ ಲಿಯೋ ಬೆನ್ನಲ್ಲೇ ವಿಜಯ್​ ನಟಿಸಲಿರುವ ಮುಂದಿನ ಸಿನಿಮಾ 'ದಳಪತಿ 68' ಬಗ್ಗೆ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ. ವೆಂಕಟ್ ಪ್ರಭು ಮತ್ತು ವಿಜಯ್ ಕಾಂಬಿನೇಷ್​ನ ಈ ಚಿತ್ರಕ್ಕೆ​ ಮೀನಾಕ್ಷಿ ಚೌಧರಿ ನಾಯಕಿಯಾಗಿ ನಟಿಸಲಿದ್ದಾರೆ.

ಇತ್ತೀಚೆಗಚ್ಟೇ ಚಿತ್ರ ತಯಾರಕರು ಸಿನಿಮಾದ ಪೂಜಾ ಸಮಾರಂಭದ ವೀಡಿಯೊವನ್ನು ಬಿಡುಗಡೆಗೊಳಿಸಿದ್ದರು. ಚಿತ್ರದ ಸಂಪೂರ್ಣ ತಾರಾಗಣ ಮತ್ತು ಸಿಬ್ಬಂದಿಗೆ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಚಿತ್ರದ ಕಥೆಯು ಟೈಂ ಟ್ರಾವೆಲ್​ ಅಥವಾ ಕೃತಕ ಬುದ್ಧಿಮತ್ತೆಯ ವಿಷಯಗಳಿಗೆ ಸಂಬಂಧಿಸಿದಂತೆ ಇರಲಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ. ಆದ್ರೆ, ಈ ಕುರಿತಂತೆ ನಿರ್ಮಾಣ ತಂಡ ಯಾವುದೇ ಅಧಿಕೃತ ಮಾಹಿತಿಯನ್ನು ಘೋಷಿಸಿಲ್ಲ.

ಚಿತ್ರದಲ್ಲಿ ಮೈಕ್ ಮೋಹನ್, ಜಯರಾಮ್, ಸ್ನೇಹಾ, ಲೈಲಾ, ಯೋಗಿಬಾಬು, ವಿಟಿವಿ ಗಣೇಶ್, ಅಜ್ಮಲ್ ಅಮೀರ್, ವೈಭವ್, ಪ್ರೇಮ್ಗಿ, ಅಜಯ್ ರಾಜ್, ಅರವಿಂದ್ ಆಕಾಶ್ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).