ನ್ಯೂಸ್

ಕಡಿಮೆ ದರದ ಸೈಟ್​ಗೆ ದಶ ಯೋಜನೆಗಳು

ಮೋಹನ್​ ಶೆಟ್ಟಿ

ಬೆಂಗಳೂರು: ಟೆಲಿಕಾಂ ಎಂಪ್ಲಾಯಿಸ್ ಹೌಸಿಂಗ್ ವೆಲ್​ಫೇರ್ ಟ್ರಸ್ಟ್​ನಿಂದ ಜಾಗ ಖರೀದಿ, ಅಭಿವೃದ್ಧಿ ಹಾಗೂ ಹಂಚಿಕೆ ಪ್ರಕ್ರಿಯೆಗಳು ನಡೆಯುತ್ತಿದ್ದು, 3-4 ವರ್ಷದಲ್ಲಿ ನಾಲ್ಕು ಕಂತುಗಳನ್ನು ಕಟ್ಟುವ ಮೂಲಕ ಗ್ರಾಹಕರು ಇಲ್ಲಿ ಉತ್ತಮ ಹೂಡಿಕೆ ಮಾಡಲು ಅವಕಾಶವಿದೆ. ಅತಿಕಡಿಮೆ ದರದಲ್ಲಿ ಸೈಟ್​ಗಳು ಲಭ್ಯವಿದ್ದು, ಮಧ್ಯಮ ವರ್ಗದ ಜನರಿಗೆ ಅನುಕೂಲತೆ ಕಲ್ಪಿಸುವುದಕ್ಕಾಗಿ ಯೋಜನೆಯನ್ನು ರೂಪಿಸಲಾಗಿದೆ. ಟ್ರಸ್ಟ್​ನ ನಿವೇಶನಗಳ ಬೆಲೆ ಚದರ ಅಡಿಗೆ 1,199 ರೂ.ಗಳಿಂದ 2,999 ರೂ.ವರೆಗೆ ಇದೆ.

ವಿಶೇಷವೆಂದರೆ, ಇಲ್ಲಿ ಡೆವಲಪರ್ ಅಂತ ಬೇರೆ ಯಾರೂ ಇರುವುದಿಲ್ಲ. ಎಲ್ಲ ಸೌಲಭ್ಯಗಳು, ಪೇಪರ್ ವರ್ಕ್, ಅನುಮೋದನೆ ಕೆಲಸಗಳು ಸಂಸ್ಥೆಯಿಂದಲೇ ನೇರವಾಗಿ ನಡೆಯುವುದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಟೆಲಿಕಾಂ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಮುಕ್ತವಾಗಿ ಸಂಸ್ಥೆಯನ್ನು ಸಂರ್ಪಸುವ ಮೂಲಕ ಸೈಟ್​ಗಳನ್ನು ಬುಕ್ ಮಾಡಿಕೊಳ್ಳಬಹುದು. ಸಂಸ್ಥೆಯ ಎಲ್ಲ ಯೋಜನೆಗಳು ಗ್ರಾಹಕರಿಗೆ ಹೂಡಿಕೆ ಮಾಡಲು ಸೂಕ್ತ ಜಾಗವಾಗಿದೆ.

ಸಾಮಾಜಿಕ ಸೇವೆಗೆ ಆದ್ಯತೆ

ಟ್ರಸ್ಟ್​ನ ವಿವಿಧ ಯೋಜನೆಗಳ ಲಾಭಾಂಶವನ್ನು ಶಾಲಾಮಕ್ಕಳ ಸೇವೆಗಾಗಿ ಮೀಸಲಿಡಲಾಗುತ್ತದೆ. ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಉಚಿತ ಶಿಕ್ಷಣ ನೀಡುವ ಶಾಲೆ, ಕಾಲೇಜು ಹಾಗೂ ಉಚಿತ ಸೇವೆ ನೀಡುವ ಆಸ್ಪತ್ರೆ ಹಾಗೂ ಇತರ ಸಮಾಜ ಸೇವೆಯನ್ನು ಮಾಡುವ ಗುರಿ ಹೊಂದಿರುವುದಾಗಿ ತಿಳಿಸುತ್ತಾರೆ ಟೆಲಿಕಾಂ ಎಂಪ್ಲಾಯಿಸ್ ಹೌಸಿಂಗ್ ವೆಲ್​ಫೇರ್ ಟ್ರಸ್ಟ್ ಅಧ್ಯಕ್ಷನ ಮಾಲೀಕರು.

ಹತ್ತು ಕಡೆ ಯೋಜನೆ

ಟ್ರಸ್ಟ್ ಈಗಾಗಲೆ ಹತ್ತು ಕಡೆ ಯೋಜನೆಗಳನ್ನು ರೂಪಿಸಲು ಕಾರ್ಯನಿರ್ವಹಿಸುತ್ತಿದ್ದು, ದೇವನಹಳ್ಳಿ (ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬ್ಯಾಕ್​ಗೇಟ್), ದೊಡ್ಡಬಳ್ಳಾಪುರ, ಓಬಳಾಪುರ, ತುಮಕೂರು (2-ಯೋಜನೆ), ಕುಣಿಗಲ್, ಹೆಜ್ಜಾಲ (ಮೈಸೂರು ರಸ್ತೆ ಸಮೀಪ), ಮೈಸೂರು (2 ಯೋಜನೆ) ಹಾಗೂ ಸೋಲೂರಿನಲ್ಲಿ ಯೋಜನೆಗಳು ಚಾಲ್ತಿಯಲ್ಲಿವೆ. ತುಮಕೂರಿನ ಯೋಜನೆಯು ಶೇ.90 ಅಭಿವೃದ್ಧಿಪಡಿಸಲಾಗಿದ್ದು, 3-4 ತಿಂಗಳಲ್ಲಿ ಹಂಚಿಕೆಗೊಳ್ಳಲಿದೆ. ಕುಣಿಗಲ್​ನಲ್ಲಿರುವ ಯೋಜನೆಯ ಅನುಮೋದನೆಯು ನಡೆದಿದ್ದು, ದೊಡ್ಡಬಳ್ಳಾಪುರ, ಓಬಳಾಪುರ ಹಾಗೂ ಹೆಜ್ಜಾಲ ಯೋಜನೆಗಳ ಪೇಪರ್ ಪ್ರೋಸೆಸ್ ನಡೆಯುತ್ತಿದೆ. ಉಳಿದಂತೆ ಎಲ್ಲ ಜಾಗಗಳು ಖರೀದಿ ಹಂತದಲ್ಲಿದೆ. ಟ್ರಸ್ಟ್ 2017ರ ಏ.21ರಂದು ಪ್ರಾರಂಭವಾಗಿದ್ದು, ಬೆಂಗಳೂರು ನಗರದಲ್ಲಿ 4 ಕಚೇರಿ ಹಾಗೂ ತುಮಕೂರು ಮತ್ತು ಮೈಸೂರಿನಲ್ಲಿ ಒಂದೊಂದು ಕಚೇರಿ ಸೇರಿ 6 ಕಚೇರಿ ಮೂಲಕ ಕಾರ್ಯನಿರ್ವಹಿಸುತ್ತಿದೆ.

ಸೌಲಭ್ಯಗಳೇನು?

ಎಲ್ಲ ಯೋಜನೆಗಳಿಗೆ ಟೆಲಿಕಾಂ ಎಂಪ್ಲಾಯಿಸ್ ಹೌಸಿಂಗ್ ವೆಲ್​ಫೇರ್ ಟ್ರಸ್ಟ್​ನಿಂದ ನೇರವಾಗಿ ಎಲ್ಲ ಸೌಲಭ್ಯ ಹಾಗೂ ರಿಜಿಸ್ಟ್ರೇಷನ್ ಪ್ರಕ್ರಿಯೆಗಳನ್ನು ಮಾಡಲಾಗುತ್ತಿದ್ದು, ಮುಖ್ಯದ್ವಾರ, ಸುಸಜ್ಜಿತ ರಸ್ತೆ, ನೀರು, ವಿದ್ಯುತ್, ಒಳಚರಂಡಿ, ಮಳೆನೀರು ಸಂಗ್ರಹ ವ್ಯವಸ್ಥೆ, ಟ್ರೀ ಗಾರ್ಡ್, ಮಕ್ಕಳ ಉದ್ಯಾನ, ಪಾದಚಾರಿ ಮಾರ್ಗ, ಕರ್ವ್ ಸ್ಟೋನ್ ಇತ್ಯಾದಿ ಸೌಲಭ್ಯಗಳನ್ನು ಸಂಸ್ಥೆಯೇ ಒದಗಿಸಿಕೊಡಲಿದೆ.

ಟ್ರಸ್ಟ್​ನ ಸದಸ್ಯತ್ವ ಶುಲ್ಕ

2,100 ರೂ. ಆಗಿದ್ದು, ಇದರಲ್ಲಿ ಸಾವಿರ ರೂ. ಅಭಿವೃದ್ಧಿ ನಿಧಿಗೆ ಸೇರುತ್ತದೆ. ಆ ಹಣದಲ್ಲಿ ಶಾಲಾಮಕ್ಕಳಿಗೆ ಸಮವಸ್ತ್ರ, ಪುಸ್ತಕ ಹಾಗೂ ಇತರ ಪರಿಕರಗಳನ್ನು ನೀಡಲು, ಅನಾಥಾಶ್ರಮಕ್ಕೆ ಸಹಾಯ ಮಾಡಲು, ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತದೆ. ಅಲ್ಲದೆ ಅನೇಕ ಸಂಘ- ಸಂಸ್ಥೆಗಳಿಗೂ ಸಹಾಯವನ್ನು ಮಾಡುತ್ತೇವೆ. ಹಸಿರೇ ಉಸಿರು ಸಂಸ್ಥೆಯ ಮೂಲಕ ಸುಮಾರು 30-40 ಸಾವಿರ ಗಿಡಗಳಿಗೆ ಪ್ರಾಯೋಜಕರಾಗಿದ್ದೇವೆ. | ಡಾ.ಎನ್. ನರಸಿಂಹ ಮೂರ್ತಿ, ಟೆಲಿಕಾಂ ಎಂಪ್ಲಾಯಿಸ್ ಹೌಸಿಂಗ್ ವೆಲ್​ಫೇರ್ ಟ್ರಸ್ಟ್​ನ ಅಧ್ಯಕ್ಷ, ಬರಹಗಾರ ಹಾಗೂ ನಟ