ಲಂಡನ್: ನೊವಾಕ್ ಜೋಕೊವಿಕ್, ಜನ್ನಿಕ್ ಸಿನ್ನರ್, ಅರಿನಾ ಸಬಲೆಂಕಾ, ಕೋಕೋ ಗ್ೌ ಸಹಿತ ವಿಶ್ವದ ಅಗ್ರ 20 ಟೆನಿಸ್ ತಾರೆಯರು, ಗ್ರಾಂಡ್ ಸ್ಲಾಂ ಟೂರ್ನಿಗಳ ಬಹುಮಾನ ಮೊತ್ತವನ್ನು ಏರಿಸಬೇಕೆಂದು ಸಂಟಕರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಜತೆಗೆ ಆಟಗಾರರ ಮೇಲೆ ಪರಿಣಾಮ ಬೀರುವಂಥ ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ ತಮ್ಮ ಅಭಿಪ್ರಾಯವನ್ನೂ ಪಡೆಯಬೇಕೆಂದು ತಿಳಿಸಿದ್ದಾರೆ.
ಆಸ್ಟ್ರೆಲಿಯನ್ ಓಪನ್, ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್ ಟೂರ್ನಿಗಳ ಮುಖ್ಯಸ್ಥರನ್ನು ಉಲ್ಲೇಖಿಸಿ ಕಳೆದ ಮಾರ್ಚ್ 21ರಂದು ಬರೆದಿರುವ ಪತ್ರದಲ್ಲಿ ಪುರುಷರ ಎಲ್ಲ ಅಗ್ರ 10 ಆಟಗಾರರ ಹಾಗೂ ಮಹಿಳೆಯರಲ್ಲಿ ಅಗ್ರ 11ರಲ್ಲಿ 10 ಆಟಗಾರ್ತಿಯರು ಸಹಿ ಹಾಕಿದ್ದಾರೆ. ಮಹಿಳೆಯರ ಅಗ್ರ 10ರಲ್ಲಿ ಎಲೆನಾ ರೈಬಕಿನಾ ಮಾತ್ರ ಪತ್ರಕ್ಕೆ ಸಹಿ ಹಾಕಿಲ್ಲ.
ಗ್ರಾಂಡ್ ಸ್ಲಾಂ ಟೂರ್ನಿಗಳು ಪುರುಷ ಮತ್ತು ಮಹಿಳಾ ವೃತ್ತಿಪರ ಟೂರ್ನಿಗಳ ಆಟಗಾರರ ಕ್ಷೇಮಾಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆರವನ್ನೂ ನೀಡಬೇಕು. ಟೂರ್ನಿಯ ಆದಾಯದಲ್ಲಿ ಹೆಚ್ಚಿನ ಶೇಕಡವಾರು ಮೊತ್ತವನ್ನು ಆಟಗಾರರಿಗೆ ಹಂಚುವ ಸಲುವಾಗಿ ಬಹುಮಾನ ಮೊತ್ತವನ್ನು ಏರಿಸಬೇಕು. ಈ ಮೂಲಕ ಟೂರ್ನಿಯ ಯಶಸ್ಸಿಗೆ ಆಟಗಾರರು ನೀಡುವ ಕೊಡುಗೆಗೆ ತಕ್ಕ ಪ್ರತಿಲ ಸಿಗಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರಸಕ್ತ ಫ್ರೆಂಚ್ ಓಪನ್ ಮತ್ತು ಆಸ್ಟ್ರೆಲಿಯನ್ ಓಪನ್ ತಲಾ 495 ಕೋಟಿ ರೂ. ಬಹುಮಾನ ಮೊತ್ತ ಒಳಗೊಂಡಿದ್ದರೆ, ಕಳೆದ ವರ್ಷದ ವಿಂಬಲ್ಡನ್ನಲ್ಲಿ 547 ಕೋಟಿ ರೂ. ಬಹುಮಾನ ಮೊತ್ತ ವಿತರಿಸಲಾಗಿತ್ತು. ಯುಎಸ್ ಓಪನ್ನಲ್ಲಿ ಕಳೆದ ವರ್ಷ ದಾಖಲೆಯ 641 ಕೋಟಿ ರೂ. ಅಂದರೆ 2023ಕ್ಕಿಂತ ಶೇ. 15 ಅಧಿಕ ಬಹುಮಾನ ಹಂಚಲಾಗಿತ್ತು. ಹಾಲಿ ವರ್ಷದ ಮುಂದಿನ ಗ್ರಾಂಡ್ ಸ್ಲಾಂ ಟೂರ್ನಿ ಫ್ರೆಂಚ್ ಓಪನ್ ಆಗಿದ್ದು, ಮೇ 25ರಿಂದ ಪ್ಯಾರಿಸ್ನಲ್ಲಿ ನಡೆಯಲಿದೆ.