More

    ಅಯೋಧ್ಯೆ ಮಂದಿರದಲ್ಲಿ ಬಾಲರಾಮ ವಿರಾಜಮಾನ: ಭಕ್ತರಿಗೆ ಇನ್ಮುಂದೆ ಸಿಗಲಿದೆ ನಗುಮೊಗದ ಅಭಯ..

    ಅಯೋಧ್ಯೆ: ಇಡೀ ವಿಶ್ವವೇ ನಿರೀಕ್ಷಿಸುತ್ತಿದ್ದ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಮತ್ತು ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಸೋಮವಾರ ಅಭಿಜಿತ್ ಮುಹೂರ್ತದಲ್ಲಿ ಸಂಪನ್ನಗೊಂಡಿತು. ಮೈಸೂರಿನ ಅರುಣ್ ಯೋಗಿರಾಜ್ ಕೆತ್ತನೆಯಲ್ಲಿ ಮೂಡಿದ ಬಾಲರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವ ಸೋಮವಾರ (ಜ.22) ಮಧ್ಯಾಹ್ನ 12.29:03 ರಿಂದ 12.30.35ರ ನಡುವಿನ 84 ಸೆಕೆಂಡ್‌ಗಳ ಅವಧಿಯಲ್ಲಿ ನೆರವೇರಿತು. ಇದರೊಂದಿಗೆ ಭಾರತೀಯರ ಶತಮಾನಗಳ ಕನಸು ನನಸಾಯಿತು.

    ಇದನ್ನೂ ಓದಿ: ಬಾಲ ರಾಮನಿಗೆ ಪ್ರಧಾನಿ ಮೋದಿ ಸಾಷ್ಟಾಂಗ ನಮಸ್ಕಾರ

    ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಿತು. ಬೀಜಾಕ್ಷರಗಳ ಘೋಷಣೆಯೊಂದಿಗೆ ಶಂಖನಾದ ಮೊಳಗಿತು. ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನದ ಅಂತಿಮ ಘಟ್ಟದಲ್ಲಿ ಪ್ರಧಾನಿ ಭಕ್ತಿಯಿಂದ ಸ್ಪಾಷ್ಟಾಂಗ ಪ್ರಣಾಮ ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ ಪುಷ್ಪಾರ್ಚನೆ ನೆರವೇರಿದರು. ಪ್ರಾಣ ಪ್ರತಿಷ್ಠಾಪನೆಗಳ ವಿಧಿಗಳನ್ನು ಅತ್ಯಂತ ಭಕ್ತಿಯಿಂದ ನೆರವೇರಿಸಿದರು.

    ಬೆಳ್ಳಿಯ ಛತ್ರಿ ಇರಿಸಲಾದ ಕೆಂಪು ಮಡಿಸಿದ ದುಪಟ್ಟಾ ಹಿಡಿದು ಪ್ರಧಾನ ಮಂತ್ರಿಗಳು ದೇವಾಲಯದ ಆವರಣದೊಳಗೆ ನಡೆದರು. ಚಿನ್ನದ ಬಣ್ಣದ ಕುರ್ತಾವನ್ನು ಧರಿಸಿ ಕೆನೆ ಬಣ್ಣದ ಧೋತಿ ಮತ್ತು ಪಾಟ್ಕಾವನ್ನು ಧರಿಸಿ ಬಂದಿದ್ದ ಅವರು, “ಪ್ರಾಣ ಪ್ರತಿಷ್ಠಾ ಸಮಾರಂಭದ ಸಂಕಲ್ಪ” ಕೈಗೊಂಡು ಮುಂದಿನ ವಿಧಿ ವಿಧಾನಗಳನ್ನು ನೆರವೇರಿಸಲು ಗರ್ಭಗುಡಿಯೊಳಗೆ ಹೋದರು.

    ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಧಾರ್ಮಿಕ ವಿಧಿವಿಧಾನದ ವೇಳೆ ಗರ್ಭಗುಡಿಯೊಳಗೆ ಹಾಜರಿದ್ದರು.

    ಪ್ರಾಣ ಪ್ರತಿಷ್ಠಾ ಮಹೋತ್ಸವದ ಮುಹೂರ್ತ ಕಾಲದಲ್ಲೇ ಅಯೋಧ್ಯೆ ರಾಮ ಮಂದಿರದ ಮೇಲೆ ಭಾರತೀಯ ವಾಯುಪಡೆ ಹೆಲಿಕಾಪ್ಟರ್‌ ಹೂಮಳೆಗೆರೆಯಿತು.

    “ಅಯೋಧ್ಯಾ ಧಾಮದಲ್ಲಿ ಶ್ರೀ ರಾಮಲಲಾ ಪ್ರಾಣ ಪ್ರತಿಷ್ಠಾ ಕಾರ್ಯ ನೆರವೇರಿಸುವ ಈ ಸನ್ನಿವೇಶ ಎಲ್ಲರನ್ನೂ ಭಾವುಕರನ್ನಾಗಿಸುವ ಅಸಾಧಾರಣ ಕ್ಷಣವಾಗಿತ್ತು. ಈ ದಿವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ಸಂತೋಷ. ಶ್ರೀರಾಮನಿಗೆ ನಮನ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.

    ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಭವ್ಯ ರಾಮ ಮಂದಿರವು 380 ಅಡಿ ಉದ್ದ, 250 ಅಡಿ ಅಗಲ ಮತ್ತು 161 ಅಡಿ ಎತ್ತರವಿದೆ. 392 ಕಂಬಗಳು ಮತ್ತು ತೇಗದ ಮರದಿಂದ ನಿರ್ಮಿಸಲಾದ 44 ದ್ವಾರಗಳನ್ನು ಹೊಂದಿರುವ ಮೂರು ಅಂತಸ್ತಿನ ರಾಮ ಮಂದಿರಕ್ಕೆ ಜ.23ರಿಂದ ಸಾರ್ವಜನಿಕರು ಹೋಗಬಹುದು. ಬಾಲರಾಮನ ದರ್ಶನ ಪಡೆಯಬಹುದು.

    ಅಭೂತ ಪೂರ್ವ ರಾಮ ಮಂದಿರ ಉದ್ಘಾಟನೆ ಮತ್ತು ಬಾಲರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವದ ನೇರಪ್ರಸಾರವನ್ನು ದೇಶ ವಿದೇಶಗಳಲ್ಲಿ ಭಾರತೀಯರು ಕಣ್ತುಂಬಿಕೊಂಡರು. ದೂರದರ್ಶನ ಮತ್ತು ಇತರೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಕಾರ್ಯಕ್ರಮ ನೇರ ಪ್ರಸಾರವಾಗಿತ್ತು.

    ಬಿಜೆಪಿ ಆಡಳಿತವಿರುವ ರಾಜ್ಯಗಳು ಮತ್ತು ಒಡಿಶಾದಲ್ಲಿ ರಜೆ ಘೋಷಿಸಲಾಯಿತು. ಕೇಂದ್ರ ಸರ್ಕಾರ ಕೂಡ ಉದ್ಘಾಟನೆಯ ನಿಮಿತ್ತ ಮಧ್ಯಾಹ್ನ 2.30ರ ತನಕ ರಜೆ ಘೋಷಿಸಿತ್ತು.

    ಪ್ರಧಾನಿ ಮೋದಿಗೆ ಕಂಕಣ ಕಟ್ಟಿದ ಮಾಹಾಸಾಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts