ನ್ಯೂಸ್

ಪಾಕಿಸ್ತಾನ ಗಡಿಯಲ್ಲಿ ಗುಂಡಿನ ಚಕಮಕಿ; ಉಗ್ರರ ಅಡಗುದಾಣ ಪತ್ತೆ: ಕಣಿವೆ ರಾಜ್ಯಾದ್ಯಂತ ಚಾರಣ ಚಟುವಟಿಕೆ ಬಂದ್​! | Pahalgam Terror Attack

Pahalgam Terror Attack : ಪಹಲ್ಗಾಮ್​ ಭಯೋತ್ಪಾದಕರ ದಾಳಿ ನಂತರ ಕಳೆದ ನಾಲ್ಕು ದಿನಗಳಿಂದ ಕಣಿವೆ ರಾಜ್ಯದ್ಯಂತ ಸೇನಾ ಕಾರ್ಯಚರಣೆಯ ಶೋಧ ತೀವ್ರವಾಗಿದ್ದು, ಈಗಾಲೇ ಮೂವರು ಸಕ್ರಿಯ ಭಯೋತ್ಪಾದಕ ಮನೆಗಳನ್ನು ನೆಲಸಮ ಮಾಡಲಾಗಿದೆ. ಈ ನಡುವೆ ಇಲ್ಲಿನ ಕುಪ್ವಾರಾದಲ್ಲಿ ಉಗ್ರ ಅಡಗುದಾಣ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಪಾಕಿಸ್ತಾನ ಪದೇಪದೆ ಕದನ ವಿರಾಮ ಉಲ್ಲಂಘನೆ ಮತ್ತು ಭಾರತೀಯ ಸೇನೆಯ ಪ್ರತಿಕ್ರಿಯೆಯೊಂದಿಗೆ ಎಲ್‌ಒಸಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ, ಮುಂದಿನ ಸೂಚನೆ ಬರುವವರೆಗೂ ಜಮ್ಮು ಮತ್ತು ಕಾಶ್ಮೀರದಾದ್ಯಂತ ಎಲ್ಲಾ ಚಾರಣ ಚಟುವಟಿಕೆಗಳನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಮುಂಬೈನಲ್ಲಿ 26/11ರ ನಂತರದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಲ್ಲಿ ಇಸ್ಲಾಮಾಬಾದ್ "ಗಡಿಯಾಚೆಗಿನ ಭಯೋತ್ಪಾದನೆ"ಯನ್ನು ಬೆಂಬಲಿಸುತ್ತಿದೆ ಎಂದು ಭಾರತ ಆರೋಪಿಸಿದ ಕಾರಣ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ "ವಿಶ್ವಾಸಾರ್ಹ" ತನಿಖೆಯಲ್ಲಿ ಭಾಗವಹಿಸಲು ಮುಂದಾಗಿದ್ದಾರೆ.

ಅಲ್ಲದೆ, ಶನಿವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಅನೇಕ ಸ್ಥಳಗಳಲ್ಲಿ "ಅಪ್ರಚೋದಿತ" ಗುಂಡಿನ ದಾಳಿ ನಡೆಸುವ ಮೂಲಕ ಪಾಕಿಸ್ತಾನಿ ಪಡೆಗಳು ಎರಡನೇ ದಿನವೂ ಕದನ ವಿರಾಮವನ್ನು ಉಲ್ಲಂಘಿಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆ ಜಮ್ಮು-ಕಾಶ್ಮೀರದ ಚಾರಣ ಮುಂದಿನ ಆದೇಶದವೆರೆಗೂ ಸ್ಥಗಿತಗೊಳಿಸಲಾಗಿದೆ.

ಪಾಕಿಸ್ತಾನದೊಂದಿಗಿನ 1960ರ ಸಿಂಧು ಜಲ ಒಪ್ಪಂದವನ್ನು ಅಮಾನತುಗೊಳಿಸಲಾಗಿದ್ದು, ಅದರ ಕುರಿತು ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಪ್ರಮುಖ ಸಭೆ ನಡೆಯಿತು. ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಮತ್ತು ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.(ಏಜೆನ್ಸೀಸ್​)