ನ್ಯೂಸ್

ಪ್ರಶ್ನೆ ಕೇಳಲು ಹೋದ ಪತ್ರಕರ್ತೆ ಮೇಲೆ ಹಲ್ಲೆ; ಹಿರಿಯ ರಾಜಕಾರಣಿ ವಿರುದ್ಧ ಸಂಸತ್ತಿನಿಂದ ತನಿಖೆ.. ಅಸಲಿಗೆ ನಡೆದಿದ್ದೇನು?

ಬ್ಯಾಂಕಾಕ್​​: ಥಾಯ್ಲೆಂಡ್​​ನ ಹಿರಿಯ ರಾಜಕಾರಣಿ ಹಾಗೂ ಮಾಜಿ ಉಪಪ್ರಧಾನಿ ಪ್ರವಿತ್​ ವಾಂಗ್ಸುವೊನ್​​ ಅವರು ಪ್ರಶ್ನೆ ಕೇಳಲು ಬಂದು ಪತ್ರಕರ್ತೆ ಮೇಲೆ ಕೈಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವಿಡಿಯೋ ವೈರಲ್​ ಆದ ಬಳಿಕ ಥಾಯ್ಲೆಂಡ್​​ ಸಂಸತ್ತು ಪ್ರವಿತ್​ ವಿರುದ್ಧ ತನಿಖೆ ನಡೆಸುವುದಾಗಿ ತಿಳಿಸಿದೆ ಎನ್ನಲಾಗಿದೆ.

ವಾಂಗ್ಸುವೊನ್​ ಪ್ರಶ್ನೆಕೇಳಲು ಹೋದ ಪತ್ರಕರ್ತೆ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಈ ಕ್ರಮವನ್ನು ವಿರೋಧಿಸಿ ಹಿರಿಯ ರಾಜಕಾರಣಿ ವಿರುದ್ಧ ಔಪಚಾರಿಕವಾಗಿ ವರದಿಗಾರರು ದೂರು ದಾಖಲಿಸಿದ್ದಾರೆ. ಸಂಸತ್ತು ತನಿಖೆ ನಡೆಸುವುದಾಗಿ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

ವಿಡಿಯೋದಲ್ಲಿ ಪಿಪಿಆರ್‌ಪಿ ನಾಯಕರಾದ ವಾಂಗ್ಸುವೊನ್​​​ ಅವರಿಗೆ ಹೊಸ ಪ್ರಧಾನಿ ಪೇಟೊಂಗ್‌ಟರ್ನ್ ಶಿನಾವತ್ರಾ ಅವರ ಬಗ್ಗೆ ಪತ್ರಕರ್ತೆ ಪ್ರಶ್ನೆ ಕೇಳುತ್ತಾರೆ. ಅದರಕ್ಕೆ ಉತ್ತರಿಸಿದೆ ವಾಂಗ್ಸುವೊನ್​ ನೀವು ಏನು ಕೇಳುತ್ತಿದ್ದೀರಿ..? ಏನು..ಏನು..? ಎಂದು ಹೇಳುತ್ತಾ ಆಕೆಯ ತಲೆಯ ಮೇಲೆ ಹಲವು ಹೊಡೆದಿರುವುದನ್ನು ಕಾಣಬಹುದಾಗಿದೆ.

ಪ್ರವಿತ್ ವಾಂಗ್ಸುವೊನ್ ಥಾಯ್ಲೆಂಡ್‌ನ ಸೇನಾ ಮುಖ್ಯಸ್ಥರೂ ಆಗಿದ್ದರು. ದೇಶದಲ್ಲಿ ನಡೆದ ಕಳೆದ ಎರಡು ದಂಗೆಗಳಲ್ಲೂ ಅವರು ಭಾಗಿಯಾಗಿದ್ದರು. ಕಳೆದ ವರ್ಷದವರೆಗೆ ಆಳಿದ ಮಿಲಿಟರಿ ಬೆಂಬಲಿತ ಸರ್ಕಾರದಲ್ಲಿ ಉಪಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪಿಪಿಆರ್‌ಪಿ ಪಕ್ಷದ ವಕ್ತರಾರು, ವಾಂಗ್ಸುವೊನ್ ಕ್ಷಮೆಯಾಚಿಸಿದ್ದಾರೆ. ಅವರಿಗೆ ಪತ್ರಕರ್ತೆ ತಿಳಿದಿದ್ದಾರೆ. ತಿಳಿದಿರುವವರನ್ನು ಕಿಟಲೆ ಮಾಡಿದ್ದಾರೆ. ಈ ಘಟನೆ ಯಾವುದೇ ದುರುದ್ದೇಶವನ್ನು ಹೊಂದಿಲ್ಲ ಎಂದು ಹೇಳಿದರು. (ಏಜೆನ್ಸೀಸ್​​)