Karunanidhi: ಚೈನ್ನೈನ ಮರಿನಾ ಚೀಚ್ನಲ್ಲಿರುವ ಮಾಜಿ ಸಿಎಂ ಕರುಣಾನಿಧಿ ಅವರ ಸ್ಮಾರಕದ(ಸಮಾಧಿ) ಮೇಲೆ ಹಿಂದು ದೇವಾಲಯ ಚಿತ್ರ ಬಳಕೆ ಮಾಡಿದ್ದು, ಆಡಳಿತರೂಢ ಡಿಎಂಕೆ ಪಕ್ಷದ ವಿರುದ್ಧ ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಕಿಡಿ ಕಾರಿದೆ.
ಶ್ರೀವಿಲ್ಲಿಪುತೂರು ದೇವಸ್ಥಾನದ 'ಗೋಪುರ'ದ ಪ್ರತಿಕೃತಿಯ ಚಿತ್ರವನ್ನು ಹಂಚಿಕೊಂಡ ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ, ಅದನ್ನು ತಕ್ಷಣ ತೆಗೆದುಹಾಕಬೇಕೆಂದು ಕರೆ ಒತ್ತಾಹಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ನಾರಾಯಣನ್, "ಕರುಣಾನಿಧಿ ಅವರ ಸಮಾಧಿಯ ಮೇಲಿನ ದೇವಾಲಯದ ಗೋಪುರದ ಚಿತ್ರಣವನ್ನು ಬಲವಾಗಿ ಖಂಡಿಸಲಾಗುತ್ತದೆ. ಇದು ಇಡೀ ಹಿಂದು ಸಮುದಾಯವನ್ನು ಅಗೌರವಿಸುವ ಕೃತ್ಯ" ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೇವಾಲಯಗಳ ಮೇಲೆ ನಂಬಿಕೆ ಇಲ್ಲ ಎಂದು ಹೇಳುವ ಡಿಎಂಕೆ ಪಕ್ಷವು ಬಹಳ ವರ್ಷಗಳಿಂದ ಹಿಂದುಗಳ ನಂಬಿಕೆಗಳಿಗೆ ನೋವುಂಟು ಮಾಡುವ ಮೂಲಕ ರಾಜಕೀಯ ಮಾಡುತ್ತಿದೆ. ಅವರು ನಾಸ್ತಿಕತೆಯ ಹೆಸರಿನಲ್ಲಿ ವರ್ತಿಸುವುದನ್ನು ಮತ್ತು ಹಿಂದು ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದನ್ನು ಮುಂದುವರಿಸಿದರೆ, ಜನರು ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಕಿಡಿ ಕಾಡಿದ್ದಾರೆ.
ಡಿಎಂಕೆ ದೇವಾಲಯದ ಗೋಪುರದ ಚಿತ್ರವನ್ನು ಸಮರ್ಥಿಸಿಕೊಂಡಿದ್ದು, ಶ್ರೀವಿಲ್ಲಿಪುತೂರ್ ಗೋಪುರವು ತಮಿಳುನಾಡು ರಾಜ್ಯ ಲಾಂಛನದ ಅವಿಭಾಜ್ಯ ಅಂಗವಾಗಿದೆ. ಇದು 1949 ರಲ್ಲಿ ಮುಖ್ಯಮಂತ್ರಿ ಓಮಂದೂರು ರಾಮಸಾಮಿ ರೆಡ್ಡಿ ಅವರ ಅವಧಿಯಲ್ಲಿ ಅಧಿಕೃತವಾಗಿ ಅಳವಡಿಸಿಕೊಂಡ ಚಿಹ್ನೆಯ ಭಾಗವಾಗಿದೆ ಎಂದು ಹೇಳಿದೆ.(ಏಜೆನ್ಸೀಸ್)