ತಮಿಳುನಾಡು: ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಮತ್ತು ವೆಂಕಟ್ ಪ್ರಭು ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಬಹುನಿರೀಕ್ಷಿತ 'ದಳಪತಿ 68' ಚಿತ್ರದ ಕುರಿತಂತೆ ಈಗ ಹೊಸ ಅಪ್ಡೇಟ್ವೊಂದು ಲಭಿಸಿದೆ. ಈ ಸುದ್ದಿ ವಿಜಯ್ ಅಭಿಮಾನಿಗಳ ಕಾತರವನ್ನು ಮತ್ತಷ್ಟು ಹೆಚ್ಚಿಸಿದ್ದು, ಯಾವ ದಿನದಂದು ಫಸ್ಟ್ ಲುಕ್ ಅನಾವರಣಗೊಳ್ಳಲಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.
ಇದನ್ನೂ ಓದಿ: ಭಾಷೆ ಉಳಿವಿಗೆ ಬೇಕು ಒಗ್ಗಟ್ಟು -ರಾಮೇಗೌಡ ಆಶಯ
ಇತ್ತೀಚೆಗಷ್ಟೇ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಪ್ಯಾನ್ ಇಂಡಿಯಾ 'ಲಿಯೋ' ಸಿನಿಮಾ ಜಾಗತಿಕ ಬಿಡುಗಡೆಯನ್ನು ಕಂಡು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸನ್ನು ಗಳಿಸಿತು. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರವು ಸಿನಿಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುವುದರ ಜತೆಗೆ ಅತೀ ಶೀಘ್ರವೇ ಒಟಿಟಿ ಪ್ಲಾಟ್ಫಾರ್ಮ್ಗೂ ಲಗ್ಗೆಯಿಟ್ಟಿದೆ.
ಇದೀಗ 'ದಳಪತಿ 68' ಚಿತ್ರವನ್ನು ಎದುರು ನೋಡುತ್ತಿರುವ ವಿಜಯ್ ಅಭಿಮಾನಿಗಳಿಗೆ ಚಿತ್ರದ ಫಸ್ಟ್ ಲುಕ್ ಬಗ್ಗೆ ಮಾಹಿತಿ ದೊರೆತ್ತಿದ್ದು, ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ಹೊಸ ವರ್ಷದ ಮೊದಲ ದಿನದಂದು ಅನಾವರಣಗೊಳ್ಳಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಆದ್ರೆ, ಈ ಸುದ್ದಿ ಇನ್ನೂ ದೃಢಪಟ್ಟಿಲ್ಲವಾದರೂ, ಕಾಲಿವುಡ್ ಅಂಗಳದಲ್ಲಿ ಸದ್ಯ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ಚಿತ್ರದಲ್ಲಿ ವಿಜಯ್, ಪ್ರಭುದೇವ, ಪ್ರಶಾಂತ್, ಸ್ನೇಹಾ, ಲೈಲಾ, ಮೀನಾಕ್ಷಿ ಚೌದ್ರಿ, ಅಜ್ಮಲ್, ಮೈಕ್ ಮೋಹನ್, ಜಯರಾಮ್, ಯೋಗಿ ಬಾಬು ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).