ನ್ಯೂಸ್

ಅಮೆರಿಕಾ ದೇವಾಲಯಗಳ ಮೇಲೆ ಖಲೀಸ್ತಾನ್ ಉಗ್ರರ ದಾಳಿ!

ಸ್ಯಾನ್​ ಫ್ರಾನ್ಸಿಸ್ಕೋ: ಅಮೆರಿಕಾದ ಕ್ಯಾಲಿಪೋರ್ನಿಯಾ ದೇವಾಲಯಗಳ ಮೇಲೆ ಖಲೀಸ್ತಾನ್​ ಹೋರಾಟಗಾರರು ದಾಳಿ ಮಾಡಿದ್ದು, ಖಲೀಸ್ತಾನ್​ ಪರ ಘೋಷಣೆಗಳನ್ನು ಬರೆದಿದ್ದಾರೆ.

ಸ್ಯಾನ್​ ಫ್ರಾನ್ಸಿಸ್ಕೋದ ಬೌ ಪ್ರದೇಶದ ಹೇವಾರ್ಡ್‌ನಲ್ಲಿರುವ ಶೆರಾವಲಿ ದೇವಸ್ಥಾನದಲ್ಲಿ ಅಪರಿಚಿತ ವ್ಯಕ್ತಿಗಳು ಕೃತ್ಯ ಎಸಗಿದ್ದಾರೆ ಎಂದು ಹಿಂದು ಅಮೆರಿಕನ್ ಫೌಂಡೇಶನ್ (ಎಚ್‌ಎಎಫ್) ಶುಕ್ರವಾರ ತಿಳಿಸಿದೆ.

ನೆವಾರ್ಕ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ಮಂದಿರದಲ್ಲೂ ಖಾಲಿಸ್ತಾನಿ ಹೋರಾಟಗಾರರು ಕೃತ್ಯ ಎಸಗಿದ್ದರು.

ಖಲಿಸ್ತಾನ ಪರ ಗೋಡೆ ಬರಹಗಳನ್ನು ಬರೆಯುವ ಮೂಲಕ ಮತ್ತೊಂದು ಹಿಂದು ದೇವಾಲಯದ ಮೇಲೆ ಖಲಿಸ್ತಾನ್​ ಪರ ಹೋರಾಟಗಾರರು ದಾಳಿ ನಡೆಸಿದ್ದಾರೆ. ಸ್ವಾಮಿನಾರಾಯಣ ಮಂದಿರದ ಮೇಲೆ ದಾಳಿ ನಡೆದು ಎರಡು ವಾರ ಕಳೆದಿದ್ದು, ವಾರದ ಹಿಂದೆ ಅದೇ ಪ್ರದೇಶದ ಶಿವದುರ್ಗಾ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಇದೀಗ, ಶೆರಾವಲಿ ದೇವಾಲಯವನ್ನೂ ವಿರೂಪಗೊಳಿಸಿದೆ ಎಂದು ಎಚ್‌ಎಎಫ್ 'x'(ಎಕ್ಸ್) ಪೋಸ್ಟ್‌ನಲ್ಲಿ ತಿಳಿಸಿದೆ.

ಪ್ರಕರಣ ಸಂಬಂಧ ಆಲಮೇಡ ಪೊಲೀಸ್ ಇಲಾಖೆ ಮತ್ತು ನಾಗರಿಕ ಹಕ್ಕುಗಳ ವಿಭಾಗವನ್ನು ಸಂಪರ್ಕಿಸಿರುವುದಾಗಿ ಪ್ರತಿಷ್ಠಾನ ತಿಳಿಸಿದೆ.

ಎಚ್‌ಎಎಫ್‌ ದೇವಾಲಯದ ಮುಖಂಡರು ಅಲಮೇಡ ಪೊಲೀಸ್ ಇಲಾಖೆ ಮತ್ತು ನಾಗರಿಕ ಹಕ್ಕುಗಳ ವಿಭಾಗದ ಸಂಪರ್ಕದಲ್ಲಿರುವುದಾಗಿ ಪೋಸ್ಟ್‌ನಲ್ಲಿ ಪ್ರತಿಷ್ಠಾನ ಹೇಳಿದೆ.