ನ್ಯೂಸ್

ಬಸ್​ ಅಪಘಾತದಲ್ಲಿ 15 ಸಾವು, 27 ಮಂದಿಗೆ ಗಂಭೀರ ಗಾಯ | Iran

Iran: ದಕ್ಷಿಣ ಇರಾನ್​ನಲ್ಲಿ ಬಸ್ ಪಲ್ಟಿಯಾಗಿ ಕನಿಷ್ಠ 15 ಪ್ರಯಾಣಿಕರು ಸಾವನ್ನಪ್ಪಿದ್ದು, 27ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಇರಾನ್​ ದಕ್ಷಿಣ ಪ್ರಾಂತ್ಯದ ಶಿರಾಜ್ ಸಿಟಿಯಲ್ಲಿ ಅಪಘಾತ ಸಂಭವಿಸಿದೆ. ಫಾರ್ಸ್ ಪ್ಯಾಂತ್ಯದ ತುರ್ತು ಸಂಸ್ಥೆಯ ಮುಖ್ಯಸ್ಥ ಮಸೌದ್ ಅಬೆದ್ ಮಾತನಾಡಿ, ಬಸ್​ ಅಪಘಾತಕ್ಕೀಡಾದ ಹಿನ್ನಲೆ ಘಟನೆಯಲ್ಲಿ 15 ಜನರು ಮೃತಪಟ್ಟಿದ್ದಾರೆ. 27ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

ವರ್ಷಕ್ಕೆ 17 ಸಾವಿರ ಮಂದಿ ಕೇವಲ ರಸ್ತೆ ಅಪಘಾತದಲ್ಲೇ ಸಾವನ್ನಪ್ಪುತ್ತಿರುವ ದೇಶಗಳ ಪೈಕಿ ಇರಾನ್​ ಮುಂಚೂಣಿಯಲ್ಲಿದೆ. ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯ, ಹಳೆಯ ವಾಹನಗಳ ಬಳಕೆ ಹಾಗೂ ಅಸಮರ್ಪಕ ತುರ್ತು ಸೇವೆಗಳಿಂದ ಇಂತಹ ಅಪಘಾತಗಳು ಸಂಭವಿಸುತ್ತಿವೆ ಎಂದು ವರದಿಗಳು ಉಲ್ಲೇಖಿಸಿವೆ. (ಏಜೆನ್ಸೀಸ್)